ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಕ್ಕಾ ಪ್ರವಾಸಕ್ಕೆ ತೆರಳಿದ ಮಂಡ್ಯದ ಮುಸ್ಕಾನ್ ಕುಟುಂಬ

|
Google Oneindia Kannada News

ಮಂಡ್ಯ ಮೇ 12​: ಹಿಜಾಬ್ ವಿವಾದ ವಿಚಾರಕ್ಕೆ ಏಕಾಏಕಿ ಸ್ಟಾರ್ ಆದ ವಿದ್ಯಾರ್ಥಿನಿ ಮುಸ್ಕಾನ್‌ ಮತ್ತವರ ಕುಟುಂಬ ವಿದೇಶಕ್ಕೆ ಹಾರಿದೆ. ಮದೀನಾದಿಂದ ಅವರ ತಂದೆ ಹುಸೇನ್ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ರಂಜಾನ್ ಪ್ರಯುಕ್ತ ಕುಟುಂಬ ಸಮೇತ ಮುಸ್ಕಾನ್ ಕುಟುಂಬ ವಿದೇಶಕ್ಕೆ ತೆರಳಿದೆ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡದೆ ಇರುವುದು ಸದ್ಯ ಅನುಮಾನಗಳಿಗೆ ಎಡೆ ಮಾಡಿದೆ. ಪೊಲೀಸರು ಮುಸ್ಕಾನ್ ಮನೆ ಬಳಿ ತೆರಳಿ ವಿಚಾರಿಸಿದಾಗಲೇ, ಕುಟುಂಬ ಸಮೇತ ಅವರು ವಿದೇಶಕ್ಕೆ ತೆರಳಿದ ವಿಚಾರ ತಿಳಿದಿದೆ. ಇತ್ತ ಮೇ ತಿಂಗಳ ಅಂತ್ಯದಲ್ಲಿ ಮುಸ್ಕಾನ್ ಕುಟುಂಬ ವಿದೇಶದಿಂದ ವಾಪಸ್ ಆಗಲಿದ್ದು, ಬಂದ ತಕ್ಷಣವೇ ಪೋಲಿಸ್ ಠಾಣೆ ಬರಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ‌. ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಅಲ್ಲಾ ಹು ಅಕ್ಬರ್ ಕೂಗಿದ್ದ ಮುಸ್ಕಾನ್ ಸದ್ಯ ವಿದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ(ಫೆಬ್ರವರಿ) ಉಡುಪಿಯ ಕಾಪು ತಾಲೂಕಿನಲ್ಲಿ ಹುಟ್ಟಿಕೊಂಡ ಹಿಜಾಬ್‌ ವಿವಾದದ ಕೂಸು, ನಂತರ ಜಿಲ್ಲೆಯ ಇತರ ಭಾಗಗಳಿಗೂ ವ್ಯಾಪಿಸಿ ಅಲ್ಲಿಂದ ರಾಜ್ಯದೆಲ್ಲಡೆ ಹರಿದಾಡಿ, ದೇಶದಲ್ಲಿ ಟ್ರೆಂಡಿಂಗ್ ನಲ್ಲಿ ಸುದ್ದಿಮಾಡಿ ರಾಜ್ಯದ ಸರಕಾರದ ಮಾನಮರ್ಯಾದೆಯನ್ನು ಅಡಕತ್ತರಿಯಲ್ಲಿ ನಿಲ್ಲಿಸಿತ್ತು.

ಇಸ್ಲಾಮಿನ 'ಸಿಂಹಿಣಿ'

ಇಸ್ಲಾಮಿನ 'ಸಿಂಹಿಣಿ'

ತರಗತಿಯಲ್ಲಿ ಕೇಸರಿ ಶಾಲು ಧರಿಸಲು ಮತ್ತು ಹಿಜಾಬ್‌ ಧರಿಸಲು ಅನುಮತಿ ಕೋರಿ ನಡೆದ ಗಲಾಟೆ ಇದು. ಈ ಗಲಾಟೆಯಲ್ಲಿ ಹತ್ತಾರು ಯುವಕರ ಗುಂಪು 'ಜೈ ಶ್ರೀ ರಾಮ್' ಘೋಷಣೆ ನಡುವೆ ಹಿಜಾಬ್ ಪರ ಮುಸ್ಕಾನ್ ಎಂಬ ವಿದ್ಯಾರ್ಥಿನಿ 'ಅಲ್ಲಾ ಹು ಅಕ್ಬರ್' ಎಂದು ಕೂಗಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಇವರು ಮಂಡ್ಯ ಪಿಇಎಸ್ ಕಾಲೇಜು ವಿದ್ಯಾರ್ಥಿನಿ. ಇವರು ಅಸೈನ್ಮೆಂಟ್ ಸಲ್ಲಿಸಲು ಕಾಲೇಜಿಗೆ ಹೋಗಿದ್ದಾಗ ಕೆಲವರು ಸುತ್ತುವರಿದು ಬುರ್ಖಾ ತೆಗೆಯುವವರೆಗೂ ಬಿಡುವುದಿಲ್ಲ ಎಂದು ಹೇಳಿದರು. ಬುರ್ಖಾ ತೆಗೆಯಲು ನಿರಾಕರಿಸಿ ಕಾಲೇಜು ಕ್ಯಾಂಪಸ್ ಒಳಗೆ ಹೊರಟಿದ್ದಾಳೆ. ನಂತರ ಹುಡುಗರ ಗುಂಪು ಅವರನ್ನು ಹಿಂಬಾಲಿಸಿ 'ಜೈ ಶ್ರೀ ರಾಮ್' ಎಂದು ಕೂಗಲು ಪ್ರಾರಂಭಿಸಿದೆ. ಇದಕ್ಕೆ ವಿದ್ಯಾರ್ಥಿನಿ 'ಅಲ್ಲಾ ಹು ಅಕ್ಬರ್' ಎಂದು ಕೂಗಿದ್ದಾಳೆ. ಇದೊಂದೆ ಉತ್ತರ ಆಕೆಯ ಬಗ್ಗೆ ಭಾರತದಿಂದ ಪಾಕಿಸ್ತಾನದವರೆಗೆ ಚರ್ಚೆ ಕಾರಣವಾಗಿದೆ. ಇದೇ ಕಾರಣಕ್ಕೆ ಮುಸ್ಕಾನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾತ್ರವಲ್ಲದೆ ಹಲವು ಪಾಕಿಸ್ತಾನಿ ಸಂಘಟನೆಗಳು ಆಕೆಯನ್ನು ಇಸ್ಲಾಮಿನ 'ಸಿಂಹಿಣಿ' ಎಂದು ಕರೆದಿವೆ.

ರಾಜಕಾರಣಿಗಳಿಂದ ಬೆಂಬಲ

ರಾಜಕಾರಣಿಗಳಿಂದ ಬೆಂಬಲ

ಈ ಘಟನೆ ಬಳಿಕ ವೈರಲ್ ಆದರ ಮುಸ್ಕಾನ್‌ಗೆ ಮುಸ್ಲಿಂ ಮುಖಂಡರಿಂದ ಉಡುಗೊರೆಗಳು ಹರಿದು ಬಂದಿವೆ. ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಭೇಟಿ ನೀಡಿದ ಮುಸ್ಲಿಂ ಮುಖಂಡರು ಆಕೆಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. ಆ ವೇಳೆ ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಎಂಎಲ್‌ಸಿ ಸಿಎಂ ಇಬ್ರಾಹಿಂ ಅವರು ಉಡುಗೊರೆ ನೀಡಿದ್ದಾರೆ. ಉಡುಗೊರೆ ನೀಡುವ ಮೂಲಕ ಧಾರ್ಮಿಕ ಯುದ್ಧಕ್ಕೆ ರಾಜಕಾರಣಿಗಳು ಪುಷ್ಠಿ ನೀಡುತ್ತಿದ್ದಾರೆನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ''ಒಬ್ಬ ಹುಡುಗಿ ಅಷ್ಟು ಜನ ಬಂದಾಗ ದಿಟ್ಟತನದಿಂದ ನಿಂತಳು. ಅದನ್ನು ಮೆಚ್ಚಿ ಉಡುಗೊರೆ ಕೊಟ್ಟರೆ ತಪ್ಪೇನಿದೆ. ನನಗೂ ಹೆಣ್ಣುಮಕ್ಕಳಿದ್ದಾರೆ. ಆಕೆಯ ಧೈರ್ಯವನ್ನು ಮೆಚ್ಚಿ ಉಡುಗೊರೆ ನೀಡಿದ್ದೇನೆ. ಆಕೆ ಕೂಗಿದ್ದು ಮಾತ್ರ ಪ್ರಚೋದನೆ ಆಗುತ್ತಾ? ಜೈ ಶ್ರೀರಾಮ್ ಅನ್ನೋದು ಪ್ರಚೋದನೆ ಆಗಲ್ವಾ. ಹರಹರ ಮಹದೇವ್ ಎನ್ನುತ್ತಾರೆ ಅದು ಪ್ರಚೋದನೆನಾ?'' ಎಂದು ಎಂಎಲ್‌ಸಿ ಸಿಎಂ ಇಬ್ರಾಹಿಂ ಮರು ಪ್ರಶ್ನೆ ಮಾಡಿದ್ದರು.

5 ಲಕ್ಷ ರೂ. ಬಹುಮಾನ ಘೋಷಣೆ

5 ಲಕ್ಷ ರೂ. ಬಹುಮಾನ ಘೋಷಣೆ

ಮಾತ್ರವಲ್ಲದೇ ರಾಜ್ಯದ ಮತ್ತು ಬೇರೆ ಬೇರೆ ರಾಜ್ಯದ ಮುಸ್ಲಿಂ ಮುಖಂಡರು ವಿದ್ಯಾರ್ಥಿಯ ಧೈರ್ಯವನ್ನು ಮೆಚ್ಚಿ ಖಾಸಗಿ ಗಿಫ್ಟ್‌ಗಳನ್ನು ನೀಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ. ಇನ್ನೂ ಇಂದು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್​ ಮನೆಗೆ ಮಹಾರಾಷ್ಟ್ರ ರಾಜ್ಯದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ಧಿಕಿ ಭೇಟಿ ನೀಡಿದ್ದರು. ಈ ವೇಳೆ ಮುಸ್ಕಾನ್​ಗೆ ಐಪೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದ್ದರು.

ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಶಾಸಕ, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೀಶನ್ ಸಿದ್ಧಿಕಿ, '' ಈ ಬಗ್ಗೆ ನನಗೆ ಗೊತ್ತಾಯ್ತು. ಆಗ ತುಂಬಾ ಗರ್ವ ಅನಿಸಿತು. ಅಷ್ಟು ಜನ ಅವರ ಎದುರು ಇದ್ದರೂ ಅಲ್ಲಾಹು ಅಕ್ಬರ್ ಅಂತ ಕೂಗಿದ್ದಾರೆ. ಹಿಜಾಬ್ ಹಾಕಿಕೊಳ್ಳೋದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತೆ. ಎಲ್ಲಾ ಮಹಿಳೆಯರು ಈಕೆ ರೀತಿಯಲ್ಲೇ ಧೈರ್ಯದಿಂದ ಸಮಾಜವನ್ನು ಎದುರಿಸಬೇಕು,'' ಎಂದಿದ್ದರು

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಜಮಿಯತ್ ಉಲಾಮಾ-ಇ-ಹಿಂದ್ ಸಂಘಟನೆ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಇದಾದ ಬಳಿಕ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ , ಮುಸ್ಕಾನ್​ಗೆ ಧೈರ್ಯ ಹೇಳಿ 1 ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಿದ್ದರು. ಇದೀಗ ಮಹಾರಾಷ್ಟ್ರ ಶಾಸಕ ಜೀಶನ್ ಸಿದ್ಧಿಕಿ ಐಪೋನ್, ಸ್ಮಾರ್ಟ್ ವಾಚ್ ಉಡುಗೊರೆ ನೀಡಿದ್ದಾರೆ.

ಮುಸ್ಕಾನ್ ಮೊಳಗಿಸಿರುವ ಘೋಷಣೆಗೆ ಮೆಚ್ಚುಗೆ

ಮುಸ್ಕಾನ್ ಮೊಳಗಿಸಿರುವ ಘೋಷಣೆಗೆ ಮೆಚ್ಚುಗೆ

ವಿಶ್ವದ ನಂಬರ್ ಒನ್ ಉಗ್ರ ಸಂಘಟನೆ ಅಲ್ ಖೈದಾ ಮುಸ್ಕಾನ್ ಳನ್ನು ಹಾಡಿ ಹೊಗಳಿದೆ. ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾನೆ. 9 ನಿಮಿಷಗಳ ವಿಡಿಯೋದಲ್ಲಿ "ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್ ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.

Recommended Video

Chahal ಹಾಗು Warner ನಡುವೆ ನಡೆದಿದ್ದೇನು | Oneindia Kannada

English summary
Hijab controversy: Star student Muskan and his family have gone abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X