• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಎಚ್.ಟಿ.ಕೃಷ್ಣಪ್ಪ ನಿಧನ

|

ಮಂಡ್ಯ, ಮಾರ್ಚ್ 19: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹಿರಿಯ ರಾಜಕಾರಿಣಿ ಎಚ್.ಟಿ.ಕೃಷ್ಣಪ್ಪ ಅವರು ಶುಕ್ರವಾರ ನಿಧನರಾಗಿದ್ದಾರೆ.

ಎಚ್.ಟಿ.ಕೃಷ್ಣಪ್ಪ ಅವರು ನಾಗಮಂಗಲ ಕ್ಷೇತ್ರದ ಶಾಸಕರಾಗಿ, ರಾಜ್ಯದ ಆರೋಗ್ಯ ಸಚಿವರಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ರಂಗ ಕಲಾವಿದರಾಗಿ ಅಪಾರ ಸೇವೆ ಸಲ್ಲಿಸಿದ್ದರು.

ಎಚ್.ಟಿ.ಕೃಷ್ಣಪ್ಪನವರು ನಾಗಮಂಗಲ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಂದ ಜನತೆಯ ಅಪಾರ ಪ್ರೀತಿ, ಅಭಿಮಾನ ಗಳಿಸಿದ್ದರು. ಅಷ್ಟೇ ಅಲ್ಲದೇ ರಂಗಭೂಮಿ ಕಲಾವಿದರಾಗಿ ಅಪಾರ ಜನ ಮನ್ನಣೆ ಗಳಿಸಿದ್ದರು.

ಡಾ.ಕೆ.ಸುಧಾಕರ್ ಸಂತಾಪ

ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಅವರ ನಿಧನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.

   ಸೌಮ್ಯಾ ರೆಡ್ಡಿ ಪೊಲೀಸರ ಜೊತೆ ಕಿರಿಕ್ | Oneindia Kannada

   ""ಭಗವಂತ ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿದರು.

   English summary
   HT Krishnappa, a senior politician from Mandya district's Nagamangala taluk, passed away on Friday(March 19, 2021).
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X