ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

|
Google Oneindia Kannada News

ಮಂಡ್ಯ, ನವೆಂಬರ್ 24: ಮಂಡ್ಯದ ಕನಗನಮರಡಿಯಲ್ಲಿ ನಡೆದ ಬಸ್ ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ.

ಮಂಡ್ಯ ಭೀಕರ ದುರಂತ LIVE:ಮೃತರ ಕುಟುಂಬಕ್ಕೆ 5ಲಕ್ಷ ರೂ. ಘೋಷಿಸಿದ ಸಿಎಂ ಮಂಡ್ಯ ಭೀಕರ ದುರಂತ LIVE:ಮೃತರ ಕುಟುಂಬಕ್ಕೆ 5ಲಕ್ಷ ರೂ. ಘೋಷಿಸಿದ ಸಿಎಂ

ಮಂಡ್ಯದ ಕನಗನಮರಡಿಯಲ್ಲಿ ಖಾಸಗಿ ಬಸ್‌ ಒಂದು ನಾಲೆಗೆ ಉರುಳಿದ ಪರಿಣಾಮ 25 ಕ್ಕೂ ಹೆಚ್ಚು ಜನ ಮರಣಹೊಂದಿದ್ದಾರೆ. ಘಟನೆ ಬಗ್ಗೆ ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಇದೀಗ ಪರಿಹಾರವನ್ನು ಸರ್ಕಾರದ ವತಿಯಿಂದ ಘೋಷಿಸಿದ್ದಾರೆ.

ಮಂಡ್ಯ ಬಳಿ ಭೀಕರ ಬಸ್ ಅಪಘಾತ ಪ್ರಕರಣ, ಸದ್ಯ 20 ಮೃತದೇಹ ಹೊರಕ್ಕೆ ಮಂಡ್ಯ ಬಳಿ ಭೀಕರ ಬಸ್ ಅಪಘಾತ ಪ್ರಕರಣ, ಸದ್ಯ 20 ಮೃತದೇಹ ಹೊರಕ್ಕೆ

ಮುಖ್ಯಮಂತ್ರಿಗಳು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪರಿಹಾರವನ್ನೂ ಘೋಷಿಸುವ ಕಾರ್ಯ ಸಹ ಮಾಡಿದ್ದಾರೆ.

Government announce 5 lakh relief to Mandya accident victims families

ನಾಲೆಗೆ ಬಸ್ ಉರುಳಿದ ಘಟನೆಯಲ್ಲಿ ಬಸ್‌ನಲ್ಲಿದ್ದ ಬಹುತೇಕರು ಅಸುನೀಗಿದ್ದು, ಕೇವಲ ಇಬ್ಬರಷ್ಟೆ ಬದುಕಿ ಮೇಲೆ ಬಂದಿದ್ದಾರೆ ಎನ್ನಲಾಗಿದೆ. ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ 25 ಮಂದಿ ಅಸುನೀಗಿದ್ದಾರೆ, ಆದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಇದೆ.

English summary
CM Kumaraswamy announce 5 lakh rupees for Mandya accident victims families. He cancel all his programs and rushed towards the incident place. said to be more than 25 people died in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X