ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಯೋಧ ಗುರು ಅಂತ್ಯಕ್ರಿಯೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ

|
Google Oneindia Kannada News

ಮಂಡ್ಯ, ಫೆಬ್ರವರಿ 16: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಅಂತ್ಯಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆಯಲಿದ್ದು, ಅಂತ್ಯಕ್ರಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಲಿದ್ದಾರೆ.

ಪುಲ್ವಾಮಾ ದಾಳಿಯ ಲೇವಡಿ: ಎನ್‌ಡಿಟಿವಿಯ ನಿಧಿ ಸೇಥಿ ಅಮಾನತು ಪುಲ್ವಾಮಾ ದಾಳಿಯ ಲೇವಡಿ: ಎನ್‌ಡಿಟಿವಿಯ ನಿಧಿ ಸೇಥಿ ಅಮಾನತು

ಗುರು ಅವರ ಹುಟ್ಟೂರು ಮಂಡ್ಯದ ಮದ್ದೂರಿ ತಾಲ್ಲೂಕಿನ ಗುಡಿಗೆರೆ ಗ್ರಾಮದಲ್ಲಿ ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಮದ್ಯಾಹ್ನ 3 ಗಂಟೆ ವೇಳೆಗೆ ಮಂಡ್ಯವನ್ನು ಗುರು ಅವರ ಪಾರ್ಥಿವ ಶರೀರ ತಲುಪಲಿದೆ.

ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿ ದಾಖಲೆ ಬೇಡ ಎಂದು ಯೋಧನ ವಿಮೆ ಹಣ ನೀಡಿ ಮಾನವೀಯತೆ ಮೆರೆದ ಎಲ್‌ಐಸಿ

ಅಂತ್ಯಕ್ರಿಯೆಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ, ಅವರು ತಮ್ಮ ಎರಡು ದಿನದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಮಂಡ್ಯದ ಯೋಧನ ಅಂತಿಮದರ್ಶನವನ್ನು ಹುಟ್ಟೂರಿನಲ್ಲಿ ಪಡೆದ ಬಳಿಕ ಇಲ್ಲಿಂದ ವಿಶೇಷ ವಿಮಾನದಲ್ಲಿ ತಮಿಳುನಾಡಿಗೆ ಅವರು ತೆರಳಲಿದ್ದಾರೆ.

Defense minister Nirmala Sitaraman will present in soldier Guru last ritual

ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ಮುಖಂಡ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು ಸ್ಥಳೀಯ ಮುಖಂಡರು ಮಂಡ್ಯದ ಹುತಾತ್ಮ ಯೋಧ ಗುರು ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಪುಲ್ವಾಮಾ ದಾಳಿ ರೂವಾರಿ ಅಬ್ದುಲ್ ರಶೀದ್ ಗಾಜಿ ಸುಳಿವು ಪತ್ತೆ ಪುಲ್ವಾಮಾ ದಾಳಿ ರೂವಾರಿ ಅಬ್ದುಲ್ ರಶೀದ್ ಗಾಜಿ ಸುಳಿವು ಪತ್ತೆ

ಅಂತಿಮ ದರ್ಶನಕ್ಕೆ ಒಂದು ಗಂಟೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ಈಗಾಗಲೇ ತಿಳಿಸಿದ್ದು, ಸಂಜೆ ವೇಳೆಗೆ ಗುಡಿಗೆರೆಯ ಸರ್ಕಾರಿ ಜಮೀನಿನಲ್ಲಿ ಗುರು ಅವರ ಅಂತ್ಯಸರ್ಕಾರ ನಡೆಯಲಿದೆ.

English summary
Defense Minister Nirmala Sitaraman coming to Mandya to participate in last ritual of martyr soldier Guru. Then she will leave to Tamilnadu to pay last respect to an other soldier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X