ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಭೀರ ಸ್ವರೂಪ ಪಡೆದ ಮಂಡ್ಯ ರೈತರ ಪ್ರತಿಭಟನೆ: ಕೆಆರ್‌ಎಸ್‌ಗೆ ಮುತ್ತಿಗೆ

|
Google Oneindia Kannada News

ಮಂಡ್ಯ, ಜೂನ್ 28: ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು ಕಾವೇರಿ, ಹೇಮಾವತಿ ನದಿಯಿಂದ ನೀರು ಬಿಡುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ರೈತರು ಮಾಡುತ್ತಿರುವ ಹೋರಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ರೈತರು ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿದ್ದಾರೆ, ಧರಣಿ ನಡೆಸುತ್ತಿದ್ದಾರೆ.ಮಂಡ್ಯದಲ್ಲಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಮಂಡ್ಯದ ಬೆಳೆಗೆ ಕಾವೇರಿ ನೀರು ಬಿಡುವಂತೆ ಸದಾನಂದ ಗೌಡ ಪತ್ರಮಂಡ್ಯದ ಬೆಳೆಗೆ ಕಾವೇರಿ ನೀರು ಬಿಡುವಂತೆ ಸದಾನಂದ ಗೌಡ ಪತ್ರ

ಇದೀಗ ಬೈಕ್ ಜಾಥಾ ಮೂಲಕ ಪ್ರತಿಭಟನೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಆರ್‌ಎಸ್‌ಗೆ ಮುತ್ತಿಗೆ ಹಾಕುವ ಸಾಧ್ಯತೆ ಇದ್ದು ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮೈಸೂರಿನ ವರುಣಾ ನಾಲಾ ವ್ಯಾಪ್ತಿಯ ರೈತರು ಹಾಗೂ ಮಂಡ್ಯ ರೈತರು ಕೆಆರ್‌ಎಸ್‌ ಜಲಾಶಯ ತಲುಪಲಿದ್ದಾರೆ.

Farmers protest continues in Mandya

ಜಲಾಶಯದ ಬಳಿ ಓರ್ವ ರೈತರೂ ಸುಳಿಯದಂತೆ ಭದ್ರತೆ ಕಲ್ಪಿಸಲಾಗಿದೆ. ನಾಲ್ಕು ಬಸ್, ನಾಲ್ಕು ಡಿಆರ್ ವಾಹನಗಳು ಸಿದ್ಧವಾಗಿವೆ. ಮಂಡ್ಯ, ಮೈಸೂರು ಭಾಗದ ರೈತರು ಕೃಷಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಯಾವ ಸಚಿವರೂ ಕೂಡ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ರೈತರ ಗೋಳಾಗಿದೆ. ಮಂಡ್ಯ ರೈತರಿಗೆ ಕಾವೇರಿ ನೀರು ಬಿಡುವಂತೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

English summary
The farmers protest, continued in Mandya, demanding Cauvery and Hemavati waters to canals for saving standing crops, enters eighth day today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X