ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್ ಅಣೆಕಟ್ಟೆ ಸುತ್ತ ಕಲ್ಲು ಗಣಿಗಾರಿಕೆ ನಿಷೇಧ

|
Google Oneindia Kannada News

ಮಂಡ್ಯ, ಜನವರಿ 07 : ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆ ಸುತ್ತ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಗಣಿಗಾರಿಕೆಯಿಂದಾಗಿ ಅಣೆಕಟ್ಟೆಗೆ ಅಪಾಯ ಉಂಟಾಗಲಿದೆ ಹಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದವು.

ಮಂಡ್ಯ ಜಿಲ್ಲಾಧಿಕಾರಿ ಡಾ. ವಿ. ಎಂ. ವೆಂಕಟೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಜಿಲ್ಲೆಯ ಬೇಬಿ ಬೆಟ್ಟದ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದೆ" ಎಂದು ಹೇಳಿದ್ದಾರೆ.

ಕೆಆರ್ ಎಸ್‌ ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆಕೆಆರ್ ಎಸ್‌ ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆ

ಕೆಆರ್ ಸುತ್ತಲಿನ ಒಟ್ಟು 36 ಕಡೆ ಗಣಿಗಾರಿಕೆ ನಡೆಯುತ್ತಿತ್ತು. ರೈತರು, ಪ್ರಗತಿಪರರು, ಮಠಾಧೀಶರು ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯ ಉಂಟಾಗಲಿದೆ ಎಂದು ದೂರು ನೀಡಿದ್ದರು. ಈ ವಿಚಾರ ಮುಖ್ಯಮಂತ್ರಿಗಳ ತನಕವೂ ಹೋಗಿತ್ತು.

ಕೆಆರ್ ಎಸ್ ಡ್ಯಾಂಗೆ ಬಣ್ಣದ ಬೆಳಕಿನ ಚಿತ್ತಾರಕೆಆರ್ ಎಸ್ ಡ್ಯಾಂಗೆ ಬಣ್ಣದ ಬೆಳಕಿನ ಚಿತ್ತಾರ

Dr. M.V.Venkatesh

ನಿಷೇಧಾಜ್ಞೆ ಇದ್ದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಗಣಿ ಮಾಲೀಕರು ಗಣಿಗಾರಿಕೆ ನಡೆಸುತ್ತಿದ್ದರು. ಸೋಮವಾರ 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದಾಗ ಗಣಿಗಾರಿಕೆ ಕಾನೂನು ಪ್ರಕಾರ ನಡೆಯುತ್ತಿಲ್ಲ ಎಂಬುದು ಸಾಬೀತಾಗಿತ್ತು.

ಐದು ವರ್ಷಗಳ ನಂತರ ಭರ್ತಿಯಾದ ಮೆಟ್ಟೂರು ಅಣೆಕಟ್ಟು!ಐದು ವರ್ಷಗಳ ನಂತರ ಭರ್ತಿಯಾದ ಮೆಟ್ಟೂರು ಅಣೆಕಟ್ಟು!

ಕೆಲವು ಗಣಿ ಮಾಲೀಕರು ಅವಧಿ ಮುಗಿದಿದ್ದರೂ ಗಣಿಗಾರಿಕೆಯನ್ನು ಮುಂದುವರೆಸಿದ್ದರು. ಇನ್ನೂ ಕೆಲವು ಕಡೆಗಳಲ್ಲಿ ಗಣಿಗಾರಿಕೆಯಿಂದಾಗಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಅಪಾರ ಎದುರಾಗಬಹುದು ಎಂದು ತಕ್ಷಣದಿಂದಲೇ ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.

ಎಲ್ಲಾ ಉದ್ದೇಶದಿಂದ ಗಣಿಗಾರಿಕೆ ನಡೆಸುವುದನ್ನು ಮಂಡ್ಯ ಜಿಲ್ಲಾಡಳಿತ ನಿಷೇಧಿಸಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ನಿಷೇಧಾಜ್ಞೆಯನ್ನು ಉಲ್ಲಂಘಟನೆ ಮಾಡಿ ಗಣಿಗಾರಿಕೆ ಪುನರಾರಂಭಿಸಿದರೆ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಪ್ರಸ್ತುತ ಇರುವ ಆದೇಶದಂತೆ ಅಣೆಕಟ್ಟೆಯ 5 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ.

ಮಂಡ್ಯ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಅಣೆಕಟ್ಟೆಯ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ಚಿಂತನೆ ನಡೆಸಿದೆ. ಜಿಲ್ಲಾಡಳಿತದ ಆದೇಶದಿಂದಾಗಿ ಗಣಿಗಾರಿಕೆ ನಿಲ್ಲಿಸಲು ಹೋರಾಟ ಮಾಡಿದ್ದ ಸಂಘಟನೆಗಳಿಗೆ ಗೆಲುವು ಸಿಕ್ಕಿದೆ.

English summary
Mandya Deputy Commissioner Dr. M.V.Venkatesh ordered to stop granite meaning 5 Km around Krishna Raja Sagara popularly known as KRS dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X