ಶ್ರೀರಂಗಪಟ್ಟಣ ಡಿವೈಎಸ್ಪಿ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ತಿರುವು
ಮಂಡ್ಯ, ಅಕ್ಟೋಬರ್ 14 : ಶ್ರೀರಂಗಪಟ್ಟಣದ ಡಿವೈಎಸ್ಪಿ ಯೋಗಾನಂದ್ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಭಾನುವಾರ ಮನೆಯಲ್ಲಿ ಬಿದ್ದಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಯೋಗಾನಂದ್, "ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ, ಚೆನ್ನಾಗಿ ಇದ್ದೇನೆ. ಕೆಲವರು ನಾನು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ಹೇಳಿದರು.
ಮಂಡ್ಯ; ಆತ್ಮಹತ್ಯೆಗೆ ಯತ್ನಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ
"ಭಾನುವಾರ ಬೆಳಗ್ಗೆ ಎದ್ದು ಟಾಯ್ಲೆಟ್ಗೆ ಹೋದಾಗ ತಲೆಸುತ್ತು ಬಂದಿತ್ತು. ಈ ವೇಳೆ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ನಾನು ಚೆನ್ನಾಗಿಯೇ ಇದ್ದೇನೆ, ಆತ್ಮಹತ್ಯೆಗೆ ಯತ್ನಿಸಿಲ್ಲ" ಎಂದು ಯೋಗಾನಂದ್ ಸ್ಪಷ್ಟನೆ ನೀಡಿದರು.
ದೂರು ಕೊಡಲು ಬಂದವಳೊಂದಿಗೇ ಅಕ್ರಮ ಸಂಬಂಧ; ಪೊಲೀಸ್ ಮೇಲೆ ಕೇಸ್!
"ನನಗೆ ಬಿಪಿ ಮತ್ತು ಷುಗರ್ ಇರುವ ಕಾರಣದಿಂದ ಸ್ವಲ್ಪ ಮರೆವು ಇದೆ. ನಾನು ಈಗಲೂ ಚೆನ್ನಾಗಿದ್ದೇನೆ. ಅನಾರೋಗ್ಯದ ಕಾರಣ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ" ಎಂದು ಹೇಳಿದರು.
ದಾವಣಗೆರೆ: ಟ್ರಾಫಿಕ್ ಪೊಲೀಸ್ ಲಂಚಾವತಾರ ವಿಡಿಯೋದಲ್ಲಿ ಸೆರೆ
ಕೆಲವು ತಿಂಗಳ ಹಿಂದೆ ಶ್ರೀರಂಗಪಟ್ಟಣದ ಡಿವೈಎಸ್ಪಿಯಾಗಿ ನೇಮಕವಾಗಿದ್ದ ಯೋಗಾನಂದ್ ಬಾಬೂರಾಯನಕೊಪ್ಪಲಿನ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಮನೆಯಲ್ಲಿ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಯೋಗಾನಂದ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಆದ್ದರಿಂದ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿಗಳಿಗೆ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ.