ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ

By ಸಿ.ಟಿ ಮಂಜುನಾಥ್, ಮಂಡ್ಯ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 19: ಪೊಲೀಸ್‌ ಇಲಾಖೆ ಮಾಹಿತಿ ಪ್ರಕಾರ ಮಂಡ್ಯ, ದಕ್ಷಿಣ ಕನ್ನಡ, ಕೆಜಿಎಫ್‌ (ಕೋಲಾರ), ರಾಮನಗರ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು, ಶಿವಮೊಗ್ಗದಲ್ಲಿ ಬಾಂಗ್ಲಾದೇಶದ ಆಗಮಿಸಿದ ಅಕ್ರಮ ವಲಸಿಗರು ನೆಲೆಸಿದ್ದಾರೆ.

ಬಾಂಗ್ಲಾ ವಲಸಿಗರ ಮಾಫಿಯಾ ಬಗ್ಗೆ ಪೊಲೀಸ್‌ ಇಲಾಖೆಯ ಎಲ್ಲ ಹಂತದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೂ ಕೂಡ ಸರ್ಕಾರ ಅವರನ್ನು ಗಡಿಪಾರು ಮಾಡಲು ಮೀನಾ ಮೇಷ ಎಣಿಸುತ್ತಿದ್ದು, ಮತ ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರ ಮಾಡುತ್ತಿದೆ.

Deport illegal Bangladeshi immigrants and Rohingya Muslims

ದೇಶದಲ್ಲಿನ ಅಕ್ರಮ ವಲಸಿಗರ ಪೈಕಿ ಶೇ. 20ರಷ್ಟು ಕೋಲ್ಕತಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮತ್ತು ಶೇ.80 ರಷ್ಟು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ 40 ಸಾವಿರಕ್ಕಿಂತ ಹೆಚ್ಚು ಹಾಗೂ ರಾಜ್ಯಾದ್ಯಂತ 70 ಸಾವಿರಕ್ಕೂ ಹೆಚ್ಚು ಬಾಂಗ್ಲಾ ವಲಸಿಗರಿದ್ದಾರೆ.

ಬೆಂಗಳೂರು ಸೇರಿದಂತೆ ಪಿರಿಯಾಪಟ್ಟಣ, ಮೈಸೂರು , ಮಂಡ್ಯ, ಕೊಳ್ಳೇಗಾಲ, ಕೊಡಗು, ಚಾಮರಾಜನಗರ, ಹುಣಸೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಾಸವಿರುವ ಇವರಿಗೆ ಸ್ಥಳೀಯರು ನೆರವು ನೀಡುತ್ತಿದ್ದಾರೆ.

ಸ್ಥಳೀಯ ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಕಾರ್ಯಕರ್ತರುಗಳು ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ , ರೇಷನ್ ಕಾರ್ಡ್ . ಪಾನ್ ಕಾರ್ಡ್ ಸೃಷ್ಟಿ ಮಾಡಿ ಕೊಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ವಲಸಿಗರು ವೈಶ್ಯಾವಾಟಿಕೆ , ಡಕಾಯಿತಿ , ಕಳ್ಳತನ ಸೇರಿದಂತೆ ಹಲವು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ.

ಕೆಲವು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಮತ ಬ್ಯಾಂಕ್ ಸೃಷ್ಠಿಸಲು ಮತದಾರರ ಪಟ್ಟಿಯಲ್ಲಿ ವಲಸಿಗರ ಹೆಸರನ್ನು ಸೇರಿಸುವ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ.

ಇದು ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯಕ್ಕೆ ಮಾರಕವಾಗಲಿದ್ದು , ಕರ್ನಾಟಕವನ್ನು ಭಯೋತ್ಪಾದಕರ ಗೂಡನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ಕೂಡಲೇ ರಾಜ್ಯ ಸರ್ಕಾರ ಇತ್ತ ಗಮನ ಹರಿಸಿ ರಾಜ್ಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರು ಮಾಡಬೇಕು. ಮತ್ತು ಅಕ್ರಮ ವಲಸಿಗರಿಗೆ ನೆಲೆಯೂರಲು ಸಹಾಯ ಮಾಡುವ ಸ್ಥಳೀಯರನ್ನು ದೇಶದ್ರೋಹದ ಕೇಸ್ ದಾಖಲು ಮಾಡಿ ಜೈಲಿಗೆ ಅಟ್ಟಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ.
(ಲೇಖಕರು ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರು)

English summary
Mandya's BJP leader CT Manjunath has demanded that illegal Bangladeshi immigrants and Rohingya Muslims be deported from the Karnataka state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X