ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ರಾಜಕೀಯ : ನಾಗಮಂಗಲದಿಂದ ಬಂತು ಬಿಗ್ ಬ್ರೇಕಿಂಗ್ ನ್ಯೂಸ್!

|
Google Oneindia Kannada News

Recommended Video

ಮಂಡ್ಯ ರಾಜಕೀಯ : ಕಾಂಗ್ರೆಸ್ ನಾಯಕ ಎನ್ ಚೆಲುವರಾಯಸ್ವಾಮಿ ಬಿಜೆಪಿ ಸೇರಲಿದ್ದಾರಾ? | Oneindia Kannada

ಮಂಡ್ಯ, ನವೆಂಬರ್ 14 : ಕಾಂಗ್ರೆಸ್ ನಾಯಕ ಮತ್ತು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಚಲುವರಾಯಸ್ವಾಮಿ ಬಿಜೆಪಿ ಸೇರಲಿದ್ದಾರೆಯೇ?. ಮಂಡ್ಯ ಲೋಕಸಭಾ ಉಪ ಚುನಾವಣೆ ವೇಳೆ ನಡೆ ಬೆಳವಣಿಗೆಗಳು ಈ ಪ್ರಶ್ನೆಯನ್ನು ಹುಟ್ಟು ಹಾಕಿವೆ.

ಜೆಡಿಎಸ್‌ ಪಕ್ಷದಿಂದ ಗೆದ್ದು ಶಾಸಕರಾಗಿ, ಸಚಿವರಾಗಿದ್ದ ಚಲುವರಾಯಸ್ವಾಮಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಸೇರಿದ್ದ ಅವರು ಈಗ ಬಿಜೆಪಿ ಸೇರಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ.

ನಾನು ಮಂಡ್ಯದ ಮಣ್ಣಿನ ಮಗ : ಯಡಿಯೂರಪ್ಪ ಭಾವುಕ ಭಾಷಣ!ನಾನು ಮಂಡ್ಯದ ಮಣ್ಣಿನ ಮಗ : ಯಡಿಯೂರಪ್ಪ ಭಾವುಕ ಭಾಷಣ!

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರನ್ನು ಬೆಂಬಲಿಸಿ, ಗೆಲ್ಲಿಸಿದ್ದಾರೆ. ಆದರೆ, ಜೆಡಿಎಸ್ ನಾಯಕರ ವಿರುದ್ಧ ಅಸಮಧಾನ ಹಾಗೇ ಇದೆ. 2019ರ ಚುನಾವಣೆಗೆ ಮೊದಲು ಅವರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಜೆಡಿಎಸ್ ಭದ್ರ ಕೋಟೆ ಮಂಡ್ಯ ಮತ್ತೆ 'ಗೌಡರ' ವಶಕ್ಕೆಜೆಡಿಎಸ್ ಭದ್ರ ಕೋಟೆ ಮಂಡ್ಯ ಮತ್ತೆ 'ಗೌಡರ' ವಶಕ್ಕೆ

ಚಲುವರಾಯಸ್ವಾಮಿ ಬಿಜೆಪಿ ಸೇರಿದರೆ ಮುಂದೇನು?. ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. 2019ರ ಚುನಾವಣೆಯಲ್ಲಿ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆಯೇ?.....

ಪ್ರಚಾರ ಸಭೆಯಲ್ಲಿ ಸಿಟ್ಟಿಗೆದ್ದು ಮೈಕ್ ಬಿಸಾಡಿದ ಚೆಲುವರಾಯಸ್ವಾಮಿಪ್ರಚಾರ ಸಭೆಯಲ್ಲಿ ಸಿಟ್ಟಿಗೆದ್ದು ಮೈಕ್ ಬಿಸಾಡಿದ ಚೆಲುವರಾಯಸ್ವಾಮಿ

ಜೆಡಿಎಸ್‌ನಿಂದ ಗೆದಿದ್ದರು

ಜೆಡಿಎಸ್‌ನಿಂದ ಗೆದಿದ್ದರು

2013ರ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಗೆಲುವು ಸಾಧಿಸಿದ್ದರು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಪಕ್ಷದಿಂದ ಅಮಾನತುಗೊಂಡಿದ್ದರು. ಬಳಿಕ ಕಾಂಗ್ರೆಸ್ ಸೇರಿ 2018ರ ಚುನಾವಣೆ ಎದುರಿಸಿದ್ದರು. ಆದರೆ, ಕ್ಷೇತ್ರದ ಜನರು ಜೆಡಿಎಸ್‌ನ ಸುರೇಶ್ ಗೌಡ ಅವರನ್ನು ನಾಗಮಂಗಲದಲ್ಲಿ ಬೆಂಬಲಿಸಿದ್ದು, ಚಲುವರಾಯಸ್ವಾಮಿ ಅವರು 64729 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಬಿಜೆಪಿ ಸೇರುವ ವದಂತಿ ಏಕೆ?

ಬಿಜೆಪಿ ಸೇರುವ ವದಂತಿ ಏಕೆ?

ಕೆಲವು ದಿನಗಳ ಹಿಂದೆ ನಾಗಮಮಂಗಲದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ಚಲುವರಾಯಸ್ವಾಮಿ ಅವರು, 'ಕಾಂಗ್ರೆಸ್ ಪಕ್ಷ ಹಾಗೂ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬೇಡಿ. ಉಪ ಚುನಾವಣೆ ಬಳಿಕ ಹಳೆ ಮೈಸೂರು ಭಾಗದ ನಾಯಕರ ಸಭೆಯನ್ನು ಸಿದ್ದರಾಮಯ್ಯ ಕರೆದಿದ್ದಾರೆ. ಆ ಬಳಿಕವೂ ಜೆಡಿಎಸ್ ದಬ್ಬಾಳಿಕೆ ಹೀಗೆ ಮುಂದುವರೆದರೆ ನಿಮ್ಮ ನಿರ್ಧಾರಕ್ಕೆ ನಾನು ಬದ್ಧ, ಶೀಘ್ರದಲ್ಲೇ ಲೋಕಸಭೆ ಚುನಾವಣೆ ಬರಲಿದೆ' ಎಂದು ಹೇಳಿದರು.

ಬಿಎಸ್‌ವೈ ಪರೋಕ್ಷ ಆಹ್ವಾನ?

ಬಿಎಸ್‌ವೈ ಪರೋಕ್ಷ ಆಹ್ವಾನ?

ಉಪ ಚುನಾವಣೆ ಪ್ರಚಾರಕ್ಕಾಗಿ ನಾಗಮಂಗಲದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಚಲುವರಾಯಸ್ವಾಮಿ ಅವರನ್ನು ಸೋಲಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಿ. ಅವರು ಉತ್ತಮ ನಾಯಕ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ' ಎಂದು
ಹಾಡಿ ಹೊಗಳಿದ್ದರು.

ಮುಂದಿನ ನಡೆ ಏನು?

ಮುಂದಿನ ನಡೆ ಏನು?

ಚಲುವರಾಯಸ್ವಾಮಿ ಅವರು ಬಿಜೆಪಿ ಸೇರಿದರೆ ಮುಂದೇನು?. ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇರುವ ಅಸಮಾಧಾನದ ಲಾಭ ಪಡೆದು ಅವರು ಬಿಜೆಪಿ ಸೇರಿ 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಹೊಂದಿದ್ದಾರೆಯೇ? ತಿಳಿಯದು. ಬಿಜೆಪಿ ಸೇರಿದರೂ ಮಂಡ್ಯದಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ ಎಂಬುದು ಜಿಲ್ಲೆಯ ರಾಜಕೀಯವನ್ನು ತಿಳಿದ ಅವರಿಗೂ ಅರಿವಿದೆ.

ಚುನಾವಣೆ ಇಲ್ಲ

ಚುನಾವಣೆ ಇಲ್ಲ

ಸದ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇಲ್ಲ. 2019ರ ಲೋಕಸಭೆ ಚುನಾವಣೆ ಬಿಟ್ಟರೆ ಬೇರೆ ಚುನಾವಣೆಗಳು ಎದುರಾಗುವುದಿಲ್ಲ. ಬಿಜೆಪಿ ಸೇರದೆಯೇ ಚಲುವರಾಯಸ್ವಾಮಿ ಅವರು ಮುಂದಿನ ಚುನಾವಣೆ ತನಕ ಕಾಯುವರೇ? ಅಥವ ಬಿಜೆಪಿ ಸೇರಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.

English summary
Nagamangala former MLA and Congress leader Cheluvarayaswamy will join BJP. He may join party and contest for Lok Sabha Elections 2019 as BJP candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X