ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಮಿಮ್ಸ್ ಆಸ್ಪತ್ರೆ ಬೆಡ್‌ನಲ್ಲಿ ಬೀದಿನಾಯಿಗಳ ನಿದ್ದೆ...

|
Google Oneindia Kannada News

ಮಂಡ್ಯ, ಅಕ್ಟೋಬರ್ 23: ಮಂಡ್ಯದ ಮಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಬಾಣಂತಿಯರು ಮಲಗಬೇಕಾದ ಹಾಸಿಗೆ ಮೇಲೆ ಬೀದಿನಾಯಿಗಳು ಮಲಗಿ ನಿದ್ದೆ ಮಾಡುತ್ತಿರುವ ದೃಶ್ಯವನ್ನು ನೋಡಿದರೆ ನಮ್ಮ ಸರ್ಕಾರಿ ವ್ಯವಸ್ಥೆಗೆ ತುಕ್ಕು ಹಿಡಿದಿದೆಯಾ ಎಂಬ ಅನುಮಾನ ಕಾಡಲಾರಂಭಿಸುತ್ತದೆ.

ಒಂದು ಕಡೆ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲಿ ವಾರ್ಡ್ ನ ಖಾಲಿ ಹಾಸಿಗೆ ಮೇಲೆ ಬೀದಿನಾಯಿಗಳು ಮಲಗಿ ನಿದ್ರಿಸುವುದನ್ನು ನೋಡಿದರೆ ಮಿಮ್ಸ್ ಆಡಳಿತ ಮಂಡಳಿಯೂ ನಿದ್ದೆ ಮಾಡುತ್ತಿದೆಯಾ? ಎನಿಸುತ್ತದೆ. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಉತ್ತಮ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದು, ಅವರ ಗಮನಕ್ಕೆ ಈ ಅವ್ಯವಸ್ಥೆ ಬಂದಿಲ್ಲವೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮುಂದೆ ಓದಿ...

 ಹಾಸಿಗೆ ಮೇಲೆ ಮಲಗುವ ಬೀದಿನಾಯಿಗಳು

ಹಾಸಿಗೆ ಮೇಲೆ ಮಲಗುವ ಬೀದಿನಾಯಿಗಳು

ಹೇಳೋರು ಕೇಳೋರು ಇಲ್ಲದೆ ಗಬ್ಬೆದ್ದು ಹೋಗಿದೆ ಹೆರಿಗೆ ವಾರ್ಡ್. ಇಲ್ಲಿಗೆ ದಾಖಲಾಗುವ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಆ ದೇವರೇ ಕಾಪಾಡಬೇಕು. ಅಲ್ಲಿನ ಸ್ಥಿತಿಯನ್ನೊಮ್ಮೆ ನೋಡಿದರೆ ನಮ್ಮ ಆಡಳಿತ ವ್ಯವಸ್ಥೆಯತ್ತ ವಾಕರಿಕೆ ಬರುತ್ತದೆ. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವವರ ಬಗ್ಗೆ ಅನುಕಂಪ ಮೂಡುತ್ತದೆ.

ವಿಡಿಯೋ ಮಾಡಿ ಹರಿಬಿಟ್ಟ ಕೊರೊನಾ ಸೋಂಕಿತ: ಸ್ಪಷ್ಟನೆ ನೀಡಿದ ಕ್ರಿಮ್ಸ್ವಿಡಿಯೋ ಮಾಡಿ ಹರಿಬಿಟ್ಟ ಕೊರೊನಾ ಸೋಂಕಿತ: ಸ್ಪಷ್ಟನೆ ನೀಡಿದ ಕ್ರಿಮ್ಸ್

ಒಮ್ಮೆ ಆಸ್ಪತ್ರೆಯ ಹೆರಿಗೆ ವಾರ್ಡ್ ‌ನತ್ತ ಹೆಜ್ಜೆ ಹಾಕಿ ನೋಡಿದರೆ ಅಲ್ಲಿನ ದುರಾವಸ್ಥೆ ಕಣ್ಣಿಗೆ ರಾಚುತ್ತದೆ. ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ನೆಲದಲ್ಲಿಯೇ ಮಲಗಿರುವ ಬಾಣಂತಿಯರು, ಹಾಸಿಗೆ ಮೇಲೆ ಮಲಗಿರುವ ನಾಯಿಗಳು, ಸ್ವಚ್ಛತೆಯಿಲ್ಲದೆ ಶೌಚಾಲಯದಿಂದ ಬರುವ ದುರ್ವಾಸನೆ, ರೋಗಿಗಳ ಆಹಾರಕ್ಕಾಗಿ ವಾರ್ಡ್ ‌ನೊಳಗೆ ನುಗ್ಗಿ ಬರುವ ಬೀದಿನಾಯಿಗಳು... ಹೀಗೆ ಒಂದೇ ಎರಡೇ, ಹತ್ತಾರು ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಇದನ್ನು ನೋಡಿದ ಮೇಲೆ ಇದನ್ನು ಆಸ್ಪತ್ರೆಯೆಂದು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತದೆ.

 ರೋಗಿಗಳು ನಾಯಿಗಿಂತ ಕೀಳಾಗಿ ಬಿಟ್ಟರಾ?

ರೋಗಿಗಳು ನಾಯಿಗಿಂತ ಕೀಳಾಗಿ ಬಿಟ್ಟರಾ?

ಸಮರ್ಪಕ ನಿರ್ವಹಣೆ ಇಲ್ಲದೆ ಸ್ವಚ್ಛತೆ ಕಣ್ಮರೆಯಾಗಿ ಅಶುಚಿತ್ವದ ತಾಣವಾಗಿರುವ ವಾರ್ಡ್ ‌ನಲ್ಲಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ನು ಹೆರಿಗೆ ವಾರ್ಡ್ ‌ನಲ್ಲಿ ಚಿಕಿತ್ಸೆಯಲ್ಲಿ ಬಳಸಲಾದ ತ್ಯಾಜ್ಯದ ರಾಶಿ ಅಲ್ಲಲ್ಲಿ ಕಾಣುತ್ತಿದ್ದು, ಎಲ್ಲೆಂದರೆಲ್ಲಿ ಬಟ್ಟೆ, ಪ್ಲಾಸ್ಟಿಕ್‌ಗಳು ಬಿದ್ದಿರುವುದು ಕಣ್ಣಿಗೆ ಕಾಣುತ್ತಿವೆ. ಶೌಚಾಲಯದಲ್ಲಿ ಸ್ವಚ್ಛತೆಯೇ ಇಲ್ಲದೆ ದುರ್ವಾಸನೆ ಸೂಸುತ್ತಿದ್ದು ಮೂಗು ಮುಚ್ಚಿ ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡಿನ ಒಳಗೆ ಬೀದಿನಾಯಿಗಳು ಪ್ರವೇಶ ಮಾಡುತ್ತಿದ್ದು, ರೋಗಿಗಳಿಗೆಂದು ಹಾಕಲಾಗಿರುವ ಹಾಸಿಗೆ ಮೇಲೆ ನಾಯಿಗಳು ಆರಾಮಾಗಿ ಮಲಗಿ ನಿದ್ದೆ ಮಾಡುತ್ತಿವೆ. ಇವುಗಳನ್ನು ಹೊರಗೆ ಓಡಿಸಲು ಕೂಡ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲವೆ? ಇದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರಾ? ಇಲ್ಲಿ ರೋಗಿಗಳು ನಾಯಿಗಿಂತಲೂ ಕೀಳಾಗಿ ಬಿಟ್ಟರಾ ಎಂಬ ಸಂಶಯ ಮೂಡುತ್ತದೆ.

 ಕ್ರಮ ಕೈಗೊಳ್ಳದ ಅಧಿಕಾರಿಗಳು

ಕ್ರಮ ಕೈಗೊಳ್ಳದ ಅಧಿಕಾರಿಗಳು

ಕಸದ ಡಬ್ಬಿಯಲ್ಲಿ ಆಹಾರವನ್ನು ನಾಯಿಗಳು ಹುಡುಕುವ ದೃಶ್ಯ ಸಾಮಾನ್ಯವಾಗಿದ್ದು ಇದರಿಂದ ಕಸ ಚೆಲ್ಲಾಪಿಲ್ಲಿಯಾಗಿ ಹರಡಿ ಅನೈರ್ಮಲ್ಯ ಸೃಷ್ಟಿ ಮಾಡಿದೆ. ಒಂದೆಡೆ ಬೆಡ್ ಗಳ ಕೊರತೆ ಇದೆ ಎಂಬ ಸಬೂಬು ನೀಡಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರನ್ನು ನೆಲದಲ್ಲಿ ಮಲಗಿಸುತ್ತಿದ್ದರೆ, ಮತ್ತೊಂದೆಡೆ ಖಾಲಿ ಬೆಡ್ ಗಳ ಮೇಲೆ ನಾಯಿಗಳು ಮಲಗಿರುವ ದೃಶ್ಯ ಕಾಣಿಸುತ್ತದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಸಬೂಬು ಹೇಳುತ್ತಾರೆ ವಿನಃ ತುರ್ತಾಗಿ ಕ್ರಮ ವಹಿಸಲು ಮುಂದಾಗುತ್ತಿಲ್ಲ.

ಮೃತದೇಹಗಳನ್ನಿಡಲು ಫ್ರೀಜರ್ ಇಲ್ಲ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಮೃತದೇಹಗಳನ್ನಿಡಲು ಫ್ರೀಜರ್ ಇಲ್ಲ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವ

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada
 ಸ್ವಚ್ಛತೆ-ಸುರಕ್ಷತೆಗೆ ಆದ್ಯತೆ ನೀಡುತ್ತಾರಾ?

ಸ್ವಚ್ಛತೆ-ಸುರಕ್ಷತೆಗೆ ಆದ್ಯತೆ ನೀಡುತ್ತಾರಾ?

ಅದು ಏನೇ ಇರಲಿ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಸುರಕ್ಷಿತ ತಾಣವಾಗಬೇಕಿದ್ದ ಮಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ ಬೇಜವಾಬ್ದಾರಿ, ಅವ್ಯವಸ್ಥೆ, ಅಶುಚಿತ್ವದ ಆಗರವಾಗಿರುವುದು ಬೇಸರದ ಸಂಗತಿಯಾಗಿದೆ. ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಿ ಸ್ವಚ್ಛತೆಯ ಜೊತೆಗೆ ಸುರಕ್ಷಿತ ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿದೆ. ಅದನ್ನು ಸಂಬಂಧಿಸಿದವರು ಶೀಘ್ರವೇ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Dogs are sleeping on beds which are meant for people. Once you step into the labor ward of the hospital, you will see negligence of hospital administration
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X