ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್‌ಗೆ ಅಚ್ಚರಿ ಮೂಡಿಸಿದ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ

|
Google Oneindia Kannada News

Recommended Video

Lok Sabha Elections 2019 : ನಿಖಿಲ್‌ಗೆ ಅಚ್ಚರಿ ಮೂಡಿಸಿದ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ | Oneindia Kannada

ಮಂಡ್ಯ, ಮಾರ್ಚ್ 19 : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಕೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಂದು ಪ್ರಚಾರದ ಸಮಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಯೊಬ್ಬರು ನಿಖಿಲ್‌ಗೆ ಅಚ್ಚರಿ ಮೂಡಿಸಿದರು.

ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್ ಬುಕ್ ಪುಟದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಕರ್ತರೇ ಜೆಡಿಎಸ್ ಪಕ್ಷದ ನಿಜವಾದ ಆಸ್ತಿ ಎಂದು ಹೇಳಿದ್ದಾರೆ. ಆ ಘಟನೆ ಏನು ಎಂಬ ಮಾಹಿತಿ ಇಲ್ಲಿದೆ.

ನಿಖಿಲ್ ಬೆಂಬಲಕ್ಕೆ ಜೆಡಿಎಸ್ ಭದ್ರಕೋಟೆ ಮಂಡ್ಯದ ತುಂಬ ಬಲಿಷ್ಠ 'ಸೈನಿಕರು'!ನಿಖಿಲ್ ಬೆಂಬಲಕ್ಕೆ ಜೆಡಿಎಸ್ ಭದ್ರಕೋಟೆ ಮಂಡ್ಯದ ತುಂಬ ಬಲಿಷ್ಠ 'ಸೈನಿಕರು'!

ಇಂದು ಮಳವಳ್ಳಿ ಪ್ರಚಾರದ ಸಮಯದಲ್ಲಿ ನಡೆದ ಒಂದು ಹೃದಯಸ್ಪರ್ಶಿ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಗೆಜ್ಜಲಗೆರೆಯ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಗೌರವಧನವನ್ನೆಲ್ಲಾ ಜೆಡಿಎಸ್ ಪಕ್ಷಕ್ಕೆ, ಚುನಾವಣೆಗೆ ದೇಣಿಗೆಯಾಗಿ ನೀಡಿದರು.

ಮಂಡ್ಯ : ಮೊದಲ ದಿನವೇ ಮೂವರು ಅಭ್ಯರ್ಥಿಗಳಿಂದ ನಾಮಪತ್ರಮಂಡ್ಯ : ಮೊದಲ ದಿನವೇ ಮೂವರು ಅಭ್ಯರ್ಥಿಗಳಿಂದ ನಾಮಪತ್ರ

Gram panchayat member donates salary to JDS

ಇದು ಅವರ ಪಾಲಿನ ನ್ಯಾಯಯುತ ಆದಾಯವಾಗಿದ್ದರೂ, ಅದನ್ನು ಅತ್ಯಂತ ಅಭಿಮಾನದಿಂದ ನನಗೆ ನೀಡಿ ಆಶೀರ್ವದಿಸಿದರು. ಇದರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ.

ಅಂಬಿ ಸಮಾಧಿ ಮುಂದೆ ನಾಮಪತ್ರಕ್ಕೆ ಪೂಜೆ, ಭಾವುಕರಾದ ಸುಮಲತಾಅಂಬಿ ಸಮಾಧಿ ಮುಂದೆ ನಾಮಪತ್ರಕ್ಕೆ ಪೂಜೆ, ಭಾವುಕರಾದ ಸುಮಲತಾ

ನಮ್ಮ ಜನರ ಇಂತಹ ಮುಗ್ಧ, ನಿಷ್ಕಲ್ಮಶ ಪ್ರೀತಿ, ಅಭಿಮಾನಗಳೇ ಜೆಡಿಎಸ್ ಪಕ್ಷದ ನಿಜವಾದ ಶಕ್ತಿ. ಪಕ್ಷದ ಮೇಲೆ ಇಷ್ಟು ಅಭಿಮಾನವಿಟ್ಟಿರುವ ಈ ಜನರೇ ನಮ್ಮ ಆಸ್ತಿ. ಚುನಾವಣೆಗಳನ್ನು ಎದುರಿಸುವಾಗ ಇಂತಹ ಭಾವನೆಗಳ ಬೆಂಬಲಗಳಿಂದ ದೊರಕುವ ಆತ್ಮವಿಶ್ವಾಸ ಇನ್ನು ಯಾವುದರಿಂದಲೂ ಬರುವುದಿಲ್ಲ.

ಸನ್ಮಾನ್ಯ ದೇವೇಗೌಡ ಸಾಹೇಬರ, ಕುಮಾರಣ್ಣನವರ ಮತ್ತು ಜೆಡಿಎಸ್ ಪಕ್ಷದ ಮೇಲೆ ಸಾಮಾನ್ಯ ಜನರ ಇಂತಹ ಪ್ರೀತಿ, ಅಭಿಮಾನ ಮತ್ತು ನಿಷ್ಠೆಗಳು ನಮ್ಮ ಜೊತೆಗಿರುವಾಗ ಜೆಡಿಎಸ್ ಪಕ್ಷವನ್ನು ಹಿಮ್ಮೆಟ್ಟಿಸುವುದು ಸಾಧ್ಯವೇ ಇಲ್ಲ.

English summary
Mandya district Gejjalagere Gram panchayat member donated his salary to JD(S) party. Gram panchayat member big fan of Chief Minister H.D.Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X