ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿ ಹುಡುಕಿಕೊಂಡು ಸ್ವೀಡನ್ ನಿಂದ ಮಂಡ್ಯಕ್ಕೆ ಬಂದ ಮಗಳು

ದೂರದ ಸ್ವೀಡನ್ ದೇಶದಿಂದ ಮಂಡ್ಯ ಜಿಲ್ಲೆ ಮದ್ದೂರಿಗೆ ತಂದೆ-ತಾಯಿಯನ್ನು ಹುಡುಕಿಕೊಂಡು ಬಂದ ಮಗಳಿಗೆ ಶಾಕ್ ಆಗಿದೆ.

|
Google Oneindia Kannada News

ಮಂಡ್ಯ, ಫೆಬ್ರವರಿ 23: ದೂರದ ಸ್ವೀಡನ್ ದೇಶದಿಂದ ಮಂಡ್ಯ ಜಿಲ್ಲೆ ಮದ್ದೂರಿಗೆ ತಂದೆ-ತಾಯಿಯನ್ನು ಹುಡುಕಿಕೊಂಡು ಬಂದ ಮಗಳಿಗೆ ಶಾಕ್ ಆಗಿದೆ.

ಜೋಲಿ ಎಂಬ ಮಹಿಳೆ ಗಂಡ ಎರಿಕ್ ಜೊತೆಗೆ ಸ್ವೀಡನ್ ದೇಶದಿಂದ ಮಂಡ್ಯಕ್ಕೆ ಆಗಮಿಸಿದ್ದಾರೆ. 29 ವರ್ಷದ ಬಳಿಕ ಬಂದಿರುವ ಜೋಲಿ ತಂದೆ-ತಾಯಿ, ಸಂಬಂಧಿಕರನ್ನು ಹುಡುಕತೊಡಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನ ಜಯಮ್ಮ, ಬೋರೇಗೌಡ ದಂಪತಿಯ ಪುತ್ರಿಯಾಗಿರುವ ಜೋಲಿ 1993 ರಲ್ಲಿ 6 ವರ್ಷದ ಬಾಲಕಿಯಾಗಿದ್ದು ಜಯಮ್ಮ ಅವರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.

ಮಂಡ್ಯದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಮಂಡ್ಯದಲ್ಲಿ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆ

ಚಿಕಿತ್ಸೆಗೆ ಬಂದಿದ್ದ ಜಯಮ್ಮ ಮಗಳನ್ನು ಸಾಕಲಾಗದೇ ಬೆಂಗಳೂರು ಇಂದಿರಾನಗರದಲ್ಲಿರುವ ಆಶ್ರಯ ದತ್ತು ಕೇಂದ್ರದಲ್ಲಿ ಮಗಳನ್ನು ಬಿಟ್ಟು ಹೋಗಿದ್ದರು. ಸ್ವೀಡನ್ ದೇಶದ ದಂಪತಿ ಜೋಲಿಯನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

Daughter Who Came To Mandya From Sweden In Search Of Her Mother

ಇತ್ತೀಚೆಗೆ ತನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡ ಕನಸು ಜೋಲಿಗೆ ಬಿದ್ದಿದ್ದು ಪೋಷಕರ ಬಳಿ ತಾನು ಯಾರು ಎಂಬುದನ್ನು ಪ್ರಶ್ನಿಸಿದ್ದಾಳೆ. ಪೋಷಕರು 29 ವರ್ಷದ ಹಿಂದೆ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೋಲಿ ಪತಿ ಎರಿಕ್ ಕರೆದುಕೊಂಡು ಬಂದು ತನ್ನ ತಂದೆ-ತಾಯಿ ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದಾರೆ.

ಹುತಾತ್ಮ ಯೋಧ ಎಚ್ ಗುರು ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ರೂ. ಬಿಡುಗಡೆಗೆ ಆದೇಶಹುತಾತ್ಮ ಯೋಧ ಎಚ್ ಗುರು ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ರೂ. ಬಿಡುಗಡೆಗೆ ಆದೇಶ

ಆಕೆಗೆ ಕನಸು ಬಿದ್ದಂತೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಚಿಕ್ಕವಳಿದ್ದಾಗ ಓಡಾಡಿದ್ದ ನಾಲೆಯ ಬಳಿಯೇ ತಾಯಿ ಆತ್ಮಹತ್ಯೆ ಮಾಡಿಕೊಂಡಂತೆ ಕನಸು ಬಿದ್ದಿದ್ದಾಗಿ ಹೇಳಿದ್ದಾರೆ. ನಾಲೆಯ ಬಳಿಗೆ ಬಂದ ಜೋಲಿ ಇಲ್ಲೇ ಓಡಾಡಿದ್ದಾಗಿ ಹೇಳಿದ್ದಾರೆ.

ಆದರೆ, ಜನರಿಗೆ ಆಕೆ ಹೇಳಿದ ಜಯಮ್ಮ, ಬೋರೇಗೌಡರ ಬಗ್ಗೆ ಮಾಹಿತಿ ತಿಳಿದಿಲ್ಲ. ದೂರದಿಂದ ತಂದೆ, ತಾಯಿ ಹುಡುಕಿಕೊಂಡು ಬಂದಿರುವ ಜೋಲಿ ಪತಿಯೊಂದಿಗೆ ಹುಡುಕಾಟ ಮುಂದುವರೆಸಿದ್ದಾರೆ.

English summary
Joli who came to Mandya from Sweden for search her mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X