ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತಿಹಾಸದಲ್ಲಿ ಯಾರೂ ನನ್ನ ರೀತಿ ಸಾಲಮನ್ನಾ ಮಾಡಿಲ್ಲ: ಕುಮಾರಸ್ವಾಮಿ

|
Google Oneindia Kannada News

ಮಂಡ್ಯ, ಸೆ 26: " ರಾಜ್ಯ ಇತಿಹಾಸದಲ್ಲಿ ನನ್ನ ರೀತಿ ಯಾರೂ ರೈತರ ಸಾಲಮನ್ನಾ ಮಾಡಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

" ನನ್ನ ಟೀಕೆ ಮಾಡೋರಿಗೆ ಯೋಗ್ಯತೆ ಇದೆಯಾ. ಕೆ.ಆರ್.ಪೇಟೆ ತಾಲ್ಲೂಕಿನ 22 ಸಾವಿರ ರೈತ ಕುಟುಂಬದ ಸಾಲಮನ್ನಾ ಆಗಿದೆ. ಇತಿಹಾಸದಲ್ಲಿ ಯಾರು ನನ್ನ ರೀತಿ ಸಾಲಮನ್ನಾ ಮಾಡಿಲ್ಲ" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

ಕಂಬಿ ಹಿಂದೆ 'ಕನಕಪುರ ಬಂಡೆ': ಸಿದ್ದರಾಮಯ್ಯ ಪ್ಲಾನ್ ಫುಲ್ ಸಕ್ಸಸ್: ರಾಮುಲು ಸ್ಫೋಟಕ ಹೇಳಿಕೆಕಂಬಿ ಹಿಂದೆ 'ಕನಕಪುರ ಬಂಡೆ': ಸಿದ್ದರಾಮಯ್ಯ ಪ್ಲಾನ್ ಫುಲ್ ಸಕ್ಸಸ್: ರಾಮುಲು ಸ್ಫೋಟಕ ಹೇಳಿಕೆ

" ಸಿದ್ದರಾಮಯ್ಯ ಮಾಡಿದ ಸಾಲಮನ್ನಾ ಚೆನ್ನಾಗಿದೆಯಂತೆ, ನಾನು ಮಾಡಿದ್ದು ಸರಿ ಇಲ್ಲವಂತೆ. ನಾನು 14 ತಿಂಗಳು ಮಾಡಿದ ಕಾರ್ಯದ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು,

In History No One Is Did The Loan Waive Of Farmers Like Me: HD Kumaraswamy

" ಮಂಡ್ಯ ಜನ ಸ್ವಾಭಿಮಾನ ಉಳಿಸಿದರು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಮಂಡ್ಯ ಜಿಲ್ಲೆಯ ರೈತರ ಕಬ್ಬು ಖರೀದಿ ಮಾಡುವವರು ಯಾರೂ ಇಲ್ಲ. ಅದರ ಬಗ್ಗೆ ಸಿದ್ದರಾಮಯ್ಯಗೆ ಚಿಂತೆ ಇಲ್ಲವೇ' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

" ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದ್ದರೆ, ಕಟಾವಿಗೆ ಬಂದಿರುವ ಕಬ್ಬು ಮಾರಾಟ ಮಾಡಿಸಿ. ಸಿದ್ದರಾಮಯ್ಯಗೆ ನಾನೇನು ವಿಶ್ವಾಸ ದ್ರೋಹ ಮಾಡಿಲ್ಲ. ಅದನ್ನು ಜನ ತೀರ್ಮಾನ ಮಾಡುತ್ತಾರೆ" ಎಂದು ಸಿದ್ದರಾಮಯ್ಯಗೆ, ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಸಭೆಯಲ್ಲಿ ಕಾಣಿಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, " ಅವರು ಬಿಡ್ರೀ.. ಎಲ್ಲಾ ಪಾರ್ಟಿಲೂ ಇರುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ, ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಬುಧವಾರ (ಸೆ 25) ವಿಧಿವಶರಾದ ತಾಲೂಕು ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇ ಗೌಡರ ಅಂತಿಮ ದರ್ಶನವನ್ನು ಪಡೆಯಲು ಕುಮಾರಸ್ವಾಮಿ ಆಗಮಿಸಿದ್ದರು.

English summary
In History No One Is Did The Loan Waive Of Farmers Like Me, said, Former Chief Minister of Karnataka HD Kumaraswamy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X