ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರಿಂದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆ ಆರಂಭ

By Mahesh
|
Google Oneindia Kannada News

ಮಂಡ್ಯ, ಸೆ. 11: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಕಾವೇರಿ ಕೊಳ್ಳದಲ್ಲಿರುವ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆ ಆರಂಭಿಸಿದ್ದಾರೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.

ಬೆಂಗಳೂರಿನ ಜಕ್ಕೂರು ವೈಮಾನಿಕ ನೆಲೆಯಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟನ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಪ್ರದೇಶಕ್ಕೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ತಂಡ ಆಗಮಿಸಿದೆ.[ಮಂಡ್ಯ: ರೈತರ ಜತೆ ಕುಳಿತು ಸಿಎಂಗೆ ಪ್ರಶ್ನೆ ಎಸೆದ ಯಡಿಯೂರಪ್ಪ]

ಕೆಆರ್ ಎಸ್ ಬಳಿ ಮಾತನಾಡಿದ ದೇವೇಗೌಡ, ಪ್ರಧಾನಿ ಮೋದಿ ಹಾಗೂ ನಾರಿಮನ್ ಅವರ ಜತೆ ಮಾತಾಡಿದ್ದೇನೆ ಹಾಗೂ ಇಲ್ಲಿ ಯಾರನ್ನು ದೂಷಿಸಲು ಬಂದಿಲ್ಲ. ವಸ್ತುಸ್ಥಿತಿ ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ರವಾನೆಯಾಗಬೇಕಿದೆ' ಎಂದರು.[ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ, ಇಳಿಯದ ಕಾವು]

HD Deve Gowda takes Aerial survey over KRS Dam

ನೀರು ಬಿಡಲು ಹೇಳಿದ್ದು ನಿಜ: ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದೇಶ ಪಾಲಿಸಿ ನೀರು ಬಿಡಬೇಕು ಎಂದು ಹೇಳಿದ್ದು ನಿಜ. ಆದರೆ, ಅಣೆಕಟ್ಟಿನಲ್ಲಿ ನೀರು ಇಲ್ಲದಿದ್ದರೆ ಎಲ್ಲಿಂದ ನೀರು ಬಿಡುವುದು.[ಗ್ಯಾಲರಿ: ಕಾವೇರಿಗಾಗಿ ಸಿಡಿದೆದ್ದ ಕರ್ನಾಟಕ, ಯಶಸ್ವಿ ಬಂದ್]

ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಇಲ್ಲಿ ಮೊದಲ ಬೆಳೆಗೆ ನೀರು ಇನ್ನೂ ಒದಗಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಬಗ್ಗೆ ಕಾನೂನು ತಜ್ಞರು, ಜಲ ಸಂಪನ್ಮೂಲ ತಜ್ಞರ ಜತೆ ಚರ್ಚಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ ಎಂದು ದೇವೇಗೌಡರು ಹೇಳಿದರು.[ಫಾಲಿ ಎಸ್.ನಾರಿಮನ್ ವಿರುದ್ಧ ಅಕ್ರೋಶವೇಕೆ?]

ದೇವೇಗೌಡರಿಂದ ಜಲಾಶಯಗಳ ವೈಮಾನಿಕ ಸಮೀಕ್ಷೆ ಭಾನುವಾರ ಬೆಳಗ್ಗೆ ಆರಂಭವಾಗಿದ್ದು, ಸಂಜೆ ವೇಳೆಗೆ ಅಂತ್ಯಗೊಳ್ಳುವ ಸಾಧ್ಯತೆಯಿದೆ. ವೈಮಾನಿಕ ಸಮೀಕ್ಷೆ ಬಳಿಕ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಿದ್ದಾರೆ.

ಕೆಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯದತ್ತ ಹೊರಟ ದೇವೇಗೌಡರು ಪ್ರಯಾಣ ಬೆಳೆಸಿದ್ದಾರೆ. ತಮಿಳುನಾಡಿನ ಮೆಟ್ಟೂರು ಮುಂತಾದ ಜಲಾಶಯಗಳ ವೈಮಾನಿಕ ಸಮೀಕ್ಷೆ ನಡೆಸುತ್ತೀರಾ ಎಂದು ಖಾಸಗಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಸಾಧ್ಯವಾದರೆ ಅಲ್ಲೂ ಸಮೀಕ್ಷೆ ನಡೆಸುತ್ತೇನೆ. ಒಟ್ಟಾರೆ ಎರಡು ಕಡೆ ರೈತರು ತೊಂದರೆಗೆ ಸಿಲುಕಬಾರದು ಎಂದರು.

English summary
Former PM HD Deve Gowda takes aerial survey over KRS Dam, Harangi, Hemavathi and Kabini dam today(September 11). Later he will convey his observations to Karnataka government upon discussing with experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X