ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ: ಪ್ರಥಮ ಸ್ಥಾನ ಪಡೆದ ದಾಂಡೇಲಿಯ ಸಂಜನಾ

|
Google Oneindia Kannada News

ಮಂಗಳೂರು, ಅಕ್ಟೋಬರ್. 15: ಪರಿವರ್ತನಾ ಚಾರೀಟಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಕಾರವಾರ ಸಮೀಪದ ದಾಂಡೇಲಿಯ ಸಂಜನಾ ಮೊದಲ ಸ್ಥಾನ ಪಡೆಯುವ ಮೂಲಕ ಪರಿವರ್ತನಾ 2018 ಟ್ರಾನ್ಸ್ ಕ್ವೀನ್ ಆಗಿ ಹೊರಹೊಮ್ಮಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಭಾನುವಾರ ಸಂಜೆ ನಡೆದ ಪರಿವರ್ತನಾ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಒಟ್ಟು 11 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. 10 ಮಂದಿ ಸ್ಪರ್ಧಾಳುಗಳನ್ನು ಎಲ್ಲಾ ವಿಭಾಗಗಳಲ್ಲಿ ಸಂಜಾನ ಹಿಂದಿಕ್ಕಿದರು. ಗುಲ್ಬರ್ಗಾದ ಝೋಯಾ ಶೇಖ್ ದ್ವಿತೀಯ ಬಹುಮಾನ ಪಡೆದರು.

ಕಾರ್ಯಕ್ರಮವನ್ನು ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಅಮರನಾಥ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಇದುವರೆಗೆ ಯಾರೂ ಕೂಡ ಮಾಡಿಲ್ಲ.

ಅಕ್ಟೋಬರ್ 14 ರಂದು ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಅಕ್ಟೋಬರ್ 14 ರಂದು ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ

ಆದರೆ ಪರಿವರ್ತನಾ ಟ್ರಸ್ಟ್ ಅವರು ಮಂಗಳಮುಖಿಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಇಂತಹ ಅತ್ಯುತ್ತಮವಾದ ಒಂದು ಕೆಲಸಕ್ಕೆ ಸಮಾಜ ಹಾಗೂ ನಾಯಕರುಗಳು ಪ್ರೋತ್ಸಾಹ ನೀಡಿದಾಗ ಮಾತ್ರ ಪೂರ್ಣಪ್ರಮಾಣದಲ್ಲಿ ಉದ್ದೇಶ ಯಶಸ್ವಿಯಾಗಲು ಸಾಧ್ಯವಿದೆ ಎಂದು ಶ್ಲಾಘಿಸಿದರು. ಮುಂದೆ ಓದಿ...

 ಮುಖ್ಯಮಂತ್ರಿಗಳು ಆಗಮಿಸಬೇಕಿತ್ತು

ಮುಖ್ಯಮಂತ್ರಿಗಳು ಆಗಮಿಸಬೇಕಿತ್ತು

"ಈ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿಗಳು ಆಗಮಿಸಬೇಕಾಗಿತ್ತು. ಆದರೆ ಅವರ ವಿಮಾನ ಒಂದು ಗಂಟೆ ವಿಳಂಬವಾಗಿ ಆಗಮಿಸಿದ್ದು, ಕಾರ್ಯಕ್ರಮಗಳ ಒತ್ತಡದಿಂದಾಗಿ ಬರಲು ಸಾಧ್ಯವಾಗಿಲ್ಲ. ಅದಕ್ಕಾಗಿ ಅವರ ಪರವಾಗಿ ಕ್ಷಮೆ ಕೋರುವುದಾಗಿ" ಅಮರನಾಥ ಶೆಟ್ಟಿ ಕೋರಿದರು.

 ನಕಲಿ ಮಂಗಳಮುಖಿಯರ ಅಸಲಿಯತ್ತು ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ ನಕಲಿ ಮಂಗಳಮುಖಿಯರ ಅಸಲಿಯತ್ತು ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ

 11 ಮಂದಿ ಮಂಗಳಮುಖಿಯರು

11 ಮಂದಿ ಮಂಗಳಮುಖಿಯರು

ಭಾನುವಾರ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳಮುಖಿಯರಾದ ದಾಂಡೇಲಿಯ ಸಂಜನಾ, ಗುಲ್ಬರ್ಗಾದ ಝೋಯಾ ಶೇಖ್, ಮಂಗಳೂರಿನ ಸುಭದ್ರ ಪೂಜಾರಿ, ಮೈಸೂರಿನ ಅರುಂಧತಿ, ಬಳ್ಳಾರಿಯ ಶ್ರೀನಿಧಿ, ಮಂಡ್ಯದ ಅರುಂಧತಿ, ಬಳ್ಳಾರಿಯ ಸಂಧ್ಯಾ, ಬೆಂಗಳೂರಿನ ಪ್ರೀಯಾ, ಬಳ್ಳಾರಿಯ ರೇಖಾ, ಶಿವಮೊಗ್ಗದ ಅನು, ಬೆಂಗಳೂರಿನ ಶ್ವೇತಾ ಭಾಗವಹಿಸಿದ್ದರು.

ಕಣ್ಣಲ್ಲಿನೂರಾರು ಕನಸುಗಳನ್ನು ಹೊತ್ತು ಆಗಮಿಸಿದ್ದ 11 ಮಂದಿ ಮಂಗಳಮುಖಿಯರು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ರಾಂಪ್ ಮೇಲೆ ಹೆಜ್ಜೆಹಾಕಿದರು.

 ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ ಮಂಗಳೂರು : ರೇಡಿಯೊ ಜಾಕಿ ಆದ ಮಂಗಳಮುಖಿ

 ನೋಂದಾಯಿಸಿದ್ದು 40ಕ್ಕೂ ಅಧಿಕ ಮಂದಿ

ನೋಂದಾಯಿಸಿದ್ದು 40ಕ್ಕೂ ಅಧಿಕ ಮಂದಿ

ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಿಂದ ಒಟ್ಟು 40ಕ್ಕೂ ಅಧಿಕ ಮಂಗಳಮುಖಿಯರು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿದ್ದರು. ಈ ಪೈಕಿ ಆಯ್ದ 11 ಮಂಗಳಮುಖಿಯರನ್ನು ಆಯ್ಕೆಮಾಡಿ ರಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಕಲ್ಪಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಸಾರಿ ಹಾಗೂ ವೆಸ್ಟರ್ನ್‌ ಉಡುಪು ತೊಟ್ಟ ಮಂಗಳಮುಖಿಯರು ರಾಂಪ್ ಮೇಲೆ ವಯ್ಯಾರದ ನಡಿಗೆ ಹಾಕುತ್ತ ಆತ್ಮವಿಶ್ವಾಸದೊಂದಿಗೆ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡರು.

 ಸಾಂಪ್ರದಾಯಿಕ ಉಡುಗೆ

ಸಾಂಪ್ರದಾಯಿಕ ಉಡುಗೆ

11 ಮಂದಿ ಸ್ಪರ್ಧಾಳುಗಳು ಮೂರು ವಿಭಾಗದಲ್ಲಿ ಸಾಂಪ್ರದಾಯಿಕ ಉಡುಗೆ, ಕ್ಯಾಶುವಲ್ ರೌಂಡ್ ಹಾಗೂ ಕೊನೆಯದಾಗಿ ಇವ್ನಿಂಗ್ ಗೌನ್ ಧರಿಸಿ ರಾಂಪ್ ಮೇಲೆ ಹೆಜ್ಜೆಹಾಕಿದರು.ಈ ಸೌಂದರ್ಯ ಸ್ಪರ್ಧೆಗೆ ತೀರ್ಪುಗಾರರಾಗಿ 2017 ಮಿಸ್ ಇಂಡಿಯಾ ಆಗಿದ್ದ ಜೋಯ್ಸ್ ರೇಗೊ, 2018 ದಿವಾ ಮಿಸ್ ಇಂಡಿಯಾ ರಿಪ್ಪಲ್ ರೈ, ಸೆನ್ಸಾರ್ ಬೋರ್ಡಿನ ಶ್ರೀನಿವಾಸ್ ಗುರ್ಜಾಲ್ ಮತ್ತು ಪಂಡಿತ್ ರೆಸಾರ್ಟ್ ಇದರ ಗೋಯೆಲ್ ಆಗಮಿಸಿದ್ದರು.

ಅಂತಿಮ ಸ್ಪರ್ಧೆಯಲ್ಲಿ ದಾಂಡೆಲಿಯ ಮಂಗಳಮುಖಿ ಸಂಜನಾ ಅವರು ಪರಿವರ್ತನಾ ಟ್ರಾನ್ಸ್ ಕ್ವೀನ್ - 2018 ಕಿರೀಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗುಲ್ಬರ್ಗಾದ ಝೋಯಾ ಶೇಖ್ ಪ್ರಥಮ ರನ್ನರ್ ಅಪ್ ಹಾಗೂ ಬಳ್ಳಾರಿಯ ಶ್ರೀನಿಧಿ ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದರು.

English summary
Sanjana Native of Karwar wins first ever Parivarthan Trans Queen 2018 beauthy contest held in Mangaluru on Oct 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X