ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿಯಲ್ಲೂ ಸಿದ್ರಾಮಣ್ಣ ಪರ ದರ್ಶನ್ ಪ್ರಚಾರ ಮಾಡಿಲ್ವೇ, ಆದ್ರೆ ಏನಾಯ್ತು?

|
Google Oneindia Kannada News

Recommended Video

ಸಿದ್ಧರಾಮಯ್ಯ ನೆನಪಿಸಿಕೊಂಡು ವ್ಯಂಗ್ಯವಾಡಿದ ಜಿ ಟಿ ದೇವೇಗೌಡ..! | Oneindia Kannada

ಮಂಡ್ಯ, ಏ 2: ನಟರು ಅವರ ಕೆಲಸವೇನು, ಅದನ್ನು ಮಾಡಿಕೊಂಡು ಇರಬೇಕು. ಅವರ ಕೆಲಸ ಮನೋರಂಜನೆ ನೀಡುವುದು, ಅದು ಬಿಟ್ಟು ಅವರಿಗೆಲ್ಲಾ ರಾಜಕೀಯ ಯಾಕೆ ಎಂದು ಮೈಸೂರು ಉಸ್ತುವಾರಿ ಮತ್ತು ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯ ಲೋಕಸಭಾ ಕ್ಷೇತ್ರದ ಹೆಬ್ಬಕವಾಡಿಯಲ್ಲಿ ಜೆಡಿಎಸ್ - ಕಾಂಗ್ರೆಸ್ ಜಂಟಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ಜಿಟಿಡಿ, ದರ್ಶನ್ ಮತ್ತು ಯಶ್, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವುದನ್ನು ಟೀಕಿಸುತ್ತಾ, ಜನರು ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಾರೆಯೇ ಹೊರತು, ನಟರ ಬಣ್ಣದ ಮಾತಿಗಲ್ಲ ಎಂದಿದ್ದಾರೆ.

ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ಪರ ಪ್ರಚಾರಕ್ಕೆ ದರ್ಶನ್ ಬಂದಿದ್ದರು. ಜನ ಅವರನ್ನು ನೋಡೋಕೆ ಮುಗಿಬೀಳುತ್ತಾರೆ ಮಾತ್ರ ಎನ್ನುವುದು ಚುನಾವಣಾ ಫಲಿತಾಂಶದಿಂದ ಗೊತ್ತಾಗುತ್ತಲ್ಲವೇ ಎಂದು ಜಿ ಟಿ ದೇವೇಗೌಡ ವ್ಯಂಗ್ಯವಾಡಿದ್ದಾರೆ.

Darshan and Yash campaigning will not turn into votes: G T Devegowda

ದರ್ಶನ್ ಬಂದು ಪ್ರಚಾರ ಮಾಡಿದ ಮೇಲೆ, ಪ್ರತೀ ಬೂತ್ ನಲ್ಲಿ ಸಿದ್ದರಾಮಣ್ಣಗೆ ಸಾವಿರ, ನನಗೆ ನೂರು ವೋಟ್ ಬೀಳುತ್ತೆ ಎಂದು ಮಾತನಾಡಿಕೊಳ್ಳಲಾಗುತ್ತಿತ್ತು, ಆದರೆ ಆಗಿದ್ದು ಏನು ಎಂದು ಜಿ ಟಿ ದೇವೇಗೌಡ, ಮಾಧ್ಯಮದವರತ್ತ ಕೈತೋರಿಸಿ ನಗುಬೀರಿದ್ದಾರೆ.

ದರ್ಶನ್ ಬರಲಿ ಯಶ್ ಬರಲಿ, ಜನ ಅಭಿವೃದ್ದಿ ಕಡೆಗೆ ಯಾರೋ ಅವರ ಪರವಾಗಿ ಮತ ಚಲಾಯಿಸುತ್ತಾರೆ, ಹಾಗಾಗಿ ಯಾರೂ ಭಯಪಡಬೇಕಾಗಿಲ್ಲ. ನಮ್ಮ ಅಭ್ಯರ್ಥಿಯನ್ನು ಜನ ಭಾರೀ ಅಂತರದಿಂದ ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿಕೊಡುತ್ತಾರೆಂದು ಜಿ ಟಿ ದೇವೇಗೌಡ್ರು ಹೇಳಿದ್ದಾರೆ.

ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ? ರಾಜ್ಯದ ಜನ ಮಂಡ್ಯದತ್ತ ಕಣ್ಣಿಟ್ಟು ನೋಡುತ್ತಿರುವುದೇಕೆ?

ಮೈಸೂರು ಲೋಕಸಭಾ ಕ್ಷೇತ್ರ, ಸೀಟು ಹೊಂದಾಣಿಕೆಯ ನಂತರ ಕಾಂಗ್ರೆಸ್ ಪಾಲಾದ ಮೇಲೆ, ಜಿ ಟಿ ದೇವೇಗೌಡರು ಸ್ವಲ್ಪದಿನ ಸಕ್ರಿಯ ರಾಜಕೀಯದಿಂದ ದೂರವಿದ್ದರು. ಸೀಟು ಜೆಡಿಎಸ್ ಕೈತಪ್ಪಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿತ್ತು. ಈಗ, ಮಂಡ್ಯದಲ್ಲಿ ತಮ್ಮ ಅಭ್ಯರ್ಥಿಯ ಪರವಾಗಿ ಜಿಟಿಡಿ ಮತಯಾಚಿಸಿದ್ದಾರೆ.

ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

ಕೊನೇಪಂಚ್: ಜಿಟಿಡಿ ಮಾತನಾಡುತ್ತಿರಬೇಕಾದರೆ, ಕಾಂಗ್ರೆಸ್ ಕಾರ್ಯಕರ್ತರು ಏನಾದರೂ ಅಲ್ಲಿ ಇದ್ದರೆ, "ಬಿಟ್ ಬಿಡಣ್ಣಾ.. ಅದೆಷ್ಟು ದಿನ ಚಾಮುಂಡೇಶ್ವರಿ ಕ್ಷೇತ್ರದ ಫಲಿತಾಂಶದ ಬಗ್ಗೆ ಮಾತನಾಡಿ, ನಮ್ ಸಿದ್ರಾಮಣ್ಣನ ಹೊಟ್ಟೆ ಉರಿಸುತ್ತೀರಾ" ಎಂದು ಮಾತನಾಡಿಕೊಳ್ಳುತ್ತಿದ್ದರೋ ಏನೋ?

English summary
Sandalwood actor Darshan and Yash campaigning for independent candidate Sumalatha will not turn into votes: Minister G T Devegowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X