ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋಟೋಗೆ ಹೂವಿನ ಹಾರ ಹಾಕ್ಬೇಡಿ ಎಂದು ಅತ್ತು ಗೋಳಾಡಿದ ಹುತಾತ್ಮ ಯೋಧ ಗುರುವಿನ ಪತ್ನಿ

|
Google Oneindia Kannada News

ಮಂಡ್ಯ, ಫೆಬ್ರವರಿ 15 : ತಾಯ್ನಾಡಿನ ಸೇವೆಗಾಗಿ ತೆರಳಿದ್ದ ಎಚ್.ಗುರು ನಿನ್ನೆ ( ಫೆ.14) ಹುತಾತ್ಮರಾಗಿದ್ದಕ್ಕೆ ಇಡೀ ಮಂಡ್ಯದ ಗುಡಿಗೇರಿ ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಕೆಲಸಕ್ಕಾಗಿ ತೆರಳಿದ್ದ ತನ್ನ ಪತಿ ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಗುರು ಪತ್ನಿ ಕಲಾವತಿ ಒಪ್ಪಲು ತಯಾರಿಲ್ಲ.

ಪುಲ್ವಾಮಾ ದಾಳಿ LIVE:ಯೋಧರ ಪಾರ್ಥಿವ ಶರೀರ ಹೊತ್ತ ರಾಜನಾಥ್ ಸಿಂಗ್ಪುಲ್ವಾಮಾ ದಾಳಿ LIVE:ಯೋಧರ ಪಾರ್ಥಿವ ಶರೀರ ಹೊತ್ತ ರಾಜನಾಥ್ ಸಿಂಗ್

ತನ್ನ ಪತಿಯ ಫೋಟೋಗೆ ಹೂ ಹಾಕಲು ಬಂದವರನ್ನು ತಡೆಯುತ್ತಿದ್ದಾರೆ. ಹೂವಿನ ಹಾರ ಹಾಕಲು ಮುಂದಾದ ಗೆಳೆಯರು ಹಾಗೂ ಸಂಬಂಧಿಕರಿಗೆ ಹೂವು ಹಾಕಬೇಡಿ ಎಂದು ಅಳುತ್ತಾ ಗೋಳಾಡುತ್ತಿದ್ದಾರೆ. ಪತ್ನಿಯ ಬೇಡಿಕೆಗೆ ಮಣಿದು ಮನೆ ಮುಂದೆ ಫೋಟೋ ಇಡದೇ, ಹೂವಿನ ಹಾರ ಹಾಕದೆ ಬಂಧುಗಳು ಸುಮ್ಮನಾಗಿದ್ದಾರೆ. ಆಕೆ ಕಣ್ಣೀರಿಡುವುದನ್ನು ಕಂಡು ಸಂಬಂಧಿಕರಿರಲಿ, ಎಂಥಹವರ ಮನ ಕಲಕುವಂತೆ ಮಾಡಿದೆ.

 ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ತನ್ನ ಮಗ ಹುತಾತ್ಮನಾದನೆಂಬ ಸುದ್ದಿ ಕೇಳಿದಾಗಿನಿಂದ ಊಟ ಬಿಟ್ಟು ಗೋಳಾಡುತ್ತಿರುವ ಕುಟುಂಸ್ಥರ ಆರೈಕೆಗೆ ಒದ್ದಾಡುತ್ತಿರುವ ಸಂಬಂಧಿ ಅಳುವುದಕ್ಕಾದರೂ ಅನ್ನ ತಿನ್ನಿ ಎಂದು ಬಲವಂತ ಮಾಡುತ್ತಿದ್ದ ದೃಶ್ಯ ಅಲ್ಲಿ ಸೇರಿದ್ದ ಜನರ ಕಣ್ಣುಗಳಲ್ಲಿ ನೀರು ಬರುವಂತೆ ಮಾಡಿದೆ.

Guru wife Kalavathi opposing that putting flowers on her husband photo

ತಮ್ಮ ಮಗ ಹುತಾತ್ಮನಾಗಿದ್ದಾನೆ ಎಂಬ ಸುದ್ದಿ ತಿಳಿದಾಗಿನಿಂದ ಊಟ ಬಿಟ್ಟು ಕುಟುಂಬಸ್ಥರು ನರಳಾಡುತ್ತಿದ್ದಾರೆ. ಹಸಿದು ಬಳಲಿರುವ ಹುತಾತ್ಮ ಯೋಧನ ತಾಯಿಗೆ ಸಂಬಂಧಿಕರು ಬಲವಂತವಾಗಿ ಊಟ ಮಾಡಿಸಿದರು. ಊಟ ಮಾಡಲ್ಲ ಎಂದು ಹಠ ಹಿಡಿದ ತಾಯಿಯನ್ನು ಅಳುವುದಕ್ಕಾದರೂ ಶಕ್ತಿ ಬೇಕು ಊಟ ಮಾಡಿ ಎಂದು ಹೇಳುತ್ತಿರುವ ದೃಶ್ಯ ಮಮ್ಮಲ ಮರಗುವಂತೆ ಮಾಡಿದೆ.

English summary
Martyr soldier Mandya's Guru wife Kalavathi opposing that putting flowers on her husband photo. Everybody forcing to guru mother to eat the food. Guru died in terror attack happened in Pulwana yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X