ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಿಂದ ಹಬ್ಬಕ್ಕೆ ತೆರಳಿದ ಯಶ್-ದರ್ಶನ್, ಪ್ರಚಾರ ಮುಂದುವರೆಸಿದ ಸುಮಲತಾ

|
Google Oneindia Kannada News

ಮಂಡ್ಯ, ಏಪ್ರಿಲ್ 05: ಕಳೆದ ಕೆಲವು ದಿನಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಟ ದರ್ಶನ್ ಮತ್ತು ಯಶ್ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ತಮ್ಮ ಮನೆಗೆ ತೆರಳಿದ್ದು, ಇದರಿಂದ ಒಂದೆರಡು ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಅವರು ಕಾಣಿಸುವುದಿಲ್ಲ ಎನ್ನಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರಕ್ಕೆ ಬಂದಿದ್ದ ಅವರನ್ನು ಜೋಡೆತ್ತುಗಳೆಂದೇ ಕರೆಯಲಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ಪ್ರಚಾರ ನಡೆಸಿದ್ದರು. ಸದ್ಯಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ವಿಶ್ರಾಂತಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ

ಸುಮಲತಾಗೆ ಜೈ ಎಂದ ಕೊತ್ತತ್ತಿ ಕಾಂಗ್ರೆಸ್ ಮುಖಂಡರು!ಸುಮಲತಾಗೆ ಜೈ ಎಂದ ಕೊತ್ತತ್ತಿ ಕಾಂಗ್ರೆಸ್ ಮುಖಂಡರು!

ಕಳೆದ ಸೋಮವಾರದಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿದ್ದರು. ಇವರು ಪ್ರಚಾರಕ್ಕೆ ಬರುತ್ತಿದ್ದಂತೆಯೇ ಎದುರಾಳಿಗಳು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡತೊಡಗಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಪ್ರಚಾರ ನಡೆಸಿದ ಅವರು ಸುಮಲತಾ ಅವರಿಗೆ ಮತ ನೀಡುವಂತೆ ಬಿರುಸಿನ ಪ್ರಚಾರ, ರೋಡ್ ಶೋ ನಡೆಸಿದ್ದರು. ಅವರು ತೆರಳಿದ ಕಡೆಯಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದರು. ಜತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಬಾವುಟ ಹಿಡಿದ ಕಾರ್ಯಕರ್ತರು ಕೂಡ ಕಾಣಿಸಿಕೊಳ್ಳುತ್ತಿದ್ದರು.

Darshan and Yash gone home on the reason of Ugadi festival

ಇವರೊಂದಿಗೆ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಇನ್ನಿತರರು ಇದ್ದರು. ಸದ್ಯ ದರ್ಶನ್ ಮತ್ತು ಯಶ್ ತಮ್ಮ ಮನೆಗೆ ತೆರಳಿದ್ದರೂ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಗೌಡ ಅವರು ಎಂದಿನಂತೆ ಪ್ರಚಾರ ಕಾರ್ಯ ಮುಂದುವರಿಸಿದ್ದು, ಮಂಡ್ಯ ನಗರದ ತರಕಾರಿ ಮಾರುಕಟ್ಟೆ, ಪೇಟೆ ಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿದ್ದಾರೆ.

 ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ? ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?

ಇನ್ನು ಅಭಿಷೇಕ್ ಅವರು ತಾಯಿಯ ಪರವಾಗಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿ ಹಾಗೂ ಮಳವಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇವರೊಂದಿಗೆ ಹಿರಿಯ ನಟ ದೊಡ್ಡಣ್ಣ ಕೂಡ ಇದ್ದಾರೆ.

English summary
Lok Sabha Elections 2019:Actors Darshan and Yash gone home on the reason of Ugadi festival. But the Sumalatha continues campaign. Today she has campaigned in various areas of Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X