• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?

|
   ಎಚ್ ಡಿ ಕೆ ವಿರುದ್ಧ ನಿಂತು ಸುಮಲತಾಗೆ ಸಾಥ್ ಕೊಟ್ಟ ಯಶ್ ದರ್ಶನ ಧೈರ್ಯವನ್ನ ಮೆಚ್ಚಲೇಬೇಕು

   ಮಂಡ್ಯ ಲೋಕಸಭಾ ಕ್ಷೇತ್ರದ ಆಖಾಡ, ಕನ್ನಡ ಚಿತ್ರೋದ್ಯಮವನ್ನು ಇಕ್ಕಟ್ಟಿಗೆ ಸಿಲುಕಿಸಿದಂತೂ ಹೌದು. ರಾಜ್, ವಿಷ್ಣು ನಂತರ ಚಿತ್ರೋದ್ಯಮಕ್ಕೆ ಅಣ್ಣನ ಮತ್ತು ಟ್ರಬಲ್ ಶೂಟರ್ ಸ್ಥಾನದಲ್ಲಿ ನಿಂತಿದ್ದ ಅಂಬರೀಶ್ ಅವರ ಪತ್ನಿ ಸುಮಲತಾ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರ ಚಿತ್ರೋದ್ಯಮದ ಕೆಲವು ಸದಸ್ಯರು ಅಂಬರೀಶ್ ಫ್ಯಾಮಿಲಿ ಪರವಗಿ ನಿಂತರೆ, ಇನ್ನಷ್ಟು ಅನ್ನುವುದಕ್ಕಿಂತ ಬಹುತೇಕ ಕಲಾವಿದರು ತಟಸ್ಥ ಧೋರಣೆಯನ್ನು ತಾಳಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಸುಮಲತಾ ವಿರುದ್ದದ ಅಭ್ಯರ್ಥಿ ರಾಜ್ಯದ ಮುಖ್ಯಮಂತ್ರಿಗಳ ಮಗ ಎನ್ನುವ ಕಾರಣಕ್ಕಾಗಿ, ಬಹುತೇಕ ಚಿತ್ರೋದ್ಯಮದ ಸದಸ್ಯರು 'ನಮಗ್ಯಾಕೆ' ಎಂದು ಸುಮ್ಮನಾದರು. ಅದೇ ಒಂದು ವೇಳೆ, ನಿಖಿಲ್ ಜಾಗದಲ್ಲಿ ಬೇರೆ ಯಾರಾದರೂ ಅಭ್ಯರ್ಥಿಯಾಗಿದ್ದರೆ, ಇಡೀ ಕನ್ನಡ ಚಿತ್ರೋದ್ಯಮ ಸುಮಲತಾ ಪರ ನಿಲ್ಲುತ್ತಿತ್ತೋ ಏನೋ ಎನ್ನುವ ಮಾತು ಮಂಡ್ಯದಲ್ಲಿ ಹರಿದಾಡುತ್ತಿತ್ತು.

   ನಿಖಿಲ್ ಗೆಲುವಿಗೆ 150 ಕೋಟಿ: ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು?

   ನಿಖಿಲ್ ವಿರುದ್ದ ಪ್ರಚಾರಕ್ಕೆ ನಿಂತರೆ, ಮುಂದೆ ಏನಾಗಬಹುದು ಎನ್ನುವುದನ್ನು ಅರಿತ ಬಹುತೇಕ ಕಲಾವಿದರು ತಮ್ಮ ಪಾಡಿಗೆ ಶೂಟಿಂಗ್ ನಲ್ಲಿ ಬ್ಯೂಸಿಯಾದರು. ಸುದೀಪ್ ಪ್ರಚಾರಕ್ಕೆ ಬರಲು ಆಗುವುದಿಲ್ಲ ಎಂದು ಹೇಳಿದರೆ, ನಮಗೂ ರಾಜಕೀಯಕ್ಕೂ ಆಗಿಬರುವುದಿಲ್ಲ ಎಂದು ರಾಜ್ ಕುಟುಂಬ ಹೇಳಿತು.

   ಬೆಂಗಳೂರಲ್ಲಿ ಮತದಾನ ಮತ್ತೆ ಅಧಃಪತನ: ಇದಾ ನಿಜವಾದ ಕಾರಣ?

   ಆ ಸಂದರ್ಭದಲ್ಲಿ ಚಿತ್ರೋದ್ಯಮದ ಮೈನ್ ಸ್ಟ್ರೀಂ ನಟರಲ್ಲಿ ಸುಮಲತಾ ಪರವಾಗಿ ನಿಂತವರು ದರ್ಶನ್ ಮತ್ತು ಯಶ್ ಎನ್ನುವ ಜೋಡೆತ್ತುಗಳು. ಸುಮಲತಾ ನಾಮಪತ್ರ ಸಲ್ಲಿಸಿದ ನಂತರ, ಇಬ್ಬರು ನಟರು ಪ್ರಚಾರದಿಂದ ದೂರ ಸರಿಯಬಹುದು ಎನ್ನುವ ಆವೇಳೆ ಹರಿದಾಡುತ್ತಿದ್ದ ಸುದ್ದಿಗೆ ವಿರುದ್ದವಾಗಿ, ಚುನಾವಣೆ ಮುಗಿಯವರೆಗೂ ಸುಮಲತಾ ಪರವಾಗಿ ಈ ಇಬ್ಬರು ನಟರು ನಿಂತರು.

   ದರ್ಶನ್ ಮತ್ತು ಯಶ್, ಸುಮಲತಾ ಬೆನ್ನಿಗೆ ನಿಂತರು

   ದರ್ಶನ್ ಮತ್ತು ಯಶ್, ಸುಮಲತಾ ಬೆನ್ನಿಗೆ ನಿಂತರು

   ಇವರಿಬ್ಬರನ್ನು ಹೊರತು ಪಡಿಸಿ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ, ನೆನಪಿರಲಿ ಪ್ರೇಮ್ ಮತ್ತು ಕೆಲವರು ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಂಡರು. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಕೂಡಾ ಕುಮಾರಸ್ವಾಮಿ ಪರವಾಗಿ ನಿಂತರು. ಚುನಾವಣೆಯ ನಂತರ ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬದ ಜೊತೆ ಇವರುಗಳ ಸಂಬಂಧ ಉತ್ತಮವಾಗಿರಬಹುದು ಎನ್ನುವ ಖಾತ್ರಿಯಿಲ್ಲ ಎನ್ನುವುದನ್ನು ಅರಿತೂ ದರ್ಶನ್ ಮತ್ತು ಯಶ್, ಸುಮಲತಾ ಬೆನ್ನಿಗೆ ನಿಂತರು.

   ಸುಮಲತಾ, ದರ್ಶನ್, ಯಶ್ ವರ್ಸಸ್ ಸಿಎಂ ಕುಟುಂಬ

   ಸುಮಲತಾ, ದರ್ಶನ್, ಯಶ್ ವರ್ಸಸ್ ಸಿಎಂ ಕುಟುಂಬ

   ಚುನಾವಣಾ ಪ್ರಚಾರದ ವೇಳೆ, ಸುಮಲತಾ, ದರ್ಶನ್, ಯಶ್ Vs ಸಿಎಂ ಕುಟುಂಬದ ನಡುವೆ ನಡೆದ ವಾಗ್ಯುದ್ದದ ಸರಮಾಲೆಗಳು, 'ಜೋಡೆತ್ತು, ಕಳ್ಳಎತ್ತು' ಎನ್ನುವ ಪದಗಳನ್ನು ಹುಟ್ಟುಹಾಕಿತು. ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನದವರೆಗೆ ಸುಮ್ಮನಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂತಿಮ ದಿನ, ಮುಖ್ಯಮಂತ್ರಿಗಳ ವಿರುದ್ದ ಸುಂಟರಗಾಳಿಯನ್ನೇ ಬೀಸಿದರು. ನಾಮಪತ್ರ ಸಲ್ಲಿಸಿದ ದಿನದ ನಂತರದಿಂದ ಕೊನೆಯವರೆಗೂ ಬಂದ ಎಲ್ಲಾ ಟೀಕೆಗಳಿಗೂ ಖಡಕ್ ಉತ್ತರವನ್ನು ದರ್ಶನ್ ನೀಡಿದರು.

   ಬೆಸಗರಳ್ಳಿ ಜತೆಗಿನ ಭಾವನಾತ್ಮಕ ನಂಟು ತೆರೆದಿಟ್ಟ ಸುಮಲತಾ ಅಂಬರೀಶ್

   ಯಶ್, ಪ್ರತೀ ಪ್ರಚಾರದಲ್ಲೂ ಉತ್ತರವನ್ನು ನೀಡುತ್ತಲೇ ಬಂದರು

   ಯಶ್, ಪ್ರತೀ ಪ್ರಚಾರದಲ್ಲೂ ಉತ್ತರವನ್ನು ನೀಡುತ್ತಲೇ ಬಂದರು

   ಇನ್ನು ಯಶ್, ಪ್ರತೀ ಪ್ರಚಾರದ ವೇಳೆಯೂ ಪ್ರತ್ಯುತ್ತರವನ್ನು ನೀಡುತ್ತಲೇ ಬಂದರು. ಬಿಸಿಲಲ್ಲಿ ಓಡಾಡಲಿ, ಆಗ ರೈತರ ಕಷ್ಟ ಏನು ಎನ್ನುವುದು ಗೊತ್ತಾಗುತ್ತದೆ ಎನ್ನುವ ಸಿಎಂ ಹೇಳಿಕೆಗೆ ಯಶ್ ತೀಕ್ಷ್ಣವಾದ ಉತ್ತರವನ್ನೇ ನೀಡಿದರು, ಮನೆ ಬಾಡಿಗೆ ವಿಚಾರದ ಹೇಳಿಕೆಗೂ ಸರಿಯಾದ ಉತ್ತರವನ್ನು ನೀಡಿದರು. ನನ್ನ ಅಣ್ಣ ಅಂಬರೀಶ್ ತನ್ನ ಪತ್ನಿಯ ಹೆಸರಿನ ಜಾಗದಲ್ಲಿ ಬರೆಯುವುದು ಸುಮಲತಾ ಅಕ್ಕ ಅವರ ಹೆಸರನ್ನು ಮಾತ್ರ ಎನ್ನುವ ಹೇಳಿಕೆ, ಸಿಎಂಗೆ ಭಾರೀ ಬಿಸಿಯನ್ನು ಮುಟ್ಟಿಸಿತ್ತು.

   ಸಿನಿಮಾಗೆ ಅರವತ್ತು ಕೋಟಿ ಖರ್ಚು ಮಾಡಿದ್ದೇನೆ ಎನ್ನುವ ನೀವು

   ಸಿನಿಮಾಗೆ ಅರವತ್ತು ಕೋಟಿ ಖರ್ಚು ಮಾಡಿದ್ದೇನೆ ಎನ್ನುವ ನೀವು

   ಒಂದು ಲೋಟ ಹಾಲು ಕರೆದು ತೋರಿಸಿ, ಹುಟ್ಟಿದ ಕರುವಿಗೆ ಏನು ಮೇವು ಹಾಕಬೇಕು ಎನ್ನುವುದು ಗೊತ್ತಾ, ಸಿನಿಮಾಗೆ ಅರವತ್ತು ಕೋಟಿ ಖರ್ಚು ಮಾಡಿದ್ದೇನೆ ಎನ್ನುವ ನೀವು, ಅದೇ ದುಡ್ಡನ್ನು ಜನಪರವಾಗಿ ಬಳಸಿದ್ದರೆ, ಕುಂತಲ್ಲೇ ಜಯಸಾಧಿಸಬಹುದಿತ್ತು, ನಿಮ್ಮ ಎದುರು ಯಾರೂ ಚುನಾವಣೆಗೆ ನಿಲ್ಲಬಾರದಾ ಎನ್ನುವ ಸಾಲುಸಾಲು ಖಡಕ್ ಹೇಳಿಕೆಗಳು ಸಿನಿಮಾ ಸ್ಟೈಲಿನಲ್ಲೇ ದರ್ಶನ್ ಮತ್ತು ಯಶ್ ಅವರಿಂದ ಬಂತು.

   ಮಂಡ್ಯ: ತನ್ನ ವಿರುದ್ಧ ಮಾಡಿದ ಟೀಕೆಗಳಿಗೆ ಉತ್ತರ ನೀಡಿದ ಡಿ-ಬಾಸ್

   ನಾವು ಕಳ್ಳರ ಪಕ್ಷ ಎಂದು ಹೇಳಿಲ್ಲ, ಧರ್ಮಸ್ಥಳ ದೇವರ ಮೇಲೆ ಆಣೆ

   ನಾವು ಕಳ್ಳರ ಪಕ್ಷ ಎಂದು ಹೇಳಿಲ್ಲ, ಧರ್ಮಸ್ಥಳ ದೇವರ ಮೇಲೆ ಆಣೆ

   ನಾವು ಕಳ್ಳರ ಪಕ್ಷ ಎಂದು ಹೇಳಿಲ್ಲ, ಧರ್ಮಸ್ಥಳ ದೇವರ ಮೇಲೆ ಆಣೆ ಎನ್ನುವ ಹೇಳಿಕೆಯೂ ಬಂತು, ಗಂಡ ಸತ್ತ ನೋವಿನ ಛಾಯೆ ಕಾಣುತ್ತಲೇ ಇಲ್ಲ ಎನ್ನುವ ವಾಕ್ ಪ್ರಹಾರವನ್ನೂ ಸುಮಲತಾ ಅರಗಿಸಿಕೊಳ್ಳಬೇಕಾಯಿತು. ಇನ್ನು, ಶಿವರಾಮೇಗೌಡ್ರಂತೂ, ಸುಮಲತಾ ಅವರ ಜಾತಿಯನ್ನೇ ಎಳೆದು ತಂದರು. ರೇವಣ್ಣ, ಗಂಡ ಸತ್ತು ಇನ್ನೂ ತಿಂಗಳಾಗಿಲ್ಲ, ಈಯಮ್ಮಂಗೆ ರಾಜಕೀಯ ಬೇಕಾ ಎನ್ನುವ ಮಾತು ವ್ಯಾಪಕ ಆಕ್ರೋಶಕ್ಕೆ ಒಳಗಾಯಿತು.

   ಫಲಿತಾಂಶ ಏನೇ ಬರಲಿ 'ಜೋಡೆತ್ತು'ಗಳ ಗಂಡಸ್ಥನ ಮೆಚ್ಚಲೇಬೇಕು

   ಫಲಿತಾಂಶ ಏನೇ ಬರಲಿ 'ಜೋಡೆತ್ತು'ಗಳ ಗಂಡಸ್ಥನ ಮೆಚ್ಚಲೇಬೇಕು

   ಚುನಾವಣೆ ಎಂದ ಮೇಲೆ, ಇಂತದೆಲ್ಲಾ ಮಾಮೂಲಿ. ಸಿಎಂ ಕುಟುಂಬವನ್ನು ಎದುರು ಹಾಕಿಕೊಳ್ಳಬೇಕಾಗಿ ಬರಬಹುದು ಎನ್ನುವುದನ್ನು ಅರಿತೂ ದರ್ಶನ್ ಮತ್ತು ಯಶ್, ಸುಮಲತಾ ಪರವಾಗಿ ನಿಂತದ್ದು ಅವರ ಗಂಡಸ್ಥವನ್ನು ತೋರಿಸುತ್ತದೆ ಎನ್ನುವ ಮಾತು ಮಂಡ್ಯದಲ್ಲಿ ಮತ್ತು ರಾಜ್ಯದಲ್ಲೆಲ್ಲಾ ಹರಿದಾಡುತ್ತಿದೆ. ಚುನಾವಣಾ ಫಲಿತಾಂಶ ಏನೇ ಬರಲಿ, ಜೋಡೆತ್ತುಗಳ ಗಟ್ಟಿತನವನ್ನು ಮೆಚ್ಚಲೇಬೇಕು ಎನ್ನುವುದು ಮಂಡ್ಯದ ಬೀದಿಬೀದಿ, ಹಳ್ಳಿಹಳ್ಳಿಗಳಲ್ಲಿ ಹರಿದಾಡುತ್ತಿರುವ ಮಾತು. ಈಗ ಎಲ್ಲಾ ಮುಗಿದಾಗಿದೆ, ಸುಮಲತಾ ಮತ್ತು ನಿಖಿಲ್ ಭವಿಷ್ಯ ಮಂಡ್ಯ ಸರಕಾರೀ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ.

   English summary
   Loksabha elections 2019, Mandya: Sandalwood Star Darshan and Yash stands together till the end with Mandya independent candidate Sumalatha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more