ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಸುಮ್ಮನಿರುವುದು ಇದೇ ಕಾರಣಕ್ಕಾಗಿ : ಡಿ ಕೆ ಶಿವಕುಮಾರ್

|
Google Oneindia Kannada News

ಮಂಡ್ಯ, ಜೂನ್ 24: ನಾನು ಮಹಾತ್ಮ ಗಾಂಧಿಯ ಅನುಯಾಯಿ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆಂದು ಒಂದು ತಿಂಗಳ ಹಿಂದೆ ಹೇಳಿದ್ದ, ಜನಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್, ಮತ್ತೆ ತಾವ್ಯಾಕೆ ಪಕ್ಷದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ ಎನ್ನುವುದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಡಿ ಕೆ ಶಿವಕುಮಾರ್, ನನ್ನ ಪಕ್ಷದ ವರಿಷ್ಠರ ಅಣತಿಯಂತೆ ಸುಮ್ಮನಿದ್ದೇನೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯನವರು ಮಾತನಾಡದಂತೆ ಸೂಚಿಸಿದ್ದಾರೆಂದು ಡಿಕೆಶಿ ಹೇಳಿದರು.

ಶಿವಕುಮಾರ್ ಎಲ್ಲಿದೀಯಪ್ಪ...? ಡಿಕೆಶಿಗೆ ಕಾಲೆಳೆದ ಶ್ರೀರಾಮುಲುಶಿವಕುಮಾರ್ ಎಲ್ಲಿದೀಯಪ್ಪ...? ಡಿಕೆಶಿಗೆ ಕಾಲೆಳೆದ ಶ್ರೀರಾಮುಲು

ಪಕ್ಷದ ನಾಯಕರ ನಿರ್ದೇಶನದಂತೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೇನೆ. ನೀವೂ ಒಂದು ಪ್ಲಾಸ್ಟರ್ ಕೊಟ್ಟರೆ, ಅದನ್ನೂ ಹಾಕಿಕೊಳ್ಳುತ್ತೇನೆಂದು ಮಾಧ್ಯಮದವರನ್ನು ಉದ್ದೇಶಿಸಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

I am keeping quite, because of instruction from party leaders : DK Shivakumar

ಸಮಯ, ಸಂದರ್ಭ ಬಂದಾಗ ಶ್ರೀರಾಮುಲು ಅಣ್ಣನ ಪ್ರಶ್ನೆಗೆ ಉತ್ತರಿಸುತ್ತೇನೆ, ಈಗ ಆ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. "ಶಿವಕುಮಾರ್ ಎಲ್ಲಿದೀಯಪ್ಪ..." ಎಂದು ಜನರು ನಿಮ್ಮನ್ನು ಲೇವಡಿ ಮಾಡುತ್ತಿದ್ದಾರೆ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ ಶ್ರೀರಾಮುಲು. ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದರು.

ಲೋಕಸಭಾ ಚುನಾವಣಾ ಫಲಿತಾಂಶದ ಎಲ್ಲಾ ಅಪ್ಡೇಟ್ಸ್ ಗಳು ನನ್ನಲ್ಲಿದ್ದು, ಎಲ್ಲಾ ವಿಷಯಗಳನ್ನು ಅರಿತಿದ್ದೇನೆ. 'ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ' ಎಂದು ಡಿ ಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು.

ಮಂಡ್ಯದ ರೈತರಿಂದ ಸಚಿವ ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆಮಂಡ್ಯದ ರೈತರಿಂದ ಸಚಿವ ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆ

ಕಾವೇರಿ ನದಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಜೂನ್ 25ರಂದು ಸಭೆ ಕರೆದಿದ್ದು, ಈ ಸಂಬಂಧವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರೈತರಿಗೆ ಡಿಕೆಶಿ ಭರವಸೆ ನೀಡಿದರು. ತಮ್ಮ ನಾಲೆಗಳಿಗೆ ನೀರು ಹರಿಸುವಂತೆ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರೈತರು ಡಿಕೆಶಿ ಕಾರಿಗೆ ಮುತ್ತಿಗೆ ಹಾಕಿದ್ದರು.

English summary
I am keeping quiet, because of instruction from KPCC President Dinesh Gundu Rao and Siddaramaiah: Minister DK Shivakumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X