ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಸ್ಥಾನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ: ಅರ್ಚಕನ ವಜಾಕ್ಕೆ ಆಗ್ರಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೇಲುಕೋಟೆ, ಫೆಬ್ರವರಿ 07 : ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಅರ್ಚಕ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿದ ಪ್ರಕರಣ ಪ್ರಧಾನ ಅರ್ಚಕರನ್ನು ವಜಾಗೊಳಿಸುವಂತೆ ಸಮಿತಿ ಅಧ್ಯಕ್ಷ ಆರ್. ಗಿರಿಜೇಶ್ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಎನ್ನುವುದು ಪವಿತ್ರ ಜಾಗ, ದಿನಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಿರುತ್ತಾರೆ. ಅಂತಹ ಜಾಗದಲ್ಲಿ ಅಶ್ಲೀಲ ವಿಡೀಯೋ ವೀಕ್ಷಣೆ ಮಾಡಿದ ಪ್ರಧಾನ ಅರ್ಚಕ ನಾರಾಯಣ ಭಟ್ಟ ಅವರನ್ನು ವಜಾಗೊಳಸಿವಂತೆ ಮೇಲುಕೋಟೆ ದೇವಾಲಯಗಳ ರಕ್ಷಣಾ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.

ಮೇಲುಕೋಟೆ ಅರ್ಚಕರ ಮೊಬೈಲ್ ನಲ್ಲಿ ಪೋಲಿ ವಿಡಿಯೋಮೇಲುಕೋಟೆ ಅರ್ಚಕರ ಮೊಬೈಲ್ ನಲ್ಲಿ ಪೋಲಿ ವಿಡಿಯೋ

ಕೋರ್ಟ್ ನಿರ್ದೇಶನದಂತೆ ಅರ್ಚಕನ ವಿರುದ್ಧ ಎಫ್.ಐ.ಆರ್. ದಾಖಲಾದರೂ ಕ್ರಮ ತೆಗೆದುಕೊಂಡಿಲ್ಲ. ಗಂಭೀರ ಆರೋಪ ನಾರಾಯಣ ಭಟ್ಟರ ಮೇಲಿದ್ದರೂ ಈಗಲೇ ದೇವರಿಗೆ ಅವರೇ ಪೂಜೆ ಸಲ್ಲಿಸುತ್ತಿದ್ದಾರೆ. ಅರ್ಚಕ ನಾರಾಯಣ ಭಟ್ಟ ಸರ್ಕಾರಿ ಆದೇಶವನ್ನು ಮೀರಿ ದೇವಾಲಯದಲ್ಲಿ ಮೊಬೈಲ್ ಬಳಸಿದ್ದಾರೆ ಎಂದು ಆರೋಪಿಸಿದರು.

Dismissal sought for Melukote temple tainted priest

ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಕೂಡಲೇ ಮುಜರಾಯಿ ಸಚಿವರು ಆತನನ್ನ ವಜಾ ಮಾಡಬೇಕು. ಕೂಡಲೇ ಮೇಲು ಕೋಟೆ ಯೋಗಾನರಸಿಂಹ ಸ್ವಾಮಿ ದೇವಾಲಕ್ಕೆ ಬೇರೊಬ್ಬ ಅರ್ಚಕರನ್ನು ನೇಮಿಸುವಂತೆ ಒತ್ತಾಯ.

English summary
Melukote temple protection committee sought dismissal of chief priest of the temple who was alleged sought porn video in the temple. The committee alleged that despite court direction, police stoll have not been filed FIR against the priest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X