ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸೇರುವ ಬಗ್ಗೆ ಸುಮಲತಾ ಹೇಳಿದ್ದು ಹೀಗೆ

|
Google Oneindia Kannada News

Recommended Video

Lok Sabha Elections 2019 : ಗೆದ್ದ ಮೇಲೆ ಬಿಜೆಪಿ ಸೇರ್ತಾರೆ ಸುಮಲತಾ ?

ಮಂಡ್ಯ, ಏಪ್ರಿಲ್ 05: ಬಿಜೆಪಿ ಸೇರುವ ಯಾವುದೇ ಪ್ರಸ್ತಾಪ ಇಲ್ಲ, ಪಕ್ಷ ಸೇರಬೇಕೆಂಬ ಷರತ್ತು ಹಾಕಿ ಬಿಜೆಪಿ ನನಗೆ ಬೆಂಬಲಿಸಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಗರದಲ್ಲಿ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯದ ಬೆಳವಣಿಗೆಗಳನ್ನು ನೋಡಿ ಬಿಜೆಪಿ ನಮಗೆ ಬೆಂಬಲ ನೀಡಿದೆ, ಪಕ್ಷ ಸೇರಬೇಕೆಂದು ಷರತ್ತು ವಿಧಿಸಿಲ್ಲ ಎಂದು ಅವರು ಹೇಳಿದರು.

ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮೂರು:ಜಾತಿ, ಜಾತಿ ಮತ್ತು ಜಾತಿ!ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮೂರು:ಜಾತಿ, ಜಾತಿ ಮತ್ತು ಜಾತಿ!

ಗೆದ್ದರೆ ನಾನು ಬಿಜೆಪಿ ಸೇರುತ್ತೇನೆ ಎಂಬ ಸುದ್ದಿ ಕೇವಲ ಊಹಾಪೋಹ ಅಷ್ಟೆ, ಕಾಂಗ್ರೆಸ್ ನನ್ನ ಮೊದಲ ಆದ್ಯತೆ ಆಗಿತ್ತು, ಅಲ್ಲಿಂದ ನನಗೆ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರವಾಗಿ ಸ್ಪರ್ಧಿಸಿದ್ದೇನೆ ಎಂದು ಸುಮಲತಾ ಅವರು ಹೇಳಿದರು.

I will not join BJP, they supporting me unconditionally: Sumalatha

ಗೆದ್ದ ನಂತರ ಬಿಜೆಪಿಗೆ ಸೇರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಯಡಿಯೂರಪ್ಪ ಅವರು ಸಹ ಹೇಳಿದ್ದಾರೆ ಎಂದ ಅವರು, ಬಿಜೆಪಿಗೆ ಸೇರುವುದಿದ್ದರೆ ಈಗಾಗಲೇ ನಾನು ಪಕ್ಷ ಸೇರಿಬಿಡಬಹುದಿತ್ತು, ಮುಂದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೆ ನಿಮ್ಮನ್ನು ಕೇಳಿಯೇ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅವರು ಮುಸ್ಲಿಂ ಮುಖಂಡರಿಗೆ ಭರವಸೆ ನೀಡಿದರು.

I will not join BJP, they supporting me unconditionally: Sumalatha

ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ? ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ?

ಮುಸ್ಲಿಂ ಸಭೆಯಲ್ಲಿ ಸುಮಲತಾ ಅವರು ಉರ್ದುವಿನಲ್ಲೇ ಮಾತನಾಡಿ ಮತ ಯಾಚಿಸಿದ್ದು ವಿಶೇಷವಾಗಿತ್ತು.

English summary
Sumalatha Ambareesh said, i am not joining BJP, my first preference was congress, they did not gave me ticket so i contesting as independent. BJP supporting me unconditionally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X