ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ Vs ಸುಮಲತಾ: ಹೆಸರಿಗಷ್ಟೇ ಕೆಆರ್​ಎಸ್ ಡ್ಯಾಂ ಫೈಟ್, ಅಸಲಿ ವಿಚಾರವೇ ಬೇರೆ?

|
Google Oneindia Kannada News

ಕೃಷ್ಣರಾಜಸಾಗರ ಅಣೆಕಟ್ಟಿನ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ಹೆಸರಿಗಷ್ಟೇ ಡ್ಯಾಂ ವಿಷಯವಾಗಿದ್ದು, ಅಸಲಿ ರಾಜಕೀಯ ಬೇರೆ ಇದೆಯೇ?

Recommended Video

Sumalatha Ambareesh vs HD Kumaraswamy| Oneindia Kannada

ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸದಂತೆ ಕುಮಾರಸ್ವಾಮಿಯವರು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಬಂದ ಬಳಿಕ ನೀಡಿದ ಹೇಳಿಕೆ, ಸುಮಲತಾ ವಿರುದ್ದ ಬಳಸಿದ ಪದ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಮಂಡ್ಯ ಸಂಸದೆ ಸುಮಲತಾ ವಿರುದ್ಧ ಎಚ್‌ಡಿಕೆ ಅಸಮಾಧಾನಮಂಡ್ಯ ಸಂಸದೆ ಸುಮಲತಾ ವಿರುದ್ಧ ಎಚ್‌ಡಿಕೆ ಅಸಮಾಧಾನ

ಇದಕ್ಕೆ ಅಷ್ಟೇ ಖಾರವಾಗಿ ಸುಮಲತಾ ಪ್ರತಿಕ್ರಿಯಿಸಿದ್ದರು ಕೂಡಾ, ಅದಕ್ಕೆ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಿದರೆ ಎಲ್ಲಾ ಬಂಡವಾಳ ಹೊರಬೀಳುತ್ತದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದರು. ಇದು, ಇನ್ನಷ್ಟು ವಾಕ್ಸಮರಕ್ಕೆ ಕಾರಣವಾಗಿತ್ತು.

 ಯಡಿಯೂರಪ್ಪ-ಕುಮಾರಸ್ವಾಮಿ ಭೇಟಿ ಆಗುತ್ತಿದ್ದಂತೆಯೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ಯಾಕೆ? ಯಡಿಯೂರಪ್ಪ-ಕುಮಾರಸ್ವಾಮಿ ಭೇಟಿ ಆಗುತ್ತಿದ್ದಂತೆಯೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ಯಾಕೆ?

ಇಲ್ಲಿ, ಇದು ಇಬ್ಬರು ಜನಪ್ರತಿನಿಧಿಗಳ ನಡುವಿನ ವಾಕ್ಸಮರ ಎಂದು ಮೇಲ್ನೋಟಕ್ಕೆ ಕಂಡರೂ, ಅಸಲಿ ಕಾರಣವೆಂದರೆ, ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದು ಎಂದು ವ್ಯಾಖಾನಿಸಲಾಗುತ್ತಿದೆ.

 ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಂಬರೀಶ್ ವಿರುದ್ದ ಸೋಲು

ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಂಬರೀಶ್ ವಿರುದ್ದ ಸೋಲು

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ವಿರುದ್ದ ಸೋಲು ಅನುಭವಿಸಿದ್ದರು.

 ಬಿಡದಿಯ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ

ಬಿಡದಿಯ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ

ಈಗ, ಬಿಡದಿಯ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿಯವರು ರಾಮನಗರ ಮತ್ತು ಮಂಡ್ಯ ಜಿಲ್ಲೆಯ ರಾಜಕೀಯದ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ಸಿನ ಭದ್ರಕೋಟೆಯಾಗಿರುವ ಈ ಜಿಲ್ಲೆಗಳು ತಮ್ಮ ಪಕ್ಷದ ಹಿಡಿತದಿಂದ ತಪ್ಪಬಾರದು ಎನ್ನುವ ಕಾರಣಕ್ಕಾಗಿ ಕೆಆರ್​ಎಸ್ ಡ್ಯಾಂ ವಿಚಾರಗಳು ಮುನ್ನಲೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

 ಸುಮಲತಾ ವಿರುದ್ದ ವಾಗ್ದಾಳಿ ಆರಂಭಿಸಿರುವ ಕುಮಾರಸ್ವಾಮಿ

ಸುಮಲತಾ ವಿರುದ್ದ ವಾಗ್ದಾಳಿ ಆರಂಭಿಸಿರುವ ಕುಮಾರಸ್ವಾಮಿ

ಸುಮಲತಾ ವಿರುದ್ದ ವಾಗ್ದಾಳಿ ಆರಂಭಿಸಿರುವ ಕುಮಾರಸ್ವಾಮಿಯವರ ಉದ್ದೇಶ ಜಿಲ್ಲೆಯಲ್ಲಿ ಪಕ್ಷದ ಬೇರನ್ನು ಇನ್ನಷ್ಟು ಬಲಪಡಿಸುವುದು. ಮಂಡ್ಯ ಜಿಲ್ಲೆಯಲ್ಲಿ ಪ್ರಾಬಲ್ಯ ಸ್ಥಾಪಿಸಲು ಕೆಪಿಸಿಸಿ ಅಧ್ಯಕ್ಷರು ಪ್ರಯತ್ನ ನಡೆಸುತ್ತಿರುವುದರಿಂದ, ಕೆಆರ್​ಎಸ್ ಡ್ಯಾಂನಂತಹ ಜಿಲ್ಲೆಯ ಜನರ ಭಾವನಾತ್ಮಕ ವಿಚಾರವನ್ನು ಕುಮಾರಸ್ವಾಮಿ ಮುಂದಿಡುತ್ತಿದ್ದಾರೆಂದು ಹೇಳಲಾಗುತ್ತಿದೆ.

 ನನ್ನ ಸ್ನೇಹಿತನ ನಿಧನದ ಅನುಕಂಪ ನಿಮ್ಮನ್ನು ದಡ ಸೇರಿಸಿದೆ

ನನ್ನ ಸ್ನೇಹಿತನ ನಿಧನದ ಅನುಕಂಪ ನಿಮ್ಮನ್ನು ದಡ ಸೇರಿಸಿದೆ

"ಮಹಿಳೆ ಎಂದು ಎಷ್ಟು ದಿನಾಂತಾ ರಾಜಕೀಯ ಮಾಡುತ್ತೀರಾ, ಕಳೆದ ಚುನಾವಣೆಯಲ್ಲಿ ನನ್ನ ಸ್ನೇಹಿತನ ನಿಧನದ ಅನುಕಂಪ ನಿಮ್ಮನ್ನು ದಡ ಸೇರಿಸಿದೆ. ಆದರೆ, ಪರಿಸ್ಥಿತಿ ಈಗ ಆ ರೀತಿಯಿಲ್ಲ. ಜಿಲ್ಲೆಯ ಜನರ ಪರ ಕೆಲಸವನ್ನು ಮಾಡಿ, ರಾಜಕೀಯ ಮಾಡಬೇಡಿ"ಎಂದು ಕುಮಾರಸ್ವಾಮಿ ಹೇಳುವ ಮೂಲಕ, ಮುಂಬರುವ ಚುನಾವಣೆಗೆ ಪೂರ್ವಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

English summary
HD Kumaraswamy vs Sumalatha Spar Over KRS Dam Safety; Actual Reason is JDS leader is targeting next Karnataka Assembly elections. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X