• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಆರ್‌ಎಸ್ ಡ್ಯಾಂ ಮೇಲೆ ಜೀಪಿನಲ್ಲಿ ಮೋಜಿನ ಸವಾರಿ: ಪೊಲೀಸ್‌ ಅಧಿಕಾರಿ ಅಮಾನತು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮಾರ್ಚ್ 2: ಮಂಡ್ಯ ಸಮೀಪದ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಆಣೆಕಟ್ಟೆಯ ಮೇಲೆ ಯುವಕನೊಬ್ಬ ಸರ್ಕಾರಿ ಪೊಲೀಸ್ ಜೀಪಿನಲ್ಲಿ ಮೋಜಿನ ಸವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀಪ್ ನೀಡಿದ್ದ ಪೊಲೀಸ್‌ ಅಧಿಕಾರಿಯನ್ನು ಇದೀಗ ಅಮಾನತು ಮಾಡಲಾಗಿದೆ.

ಕೆಆರ್‌ಎಸ್ ಅಣೆಕಟ್ಟಿನ ಮೇಲೆ ಪೊಲೀಸ್ ಜೀಪ್ ಚಲಾಯಿಸುವುದಕ್ಕೆ ಅನುವು ಮಾಡಿ ಕೊಟ್ಟಿದ್ದು, ಜೀಪ್‌ನ ದುರ್ಬಳಕೆ ಆರೋಪದಡಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತೆಯ 3ನೇ ಪಡೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಎಸ್‌.ಬಿ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.

KRS ಡ್ಯಾಂ ಮೇಲೆ ಪೊಲೀಸ್ ವಾಹನ ಚಲಾಯಿಸಿದ ಯುವಕ: ಸಾಥ್ ನೀಡಿದ ಪೊಲೀಸ್ ಪೇದೆKRS ಡ್ಯಾಂ ಮೇಲೆ ಪೊಲೀಸ್ ವಾಹನ ಚಲಾಯಿಸಿದ ಯುವಕ: ಸಾಥ್ ನೀಡಿದ ಪೊಲೀಸ್ ಪೇದೆ

ಫೆ.9 ರಂದು ಸಂಜೆ 4 ಗಂಟೆ ಸುಮಾರಿಗೆ ಯುವಕ ಸರ್ಕಾರಿ ಜೀಪ್ ಚಲಾಯಿಸುತ್ತಿದ್ದರೆ ಪೊಲೀಸ್ ಅಧಿಕಾರಿ ಪಕ್ಕದಲ್ಲಿ ಕೂತು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದರು. ಈ ದೃಶ್ಯಾವಳಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಮಾಧ್ಯಮಗಳೂ ವರದಿ ಮಾಡಿದ್ದವು.

   ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ ವಿಚಾರ-ಡಿಕೆಶಿ -ಸಿದ್ದು ಜೊತೆ ಮಧು ಯಕ್ಷಿ ಗೌಡ ಪ್ರತ್ಯೇಕ ಸಮಾಲೋಚನೆ | Oneindia Kannada

   ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಆಣೆಕಟ್ಟೆಯ ಮೇಲೆ ಸಾರ್ವಜನಿಕರಿಗೆ ಸಂಚಾರ ನಿರ್ಬಂಧ ವಿಧಿಸಿದರೂ ಯುವಕ ಮೋಜಿನ ಸವಾರಿ ಮಾಡಲು ಅವಕಾಶ ನೀಡಲಾಗಿರುವುದರಿಂದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

   English summary
   A Police Inspector who was helped youth to fun jeep ride on KRS Dam has now been suspended.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X