ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಚುನಾವಣೆ ಕಾವಿನ ಮಧ್ಯೆ ಹೆಚ್ಚುತ್ತಿದೆ ರೈತರ ಆತ್ಮಹತ್ಯೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮದ್ದೂರು, ಏಪ್ರಿಲ್ 02:ಮಂಡ್ಯದಲ್ಲಿ ಚುನಾವಣೆಯ ಭರಾಟೆ ಸಾಗಿದ್ದು, ಎಲ್ಲರೂ ತಾವು ರೈತರ ಪರವಾಗಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾ ರೈತರನ್ನು ಸೆಳೆಯುತ್ತಿದ್ದರೆ ಇತ್ತ ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣೆ ಘೋಷಣೆಯಾದ ಬಳಿಕವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಯಾರೂ ಕೂಡ ಈ ಬಗ್ಗೆ ಮಾತನಾಡದೆ ಕೇವಲ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.

 ಚುನಾವಣಾ ಸಮಯದಲ್ಲಿಯೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ ಚುನಾವಣಾ ಸಮಯದಲ್ಲಿಯೇ ಮಂಡ್ಯದಲ್ಲಿ ರೈತ ಆತ್ಮಹತ್ಯೆ

ಇದೀಗ ತಾಲೂಕಿನ ಅರೆತಿಪ್ಪೂರು ಗ್ರಾಮದ ನಿವಾಸಿ ರಾಜೇಗೌಡನ ಎಂಬುವರ ಪುತ್ರ ಕೆಂಪರಾಜು(65) ಎಂಬುವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಕೆಂಪರಾಜು ಅವರು 2 ಎಕರೆ ಜಮೀನು ಹೊಂದಿದ್ದು, ಒಂದು ಎಕರೆ ಕಬ್ಬು ಮತ್ತು ಒಂದು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು. ಇದಕ್ಕಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಹಾಗೂ ಖಾಸಗಿ ವ್ಯಕ್ತಿಗಳಿಂದ 3 ಲಕ್ಷ ರೂ.ಕೈ ಸಾಲ ಮಾಡಿಕೊಂಡಿದ್ದರು.

 ವಿಚಿತ್ರ ಘಟನೆ: ತಹಸೀಲ್ದಾರ್ ಲಂಚ ಕೇಳಿದ್ದಕ್ಕೆ ರೈತ ಮಾಡಿದ್ದೇನು ಗೊತ್ತಾ? ವಿಚಿತ್ರ ಘಟನೆ: ತಹಸೀಲ್ದಾರ್ ಲಂಚ ಕೇಳಿದ್ದಕ್ಕೆ ರೈತ ಮಾಡಿದ್ದೇನು ಗೊತ್ತಾ?

Farmers suicide in Mandya are increasing

ಈ ನಡುವೆ ಬೆಳೆದ ಬೆಳೆಗೆ ನೀರಿಲ್ಲದ ಕಾರಣ ಒಣಗಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ನಷ್ಟಹೊಂದಿದ್ದರು. ಅಲ್ಲದೇ ಸಾಲಗಾರರು ಕೂಡ ಹಣ ವಾಪಾಸ್ ನೀಡುವಂತೆ ಒತ್ತಾಯಿಸತೊಡಗಿದ್ದರು. ಇದರಿಂದ ನೊಂದ ಅವರು ಸಾಲಗಾರರಿಗೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Farmers suicide in Mandya are increasing. Even after the announcement of the election, farmers are committing suicide. Now Farmer Kemparaju (65) has committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X