ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ, ದೇವೇಗೌಡರದ್ದು 'ಹಿತ್ತಳೆ ಕಿವಿ': ಜೆಡಿಎಸ್ ಮುಖಂಡ

|
Google Oneindia Kannada News

Recommended Video

ದೇವೇಗೌಡ, ಕುಮಾರಸ್ವಾಮಿಗೆ ಮೊದಲು ಹೊಗಳಿದ್ರು ಆಮೇಲೆ ಬೈದ್ರು. | HD Kumaraswamy

ಮಂಡ್ಯ, ಸೆ 21: " ಸುಮಾರು ಎರಡು ದಶಕಗಳ ಕಾಲ ಅಧಿಕಾರವಿಲ್ಲದೇ ಸುಮ್ಮನಿದ್ದೆ. ಆಗ, ನನ್ನನ್ನು ಸಂಸದನನ್ನಾಗಿ ಮಾಡಿದ್ದು ಜೆಡಿಎಸ್ ಪಕ್ಷ" ಎಂದು ಮಾಜಿ ಸಂಸದ, ಜೆಡಿಎಸ್ ಮುಖಂಡ ಎಲ್ ಆರ್ ಶಿವರಾಮೇ ಗೌಡ ಹೇಳಿದ್ದಾರೆ.

" ಪಕ್ಷ ಎಂದ ಮೇಲೆ, ಸಣ್ಣಪುಟ್ಟ ಮನಸ್ತಾಪಗಳು ಇರುವುದು ಸಹಜ. ಹಾಗೇ ನನಗೆ ಕೂಡಾ. ನಮ್ಮ ಮತ್ತು ಗೌಡ್ರು ನಡುವಿನ ಭಿನ್ನಾಭಿಪ್ರಾಯಗಳನ್ನು ನಾವೇ ಸರಿಪಡಿಸಿಕೊಳ್ಲುತ್ತೇವೆ" ಎಂದು ಶಿವರಾಮೇ ಗೌಡ್ರು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದ ಜೆಡಿಎಸ್ ಶಾಸಕಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದ ಜೆಡಿಎಸ್ ಶಾಸಕ

" ದೇವೇಗೌಡ್ರು ಮತ್ತು ಕುಮಾರಸ್ವಾಮಿ ಇಬ್ಬರದ್ದೂ ಬಂಗಾರದಂತಹ ಮನಸ್ಸು. ಆದರೆ, ಕಿವಿ ಮಾತ್ರ ಹಿತ್ತಳೆ" ಎಂದು ಇವರಿಬ್ಬರೂ ಹೇಳಿಕೆ ಮಾತುಗಳನ್ನು ಕೇಳುವುದು ಜಾಸ್ತಿ ಎಂದು ಪರೋಕ್ಷವಾಗಿ ಶಿವರಾಮೇ ಗೌಡ್ರು ಅಭಿಪ್ರಾಯ ವ್ಯಕ್ತ ಪಡಿಸಿದರು.

Former Mandya MP Shivarame Gowda Statement On Deve Gowda And HD Kumaraswamy

" ದೇವೇಗೌಡ್ರು ದೊಡ್ಡವರು, ಅವರಿಗೆ ನನ್ನನ್ನು ಏಕವಚನದಲ್ಲಿ ಮಾತನಾಡುವ ಅಧಿಕಾರವಿದೆ. ಕುಮಾರಸ್ವಾಮಿ ಭಟ್ಟಂಗಿಗಳ ಮಾತನ್ನು ಕೇಳುವುದನ್ನು ಕಮ್ಮಿ ಮಾಡಬೇಕು" ಎಂದು ಶಿವರಾಮೇ ಗೌಡ್ರು ಹೇಳಿದ್ದಾರೆ.

" ಕುಮಾರಸ್ವಾಮಿಯವರಿಗೆ ನನ್ನ ಮೇಲೆ ಬೇಸರವಿದೆ ಎಂದು ಕೇಳ್ಪಟ್ಟೆ. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಹೋಗಿದ್ದರಿಂದ, ಕುಮಾರಸ್ವಾಮಿಯವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ" ಎಂದು ಶಿವರಾಮೇ ಗೌಡ್ರು ಸ್ಪಷ್ಟ ಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ವಿರುದ್ದ ಜಾತಿವಿಚಾರ ಕೆದಕಿ, ಶಿವರಾಮೇ ಗೌಡ್ರು, ಭಾರೀ ಸುದ್ದಿಯಲ್ಲಿದ್ದರು.

English summary
Former Mandya MP Shivarame Gowda Statement On JDS Supremo Deve Gowda And Former CM HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X