ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್‌ಗೆ ಭಾರಿ ನೀರು; 100 ಅಡಿ ತಲುಪಿದ ನೀರಿನ ಮಟ್ಟ

|
Google Oneindia Kannada News

ಮಂಡ್ಯ, ಆಗಸ್ಟ್ 09 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ. ಆರ್. ಎಸ್. ಜಲಾಶಯಕ್ಕೆ ಭಾರಿ ಪ್ರಮಾಣ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೇವಲ ಒಂದೂವರೆ ದಿನದಲ್ಲಿ ಕೆ.ಆರ್. ಎಸ್. ಜಲಾಶಯದ ನೀರಿನ ಮಟ್ಟ 10 ಅಡಿ ಏರಿಕೆಯಾಗಿದೆ. ಜಲಾಶಯದಿಂದ ಸದ್ಯ 443 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ?ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ?

ಕೆ. ಆರ್. ಎಸ್. ಜಲಾಶಯದ ಗರಿಷ್ಟ ಮಟ್ಟ 124.80 ಅಡಿ. ಶುಕ್ರವಾರ ಸಂಜೆ ಜಲಾಶಯದಲ್ಲಿ 100.30 ಅಡಿ ನೀರಿನ ಸಂಗ್ರಹವಿದೆ. ಗುರುವಾರ 91 ಅಡಿ ಇದ್ದ ನೀರಿನ ಮಟ್ಟ, ಇಂದು ನೂರಕ್ಕೆ ಏರಿಕೆಯಾಗಿದೆ.

ಕಬಿನಿಯಿಂದ ನದಿಗೆ ಹೆಚ್ಚುವರಿ ನೀರು... ನಂಜನಗೂಡಲ್ಲಿ ಪ್ರವಾಹದ ಭಯಕಬಿನಿಯಿಂದ ನದಿಗೆ ಹೆಚ್ಚುವರಿ ನೀರು... ನಂಜನಗೂಡಲ್ಲಿ ಪ್ರವಾಹದ ಭಯ

Inflow To KRS Dam Rises : Water Storage Touched 100 Feet Mark

ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಜಲಾಶಯಕ್ಕೆ ಶುಕ್ರವಾರ ಮಧ್ಯಾಹ್ನ 63, 211 ಕ್ಯುಸೆಕ್ ನೀರು ಹರಿದು ಬರುತ್ತಿತ್ತು.

ಧಾರವಾಡ : 10 ವರ್ಷದಲ್ಲೇ ದಾಖಲೆ ಮಳೆ, 7650 ಕುಟುಂಬ ಸ್ಥಳಾಂತರಧಾರವಾಡ : 10 ವರ್ಷದಲ್ಲೇ ದಾಖಲೆ ಮಳೆ, 7650 ಕುಟುಂಬ ಸ್ಥಳಾಂತರ

ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಆದ್ದರಿಂದ, ಸಂಜೆಯ ವೇಳೆಗೆ ಕೆ. ಆರ್‌. ಎಸ್‌. ಜಲಾಶಯದ ಒಳ ಹರಿವಿನ ಪ್ರಮಾಣ 80 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆ ಇತ್ತು.

ಕಾವೇರಿ ಕೊಳ್ಳದ ಜಲಾಶಯಗಳ ಪೈಕಿ ಕೆ. ಆರ್. ಎಸ್. ಪ್ರಮುಖವಾದದ್ದು. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಜಲಾಶಯದ ಮೇಲೆ ಅವಲಂಬಿತವಾಗಿವೆ. ಬೆಂಗಳೂರಿಗೆ ಕುಡಿಯುವ ನೀರನ್ನು ಸಹ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ.

English summary
In a just one and half day Krishnaraja Sagar (KRS) dam received 10 feet road. KRS water-level has reached 100 feet on August 9, 2019. The inflow into the dam recorded 63, 211 cusec of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X