ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಘೋಷಣೆಯ ಮಂಡ್ಯದ ಅಭಿವೃದ್ಧಿ ಹೇಗಿರಲಿದೆ ಗೊತ್ತಾ?

|
Google Oneindia Kannada News

ಮೈಸೂರು, ಫೆಬ್ರವರಿ 21: ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಜೊತೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಲಾಭವಾಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ವಿವಿಧ ಯೋಜನೆಗಳಿಗೆ 5ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಸಂಬಂಧ ಅಭಿವೃದ್ಧಿ ಕಾಮಗಾರಿಗಳಿಗೆ ಫೆ.27ರಂದು ಚಾಲನೆ ನೀಡಲಿದ್ದಾರೆ.

ಈಗಾಗಲೇ ಈ ಸುದ್ದಿ ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಕೇವಲ ಮಂಡ್ಯ ಮತ್ತು ಹಾಸನಕ್ಕೆ ಮಾತ್ರ ಮುಖ್ಯಮಂತ್ರಿನಾ ಎಂಬ ಪ್ರಶ್ನೆಗಳನ್ನು ಜನ ಕೇಳತೊಡಗಿದ್ದಾರೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

ರಾಜ್ಯದಲ್ಲಿ ಹಲವಾರು ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಆ ಜಿಲ್ಲೆಗಳನ್ನು ಪರಿಗಣಿಸದೆ ಕೇವಲ ಮಂಡ್ಯಕ್ಕೆ ಮಾತ್ರ ಒತ್ತು ನೀಡುತ್ತಿರುವುದೇಕೆ? ಮಂಡ್ಯಕ್ಕೆ ಹೆಚ್ಚು ಅನುದಾನ ನೀಡಿ ಬೇಸರವಿಲ್ಲ. ಆದರೆ ಇತರೆ ಜಿಲ್ಲೆಗಳಿಗೂ ಸ್ವಲ್ಪ ಮಟ್ಟಿಗಾದರೂ ಗಮನಹರಿಸಿ ಎಂಬುದು ಎಲ್ಲರ ಒಕ್ಕೊರಲಿನ ಒತ್ತಾಯವಾಗಿದೆ.

ಇಷ್ಟಕ್ಕೂ ಮಂಡ್ಯದಲ್ಲಿ ಮುಖ್ಯಮಂತ್ರಿಗಳು ನೀಡಿದ ಅನುದಾನ ಮತ್ತು ಅಲ್ಲಿ ನಡೆಯಲಿರುವ ಕಾಮಗಾರಿಗಳೇನು ಎಂಬುದರ ಸಮಗ್ರ ವಿವರವನ್ನು ಇಲ್ಲಿ ನೋಡಬಹುದಾಗಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಕೈ'ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಕೈ'ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!

ಲೋಕೋಪಯೋಗಿ ಇಲಾಖೆಯಲ್ಲಿ 602 ಕೋಟಿ ರೂ. ವೆಚ್ಚದಲ್ಲಿ ಜಿ ರಸ್ತೆ, ಎಸ್ಸಿಪಿಸಿ, ಪ್ರಾಥಮಿಕ ಶಾಲೆಗಳ ನಿರ್ಮಾಣ, ಇತ್ಯಾದಿ, ಸೆಸ್ಕಾಂ ಇಲಾಖೆ ಮೂಲಕ 212 ಕೋಟಿ ರೂ. ವೆಚ್ಚದಲ್ಲಿ 10,333 ಟಿಸಿಗಳನ್ನು ಅಳವಡಿಸುವ ಕಾಮಗಾರಿ, ಕೆಪಿಟಿಸಿಎಲ್ ಮೂಲಕ 180 ಕೋಟಿ ರೂ. ವೆಚ್ಚ ಮಾಡಿ ಸಬ್ ಸ್ಟೇಷನ್ ಗಳ ನಿರ್ಮಾಣ, ಜಿಲ್ಲಾಸ್ಪತ್ರೆ ಸಮಗ್ರ ಅಭಿವೃದ್ಧಿಗೆ 30 ಕೋಟಿ ರೂ. ಅಷ್ಟೇ ಅಲ್ಲ ಇನ್ನು ಅಗತ್ಯಬಿದ್ದರೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುತ್ತದೆ ಮುಂದೆ ಓದಿ...

 ಶಾಶ್ವತ ಕುಡಿಯುವ ನೀರು ಯೋಜನೆ

ಶಾಶ್ವತ ಕುಡಿಯುವ ನೀರು ಯೋಜನೆ

ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿಗಾಗಿ ಮೇಲುಕೋಟೆ, ಶ್ರೀರಂಗಪಟ್ಟಣ ಅಭಿವೃದ್ಧಿಯೂ ಸೇರಿದಂತೆ 40 ರಿಂದ 50 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಕೆಗೆ ಸೂಚನೆ, ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ 56 ಕೋಟಿ ರೂ. ಬಿಡುಗಡೆ, ಜಲಧಾರೆ ಯೋಜನೆಯಲ್ಲಿ 1300 ಕೋಟಿ ರೂ. ವೆಚ್ಚ ಮಾಡಿ ಶಾಶ್ವತ ಕುಡಿಯುವ ನೀರು ಯೋಜನೆಗೆ ಜಿಲ್ಲೆಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

 ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ

ಕ್ರೀಡಾ ಇಲಾಖೆ ಅಭಿವೃದ್ಧಿಗೆ 15 ಕೋಟಿ ರೂ. ಬಿಡುಗಡೆ,. ಮಂಡ್ಯ ಸರ್. ಎಂವಿ ಕ್ರೀಡಾಂಗಣ ಅಭಿವದ್ಧಿಗೆ 2ಕೋಟಿ, ಮಳವಳ್ಳಿ ತಾಲೂಕಿನ ಹಲಗೂರು ಸುತ್ತಮುತ್ತ ನೀರಾವರಿ ಯೋಜನೆ ಕಾಮಗಾರಿಗಾಗಿ 600 ಕೋಟಿ ರೂ. ವೆಚ್ಚದಲ್ಲಿ ಯೋಜನೆ, ವಿ.ಸಿ.ಫಾರಂನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಫಾರ್ಮ್ ನಿರ್ಮಾಣ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗಾಗಿ ಸುಮಾರು 1600 ಕೋಟಿ ರೂ, ಸಾತನೂರು ಫಾರ್ಮ್ ನಲ್ಲಿ 450 ಕೋಟಿ ರೂ ವೆಚ್ಚದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆಅಭಿಮಾನಿಗಳ ಆಸೆ ಸೋಲಬಾರದು, ರಾಜಕೀಯ ಪ್ರವೇಶ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

 ಪಿಎಸ್ ಎಸ್ ಕೆಗೆ 50 ಕೋಟಿ ರೂ.

ಪಿಎಸ್ ಎಸ್ ಕೆಗೆ 50 ಕೋಟಿ ರೂ.

ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ. ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ 50 ಕೋಟಿ ರೂ. ನೀಡಲಾಗಿದೆ. ರಾಗಿ ಖರೀದಿ ಕೇಂದ್ರಕ್ಕೂ ಹಣ ಬಿಡುಗಡೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಚುಂಚನಕಟ್ಟೆ ಶ್ರೀ ರಾಮಕಾರ್ಖಾನೆಗಳ ಪುನಶ್ಚೇತನ, ಪಾಂಡವಪುರ ಪಿಎಸ್ ಎಸ್ ಕೆಗೆ 50 ಕೋಟಿ ರೂ. ಘೋಷಿಸಲಾಗಿದೆ.

 ಮಂಡ್ಯ ಸಮಗ್ರ ಅಭಿವೃದ್ಧಿ!

ಮಂಡ್ಯ ಸಮಗ್ರ ಅಭಿವೃದ್ಧಿ!

ಕೈಗಾರಿಕಾ ಅಭಿವೃದ್ಧಿಗಾಗಿ ಬೆಳ್ಳೂರು ಬಳಿ ಸಾವಿರ ಎಕರೆ ಭೂಮಿಯನ್ನು ಕೆಐಡಿಬಿ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿ ಕೈಗಾರಿಕೆ ಅಭಿವೃದ್ಧಿ, ಮದ್ದೂರು, ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ, ಮದ್ದೂರಿನ ಒಳಚರಂಡಿ ವ್ಯವಸ್ಥೆಗೆ 190 ಕೋಟಿ ರು. ಪ್ರಸ್ತಾವನೆ ಹೀಗೆ ಜಿಲ್ಲೆಯ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದಿದ್ದೇ ಆದರೆ ಮಂಡ್ಯ ಸಮಗ್ರ ಅಭಿವೃದ್ಧಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.

 ಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ

English summary
CM Kumaraswamy released a grant of Rs 5,000 crore to various projects in Mandya district.If this comes into effect, Mandya will be fully developed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X