• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸದೆ ಸುಮಲತಾಗೆ ಸವಾಲು ಹಾಕಿದ ಮಾಜಿ ಸಂಸದ ಶಿವರಾಮೇಗೌಡ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜುಲೈ 10: "ಮುಂಬರುವ ಮಂಡ್ಯ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಹಾಕಲಿ,'' ಎಂದು ಮಾಜಿ ಸಂಸದ ಶಿವರಾಮೇಗೌಡ ಮಂಡ್ಯ ಸಂಸದೆ ಸುಮಲತಾಗೆ ಚಾಲೆಂಜ್ ಹಾಕಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ಸಂಸದೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ ಕಾಂಗ್ರೆಸ್ ಯಾವುದಾದರು ಸೇರಲಿ. ಯಾವ ಪಕ್ಷವನ್ನು ಸೇರದಿದ್ರೆ ವಾಟ್ ನೆಕ್ಟ್? ಎಂದು ಪ್ರಶ್ನಿಸಿದ್ದಾರೆ.

 ನಿಮ್ಮ ಮಾತು ನಿಮ್ಮ ಸಂಸ್ಕಾರ ತೋರಿಸುತ್ತದೆ: ಎಚ್‌ಡಿಕೆಗೆ ಸುಮಲತಾ ಟಾಂಗ್ ನಿಮ್ಮ ಮಾತು ನಿಮ್ಮ ಸಂಸ್ಕಾರ ತೋರಿಸುತ್ತದೆ: ಎಚ್‌ಡಿಕೆಗೆ ಸುಮಲತಾ ಟಾಂಗ್

"ಮಂಡ್ಯ ಜನ ದಡ್ಡರಲ್ಲ, ಒಂದು ಸಲ ಯಮಾರಿಸಿದ್ದೀರಾ, ಮತ್ತೆ ಯಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ, ಆಗ ಅಲ್ಲಿನ‌ ಮುಖಂಡರಾದರೂ ನಿಮ್ಮ ಜೊತೆ ಬರುತ್ತಾರೆ,'' ಎಂದು ಸುಮಲತಾಗೆ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ರಾಜಕೀಯ ಕಿವಿಮಾತು ಹೇಳಿದರು.

"ಸುಮಲತಾ ಮಂಡ್ಯ ಪಾಲಿಟಿಕ್ಸ್‌ನಲ್ಲಿ ಬಿಗ್ ಝೀರೋ. ಆಕೆ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಲ್ಲಿ ಮನವಿ ಮಾಡುತ್ತೇನೆ. ದೊಡ್ಡ ಸೊನ್ನೆಯಿರುವಾಗ ಅಂಬರೀಶ್ ಹೆಸರೇಳಿಕೊಂಡು ಯಾರು ಹೋದವರು?,'' ಎಂದು ಪ್ರಶ್ನಿಸಿದರು.

"ಅಂಬರೀಶ್ ಗುಣಾನೆ ಬೇರೆ, ಸುಮಲತಾ ಗುಣಾನೇ ಬೇರೆ. ಅಂಬರೀಶ್ ಪತ್ನಿ ಎಂದು ಹೈಜಾಕ್ ಮಾಡಿ ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ ಅಷ್ಟೇ. ಅಂಬರೀಶ್ ಕಾಲದಲ್ಲೂ ಗಣಿ ನಡೆಯುತ್ತಿತ್ತು ಅಲ್ವಾ? ಆಗ ಯಾಕೆ ಇಯಮ್ಮ ನಿಲ್ಲಿಸಲಿಲ್ಲ.''

"ಮಂಡ್ಯ ಜಿಲ್ಲೆಯಿಂದ ಹೋದವರಿಗೆ ಕಾಫಿ ಬೇಡ, ನೀವು ಒಂದು ಲೋಟ ನೀರು ಕೊಟ್ಟಿದ್ದರೆ ಸಾಕಾಗಿತ್ತು. ಮಂಡ್ಯ ಜನಕ್ಕೆ ಎಲ್ಲವೂ ಗೊತ್ತಿದೆ, ಹಾಗಾಗಿ ಇದನ್ನ ಇಲ್ಲಿಗೆ ಬಿಡಿ. ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ.''

"ಸಂಸದೆ ಸುಮಲತಾರನ್ನು ಜನ ಆಗಲೇ ಮರೆತಿದ್ರು, ಆದರೆ ನಮ್ಮ ನಾಯಕರೇ ಮಾತನಾಡಿ ಮತ್ತೆ ನೆನಪಿಸಿದರು. ಅಂಬರೀಶ್ ಸತ್ತಾಗ ಮಂಡ್ಯಕ್ಕೆ ಶವ ತೆಗೆದುಕೊಂಡು ಹೋಗೋದು ಬೇಡ ಅಂತ ಸುಮಲತಾ ಹೇಳಿದ್ದರು. ಆದರೆ ಸಿಎಂ ಆಗಿದ್ದ ಕುಮಾರಸ್ವಾಮಿ ಮಂಡ್ಯಕ್ಕೆ ತಂದರು. ರಾಜ್‌ಕುಮಾರ್ ಪಕ್ಕದಲ್ಲೇ ಅಂಬಿ ಇರಬೇಕು ಅಂತ ಸಮಾಧಿಗೆ ಜಾಗ ಕೊಟ್ಟರು.''

"ಸುಮಲತಾ ಆಂಧ್ರಕ್ಕೂ ಮಂಚವಾಡು ಅನಂತುಡು ಅಂದಂಗೆ ಅವರು ಅನಂತಪುರದವರು. ಅಂಬರೀಶ್ ಮದ್ವೆ ಆಗಿ ಬಂದಮೇಲೆ ಅವರ ಧರ್ಮ‌ಪತ್ನಿ ಅಂತ ಸ್ವೀಕಾರ ಮಾಡಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎನ್ನುವುದರ ಮೂಲಕ ಶಿವರಾಮೇಗೌಡ ಮತ್ತೆ ಸುಮಲತಾ ಮೂಲ‌ ಪ್ರಶ್ನಿಸಿದರು.

   JDS President Kumaraswaamy : ರಾಮನಗರದಲ್ಲಿ ಮೊದಲ ಚುನಾವಣೆಗೆ ಅವಕಾಶ ಕೊಟ್ಟಿದೆ ನಾವು! | Oneindia Kannada

   "ಸಿನಿಮಾ ರೀತಿಯಲ್ಲೇ ಸಂಸದೆಯಾಗಿಯೂ ನಟನೆ ಮಾಡ್ತಿದ್ದಾರೆ. ಕರ್ಣ ಎಂದು ಹೆಸರು ಪಡೆದಿರುವ ಅಂಬರೀಶ್‌ರವರ ಕೊಡುಗೆಯೂ ಮಂಡ್ಯಕ್ಕೆ ಶೂನ್ಯ. ಸಂಸದೆ ಸುಮಲತಾ ಕೊರೊನಾ ಕಾಲದಲ್ಲಿ ಏನು ಮಾಡಿದ್ದಾರೆ ಹೇಳಿ?,'' ಎಂದು ಸಂಸದೆ ಸುಮಲತಾಗೆ ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆ ಹಾಕಿದರು.

   English summary
   Former MP Shivaramegowda has challenged MP Sumalatha to contest candidates the upcoming Mandya Zilla Panchayat polls.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X