• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆರೆತೊಣ್ಣೂರಿನ ಕೆರೆಯಲ್ಲಿ ನಡೆದ ಅಣುಕು ಪ್ರದರ್ಶನ -ಕಾರ್ಯಾಗಾರಕ್ಕೆ ಮಂಡ್ಯ ಜಿಲ್ಲಾಧಿಕಾರಿ ಚಾಲನೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 27: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ವತಿಯಿಂದ ವಿಪತ್ತು ನಿರ್ವಹಣೆ ಕುರಿತು ಪಾಂಡವಪುರ ತಾಲೂಕಿನ ಕೆರೆತೊಣ್ಣೂರಿನ ಕೆರೆಯಲ್ಲಿ ಆಯೋಜಿಸಲಾಗಿದ್ದ ಅಣುಕು ಪ್ರದರ್ಶನ ಮತ್ತು ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಶುಕ್ರವಾರ ಚಾಲನೆ ನೀಡಿದರು.

ಕಾರ್ಯಾಗಾರದಲ್ಲಿ ವಿಪತ್ತು ನಿರ್ವಹಣೆ ಕುರಿತು ಎನ್‌ಡಿಆರ್ಎಫ್ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಂದ ವಿಪತ್ತು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ಜನರಿಗೆ ಅರಿವು ಮೂಡಿಸಿದರು.

ಅಮ್ಮನಿಗಾಗಿ ಕಾವೇರಿ ನದಿಗೆ BMW ಕಾರನ್ನೇ ತರ್ಪಣ ಬಿಟ್ಟ ಮಗ!ಅಮ್ಮನಿಗಾಗಿ ಕಾವೇರಿ ನದಿಗೆ BMW ಕಾರನ್ನೇ ತರ್ಪಣ ಬಿಟ್ಟ ಮಗ!

ಯಾರಾದರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ ಮತ್ತು ಅತಿವೃಷ್ಠಿಯಿಂದ ಪ್ರವಾಹ ಎದುರಾದ ವೇಳೆ ನೀರಿನಲ್ಲಿ ಕೊಚ್ಚಿ ಹೋಗುವ ಜನರನ್ನು ಹೇಗೆ ರಕ್ಷಣೆ ಮಾಡಬೇಕು, ಅನುಸರಿಸಬೇಕಾದ ಕ್ರಮ ಏನೂ? ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ರಕ್ಷಿಸಿದ ಬಳಿಕ ಹೇಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ರವಾನಿಸುವ ಕ್ರಮಗಳು, ನೀರುಕುಡಿದ ವ್ಯಕ್ತಿಯ ದೇಹದಿಂದ ನೀರು ಹೊರತೆಗೆಯುವುದು ಹೇಗೆ. ದೋಣಿ ಅವಘಡಗಳು, ಜಲವಿಪತ್ತು ಎದುರಾದ ಸಂದರ್ಭದಲ್ಲಿ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸಬೇಕು. ನೀರಿಗೆ ಇಳಿಯುವಾಗ ರಕ್ಷಣಾ ಜಾಕೇಟ್ ಬಳಕೆ, ಮನೆಯಲ್ಲಿ ಲಭ್ಯವಾಗುವ ತೆಂಗಿನಕಾಯಿ, ಖಾಲಿ ವಾಟರ್ ಬಾಟಲು ಹಾಗೂ ಖಾಲಿ ಬಿಂದಿಗೆಗಳನ್ನು ಬಳಸಿಕೊಂಡು ನೀರಿನಲ್ಲಿ ಈಜುವುದು ಹೇಗೆ ಎಂಬದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಜಿಲ್ಲಾಧಿಕಾರಿ ಅಶ್ವಥಿ ಮಾತನಾಡಿ, ವಿಪತ್ತು ಎದುರಾದಂತಹ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಅಗ್ನಿಶಾಮಕ ದಳದವರು ಅಣುಕು ಪ್ರದರ್ಶನದ ಕಾರ್ಯಾಗಾರದಲ್ಲಿ ತುಂಬಾ ಚೆನ್ನಾಗಿ ಪ್ರಾತ್ಯಕ್ಷಿಕೆ ನೀಡಿದ್ದಾರೆ.

ಮಂಡ್ಯ; 5 ರೂ. ಡಾಕ್ಟರ್‌ ಶಂಕರೇಗೌಡರಿಗೆ ಹೃದಯಾಘಾತಮಂಡ್ಯ; 5 ರೂ. ಡಾಕ್ಟರ್‌ ಶಂಕರೇಗೌಡರಿಗೆ ಹೃದಯಾಘಾತ

ಜಿಲ್ಲೆಯ ಎನ್‌ಡಿಆರ್ಎಫ್ ತಂಡ ಹಾಗೂ ಅಗ್ನಿ ಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತುಂಬಾ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಗತ್ಯವಿರುವ ಎಲ್ಲಾ ರೀತಿ ಸಲಕರಣೆಗಳನ್ನು ಒದಗಿಸಿಕೊಡಲಾಗಿದೆ. ಪ್ರವಾಹ ಎದುರಾದಂತಹ ಸಂದರ್ಭದಲ್ಲಿ ಜನ, ಜಾನುವಾರುಗಳು ಮತ್ತು ಆಸ್ತಿ ರಕ್ಷಣೆ ಮಾಡಲು ಈ ತಂಡಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿವೆ. ಜತೆಗೆ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ರಕ್ಷಣೆ ಮಾಡುವ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.

Disaster Management workshop and Demo in Mandya

ಎಲ್ಲಾ ಗ್ರಾಪಂ ಮಟ್ಟದಲ್ಲೂ ಅರಿವು ಮೂಡಿಸಬೇಕು

ಜಿಲ್ಲೆಯಲ್ಲಿ ಕೆಆರ್ಎಸ್, ಹೇಮಾವತಿ ಹಾಗೂ ಮಾರ್ಕೋನಹಳ್ಳಿ ಜಲಾಶಯಗಳಿಂದ ಅಧಿಕ ನೀರನ್ನು ನದಿಗೆ ಹರಿಸಿದ್ದಾಗ ಪ್ರವಾಹ ಸಂಭವಿಸಬಹುದು. ಪ್ರವಾಹ ಎದುರಾದಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಪ್ರವಾಹವನ್ನು ಹೇಗೆ ಎದುರಿಸಬೇಕು, ಲಭ್ಯ ವಸ್ತುಗಳನ್ನು ಬಳಕೆ ಮಾಡಿಕೊಂಡು ಹೇಗೆ ರಕ್ಷಣೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ಎಲ್ಲಾ ಗ್ರಾಪಂ ಮಟ್ಟದಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎನ್ನುವುದೇ ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಪಂ ಸಿಇಓ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಂದ್ರ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ಎಸ್.ಎಲ್.ನಯನ, ಜಿಲ್ಲಾ ವಾರ್ತಾಧಿಕಾರಿ ನಿರ್ಮಲ, ತಾಪಂ ಇಓ ಆರ್.ಪಿ.ಮಹೇಶ್, ಪುರಸಭೆಯ ಮುಖ್ಯಾಧಿಕಾರಿ ವೀಣಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

(ಒನ್ಇಂಡಿಯಾ ಸುದ್ದಿ)

English summary
NDRF and Fire Dept Personnel staged a mock show and workshop on disaster management at Keretonnuru village in Pandavapura taluk of Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X