ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಬಗ್ಗೆ ಗಾಸಿಪ್ ನಿಲ್ಲಿಸಿ: ಸಚಿವ ಪುಟ್ಟರಾಜು

|
Google Oneindia Kannada News

ಮಂಡ್ಯ, ಜೂನ್ 4: ಮಂಡ್ಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಹಿಂಪಡೆಯುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಪುಟ್ಟರಾಜು, ಗಾಸಿಪ್ ಗೆ ಆದ್ಯತೆ ಕೊಡಬೇಡಿ. ಇದುವರೆಗೆ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚು ಅನುದಾನವನ್ನು ಸಿಎಂ ಕುಮಾರಸ್ವಾಮಿ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಗಾಸಿಪ್ ಹಬ್ಬಿಸೋದೇ ಕೆಲಸ. ಈಗಾಗಲೇ ಸಿಎಂ ತಮ್ಮ ಕಾರ್ಯ ವೈಖರಿಯ ವೇಗ ಹೆಚ್ಚಿಸಿಕೊಂಡಿದ್ದಾರೆ. ಸಿಎಂ ಯಾವ ಕಾರಣಕ್ಕೂ ಮಂಡ್ಯ ಮರೆಯುವುದಿಲ್ಲ. ಯಾವುದೇ ಅನುದಾನವನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

 ರಾಜೀನಾಮೆಗೆ ಸಿದ್ಧನಿದ್ದೆ, ನಾಯಕರು ಬೇಡ ಅಂದರು: ಸಚಿವ ಪುಟ್ಟರಾಜು ರಾಜೀನಾಮೆಗೆ ಸಿದ್ಧನಿದ್ದೆ, ನಾಯಕರು ಬೇಡ ಅಂದರು: ಸಚಿವ ಪುಟ್ಟರಾಜು

ದೇವೇಗೌಡರ ಕುಟುಂಬ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಹೇಳಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪುಟ್ಟರಾಜು ತಿರುಗೇಟು ನೀಡಿದರು. ಶಿಕಾರಿಪುರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಹೀಗಾಗಿ ಮೊದಲು ಯಡಿಯೂರಪ್ಪನವರ ರಾಜೀನಾಮೆ ಕೊಡಿಸಲ ಎಂದು ಸವಾಲು ಹಾಕಿದರು.

Dont spread gossips about Mandya said Minister Puttaraju

 ಮುನಿಯಪ್ಪನನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದು: ಜೆಡಿಎಸ್ ಶಾಸಕ ಮುನಿಯಪ್ಪನನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದು: ಜೆಡಿಎಸ್ ಶಾಸಕ

ನಿಖಿಲ್ ಮಂಡ್ಯಕ್ಕೆ ಬಂದು, ಮಂಡ್ಯ ಜನರ ಜೊತೆಯಲ್ಲಿಯೇ ಇರುತ್ತಾರೆ. ಅಮಾವಾಸ್ಯೆ ಮುಗಿಸಿ ಬರಲು ಕಾಯುತ್ತಿದ್ದರು. ಅಮಾವಾಸ್ಯೆ ಮುಗಿದಿದೆ. ಇನ್ಮುಂದೆ ಮಂಡ್ಯಕ್ಕೆ ಬಂದು, ನಿಮ್ಮ ಜೊತೆಯಲ್ಲೇ ಇರುತ್ತಾರೆ. ತೋಟ ಖರೀದಿ, ಮನೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

English summary
Minister Puttaraju, responded to the gossip about withdrawal of funds for development of Mandya. he said, do not prefer gossip. CM Kumaraswamy will give more grants than ever announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X