ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಕಳ್ಳರ ಪಕ್ಷ ಅಂದಿಲ್ಲ, ನನಗೆ ಅಲ್ಲಿಯೂ ಸ್ನೇಹಿತರಿದ್ದಾರೆ: ಯಶ್

|
Google Oneindia Kannada News

Recommended Video

ನಟ ಯಶ್ ಎಚ್ ಡಿ ಕುಮಾರಸ್ವಾಮಿ ಬಗ್ಗೆ ಹೇಳಿದ್ದು ಹೀಗೆ | Oneindia Kannada

ಮಂಡ್ಯ, ಏಪ್ರಿಲ್ 16: ಯಶ್, ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿದ್ದಾರೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಯಶ್ ಪ್ರತಿಕ್ರಿಯಿಸಿದ್ದು, ನಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಜೆಡಿಎಸ್ ಕಳ್ಳರ ಪಕ್ಷ ಎಂದು ನಾನು ಎಲ್ಲಿಯೂ ಹೇಳಿಲ್ಲ, ನನಗೆ ಜೆಡಿಎಸ್‌ನಲ್ಲೂ ಸ್ನೇಹಿತರಿದ್ದಾರೆ, ನಾನು ಜೆಡಿಎಸ್‌ ಬಗ್ಗೆ ಹಾಗೆ ಹೇಳಿದ್ದೇ ಆದಲ್ಲಿ ಸಾಕ್ಷ್ಯ ನೀಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನಟ ಯಶ್ ಹೇಳಿದ್ದಾರೆ.

ಸುಮಲತಾ ನಾಯ್ಡು ಅಂದಿದ್ದ ಜೆಡಿಎಸ್, ಮೊರೆ ಹೋಗಿದ್ದು ಚಂದ್ರಬಾಬು ನಾಯ್ಡುಗೆ ಸುಮಲತಾ ನಾಯ್ಡು ಅಂದಿದ್ದ ಜೆಡಿಎಸ್, ಮೊರೆ ಹೋಗಿದ್ದು ಚಂದ್ರಬಾಬು ನಾಯ್ಡುಗೆ

ನಾನು ಯಾವ ಪಕ್ಷದ ವಿರುದ್ಧವೂ ಅಲ್ಲ, ಹಾಗೊಂದು ವೇಳೆ ಇದ್ದಿದ್ದರೆ ನಾನೇಕೆ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದೆ ಎಂದು ಯಶ್ ಕೇಳಿದ್ದಾರೆ.

I did not talked anything bad about JDS party: Actor Yash

ಈ ವಿಷಯದಲ್ಲಿ ಯಾರೋ ಕುಮಾರಸ್ವಾಮಿ ಅವರಿಗೆ ಚಾಡಿ ಹೇಳಿ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾರೆ, ಚುನಾವಣೆ ಸಮಯದಲ್ಲಿ ಅವರು ಬ್ಯುಸಿಯಾಗಿದ್ದಾರೆ, ಚುನಾವಣೆ ಮುಗಿದ ನಂತರ ಸತ್ಯಾಸತ್ಯತೆಗಳನ್ನು ಅವರೇ ತಿಳಿದುಕೊಳ್ಳಲಿ ಎಂದು ಯಶ್ ಅವರು ಹೇಳಿದ್ದಾರೆ.

ಮಂಡ್ಯಕ್ಕೆ ರಾಹುಲ್ ಬಂದು ಹೋದರೇನಂತೆ, 'ರೆಬೆಲ್' ಗಳು ಬಂದಿಲ್ಲವೇ! ಅದೇ ತಾನೇ ಮ್ಯಾಟರ್ಮಂಡ್ಯಕ್ಕೆ ರಾಹುಲ್ ಬಂದು ಹೋದರೇನಂತೆ, 'ರೆಬೆಲ್' ಗಳು ಬಂದಿಲ್ಲವೇ! ಅದೇ ತಾನೇ ಮ್ಯಾಟರ್

ನಾನು ಆಡದೇ ಇರುವ ಮಾತಿನ ಬಗ್ಗೆ ನಾನು ಒಪ್ಪಿಕೊಳ್ಳುವುದಿಲ್ಲ, ಅವರ ಪಕ್ಷದಲ್ಲಿಯೇ ಬೇರೆ, ಬೇರೆ ರೀತಿ ಮಾತನಾಡುತ್ತಿದ್ದಾರೆ. ಅಲ್ಲದೆ ನಾನು ಯಾವ ಪಕ್ಷದ ವಿರುದ್ಧವೂ ಮಾತನಾಡುವುದಿಲ್ಲ ಎಂದು ಯಶ್ ಹೇಳಿದ್ದಾರೆ.

ಕುಮಾರಸ್ವಾಮಿ, ದೇವೇಗೌಡರನ್ನು ಮನೆಯಿಂದ ಹೊರ ಹಾಕಿದ್ದರು: ಮಾಧುಸ್ವಾಮಿ ಕುಮಾರಸ್ವಾಮಿ, ದೇವೇಗೌಡರನ್ನು ಮನೆಯಿಂದ ಹೊರ ಹಾಕಿದ್ದರು: ಮಾಧುಸ್ವಾಮಿ

'ಯಶ್, ಜೆಡಿಎಸ್ ಅನ್ನು ಕಳ್ಳರ ಪಕ್ಷ ಎಂದು ಕರೆದಿದ್ದಾರೆ' ಎಂದು ಕುಮಾರಸ್ವಾಮಿ ನಿನ್ನೆ ಮಂಡ್ಯದಲ್ಲಿ ನಡೆದ ಸಭೆಯೊಂದರಲ್ಲಿ ವಾಗ್ದಾಳಿ ನಡೆಸಿದ್ದರು.

English summary
I did not talked anything bad about JDS party said actor Yash. CM Kumaraswamy accused that actor Yash said JDS is a thieves party, but Yash denied it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X