ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಂಸದೆ ರಮ್ಯಾ ಅವರು ಇಂದು ಮತದಾನ ಮಾಡಲ್ವ?

By Mahesh
|
Google Oneindia Kannada News

ಮಂಡ್ಯ, ಆಗಸ್ಟ್ 31: ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರು ಇಂದು ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡುತ್ತಾರಾ? ಎಂಬ ಕುತೂಹಲ ಸಂಜೆ ತನಕ ಮುಂದುವರೆಯಲಿದೆ. ಆದರೆ, ರಮ್ಯಾ ಅವರು ಮತದಾನ ಮಾಡುವುದು ಅನುಮಾನ ಎಂಬ ಸುದ್ದಿ ದಟ್ಟವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲೂ ರಮ್ಯಾ ಅವರು ಮತದಾನ ಮಾಡಿರಲಿಲ್ಲ. ಹಾಗೆ ನೋಡಿದರೆ, ಮಂಡ್ಯದಲ್ಲಿ ಸೋಲುಂಡ ಬಳಿಕ, ದೆಹಲಿಗೆ ತೆರಳಿದ ರಮ್ಯಾ ಅವರು ರಾಷ್ಟ್ರಮಟ್ಟದ ರಾಜಕೀಯದಲ್ಲಿ ನಿರತರಾಗಿದ್ದಾರೆ. ಮಂಡ್ಯದಲ್ಲಿ ರಮ್ಯಾ ಅವರ ತಾಯಿ ರಂಜಿತಾ ಅವರು ಸಕ್ರಿಯರಾಗಿದ್ದಾರೆ.

Former MP Ramya not to vote in Mandya Civic Polls

ಮಂಡ್ಯದ ನಗರಸಭೆಯ ವಾರ್ಡ್ ನಂಬರ್ 11ರ ಮತಪಟ್ಟಿಯಲ್ಲಿ ರಮ್ಯಾ ಅವರ ಹೆಸರಿದೆ. 420 ಹೆಸರಿನ ಮತದಾರರ ಸಂಖ್ಯೆ ಕೂಡಾ ಈಗ ಬದಲಾಗಿದೆ. ನಗರದ ವೇಣುಗೋಪಾಲಸ್ವಾಮಿ ದೇಗುಲದ ಎದುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಶೇ 10ರಷ್ಟು ಮತದಾನ ದಾಖಲಾಗಿದೆ.

'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ''ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'

ಮಂಡ್ಯದಲ್ಲಿ ಮಂಡ್ಯ ನಗರ ಮುನ್ಸಿಪಾಲ್ ಕೌನ್ಸಿಲ್ (ಸಿಎಂಸಿ), ಮದ್ದೂರು, ಪಾಂಡವಪುರ, ನಾಗಮಂಗಲದ ಟೌನ್ ಮುನ್ಸಿಪಲ್ ಕೌನ್ಸಿಲ್(ಟಿಎಂಸಿ), ನಾಗಮಂಗಲ ತಾಲೂಕಿನ ಬೆಳ್ಳೂರಿನ ಟಿಎಂಸಿಯ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಹೋರಾಟ ನಡೆದಿದೆ.

ಮಂಡ್ಯ ಸಿಎಂಸಿಯ 35 ವಾರ್ಡ್ ಗಳಲ್ಲಿ 169 ಅಭ್ಯರ್ಥಿಗಳಿದ್ದಾರೆ. ಟಿಎಂಸಿಗಳ ಪೈಕಿ ಮದ್ದೂರಿನಲ್ಲಿ 85, ಪಾಂಡವಪುರ 79, ನಾಗಮಂಗಲ 71 ಹಾಗೂ ಬೆಳ್ಳೂರಿನಲ್ಲಿ 51ಮಂದಿ ಕಣದಲ್ಲಿದ್ದಾರೆ.

English summary
Congress social media chief, former MP of Mandya Ramaya alias Divya Spanadan is likely to give a miss this time also. Ramya is a voter in Mandya city ward number 11. Voting in Mandya district's five local bodies begin today(Aug 31)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X