ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಬಿಡಿಯೂಟದ ತೊಗರಿ ಬೇಳೆ ಮಾರಾಟ ಮಾಡಿದ ಸರ್ಕಾರಿ ಶಿಕ್ಷಕ- FIR ದಾಖಲು

|
Google Oneindia Kannada News

ಮಳವಳ್ಳಿ, ಜು.1: ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕಾಗಿ ಸರ್ಕಾರದಿಂದ ನೀಡಲಾದ ಉಚಿತ ತೊಗರಿ ಬೇಳೆಯನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಶಾಲೆಯಲ್ಲಿ ಬಿಸಿಯೂಟಕ್ಕಾಗಿ ಬಳಕೆ ಮಾಡುವ ತೊಗರಿ ಬೇಳೆ ಮಾರಾಟ ಮಾಡುವ ಮೂಲಕ ಸಿಕ್ಕಿಬಿದ್ದಿದ್ದಾನೆ. ಶಿಕ್ಷಕ ಬೇಳೆ ಕದಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೊಗರಿ ಬೇಳೆ ಮೂಟೆಗಳನ್ನು ಆಟೋದಲ್ಲಿ ತುಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾರೆಗೌಡನ ಹಳ್ಳಿಯಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕ ಕಾಳ ರಾಜೇಗೌಡ ಬೇಳೆ ಕಳ್ಳತನ ಮಾಡಿದ್ದಾರೆ. ಶಾಲೆಯಿಂದ ಬಿಸಿಯೂಟದ ಎರಡು ಮೂಟೆ ಬೇಳೆ ಕದ್ದು ಅಂಗಡಿಗೆ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

Govt teacher sold Toordal of Midday meal: FIR registered

ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆ: ಮತದಾನದ ಅವಧಿ ವಿಸ್ತರಣೆಗೆ ಮನವಿಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆ: ಮತದಾನದ ಅವಧಿ ವಿಸ್ತರಣೆಗೆ ಮನವಿ

ಶಿಕ್ಷಕ ರಾಜೇಗೌಡ ಮೂಟೆ ಬೇಳೆಯನ್ನು ಆಟೋದಲ್ಲಿ ತುಂಬಿಸಿ ಮಾರಾಟ ಮಾಡುವ ದೃಶ್ಯವನ್ನು ವ್ಯಕ್ತಿಯೊಬ್ಬ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಜೊತೆಗೆ ರಾಜೇಗೌಡ ವಿರುದ್ಧ ಶಾಲಾ ಮಕ್ಕಳಿಗೆ ತೊಗರಿ ಬೇಳೆ ಮಾರಾಟ ಮಾಡಿದ್ದಕ್ಕೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಎಫ್ಐಆರ್ ದಾಖಲಿಸಲಾಗಿದೆ.

Govt teacher sold Toordal of Midday meal: FIR registered

ಶಾಲೆಯಲ್ಲಿ ಕದ್ದ ಬೇಳೆಯನ್ನು ಆಟೋದಲ್ಲಿ ಹಲಗೂರಿನ ಅಂಗಡಿಗೆ ಸಾಗಿಸುತ್ತಿದ್ದ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ನೋಡಿದ ಜನರಿಂದ ಕಳ್ಳ ಶಿಕ್ಷಕನ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮುಖ್ಯ ಶಿಕ್ಷಕನಿಗೆ ನೋಟೀಸ್ ನೀಡಲಾಗಿದೆ. ಬಿಸಿಯೂಟದ ಅಧಿಕಾರಿ ಕಳ್ಳತನ ವಿಡಿಯೋದೊಂದಿಗೆ ಹಲಗೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣ ಹಲಗೂರು ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದ್ದು ಶಿಕ್ಷಕನ ವಿರುದ್ಧ 403 ಮತ್ತು 409ರ ಅಡಿಯಲ್ಲಿ FIR ದಾಖಲಿಸಲಾಗಿದೆ. ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Recommended Video

Team India ನಾಯಕನಾಗಿದ್ದಕ್ಕೆ ಜಸ್ಪ್ರೀತ್ ಬುಮ್ರಾ ಫುಲ್ ಖುಷ್ | *Cricket | OneIndia Kannada

English summary
A video has come to light of the government school teacher of Mandya district selling the free toor dal provided by the government for Midday meals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X