ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ-ಎಚ್‌ಡಿಕೆ ಇಬ್ಬರಿಗೂ ಟಾಂಗ್ ನೀಡಿದ ಚೆಲುವರಾಯಸ್ವಾಮಿ

|
Google Oneindia Kannada News

ಮಂಡ್ಯ, ಏಪ್ರಿಲ್ 06: ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆಯೇ ಹೊರತು ನನ್ನ ಅವಶ್ಯಕತೆ ಇಲ್ಲ ಎಂದು ಮಂಡ್ಯ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡದೆ ಸುಮಲತಾ ಅವರಿಗೆ ಚೆಲುವರಾಯಸ್ವಾಮಿ ಬೆಂಬಲ ನೀಡುತ್ತಿದ್ದು, ಇದು ಜೆಡಿಎಸ್‌ಗೆ ದೊಡ್ಡ ಮುಳುವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚೆಲುವರಾಯಸ್ವಾಮಿ ಅವರ ಹೇಳಿಕೆ ಗಮನಿಸಿದರೆ, ಚೆಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಅವರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇದ್ದಹಾಗೆ ಕಾಣುತ್ತಿಲ್ಲ.

ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು? ಸಿದ್ದರಾಮಯ್ಯ ಭೇಟಿ ಮಾಡಿದ ನಿಖಿಲ್: ರಾಜಕೀಯ ಲೆಕ್ಕಾಚಾರ ಏನು?

ಮುಂದುವರೆದು ಮಾತನಾಡಿರುವ ಚೆಲುವರಾಯಸ್ವಾಮಿ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು ಆದರೂ ಸಿದ್ದರಾಮಯ್ಯ ಜೊತೆ ಕುಮಾರಸ್ವಾಮಿ ಮಾತನಾಡಲೇಬೇಕು ಅಂತಾ ಮಾಜಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಎಚ್‌ಡಿಕೆ ದ್ವೇಷ ರಾಜಕಾರಣ ಗೊತ್ತಿದೆ: ಚೆಲುವರಾಯಸ್ವಾಮಿ

ಎಚ್‌ಡಿಕೆ ದ್ವೇಷ ರಾಜಕಾರಣ ಗೊತ್ತಿದೆ: ಚೆಲುವರಾಯಸ್ವಾಮಿ

ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಚೆಲುವರಾಯಸ್ವಾಮಿ, ನಾನು-ಕುಮಾರಸ್ವಾಮಿ ಒಂದೇ ತಟ್ಟೆಯಲ್ಲಿ ಊಟಮಾಡಿದವರು, ಅವರ ಗುಣದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರು ದ್ವೇಷ ರಾಜಕಾರಣ ಬಿಡುವವರಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ! ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ!

ನಾನು ಸುಮಲತಾರ ಬೆಂಬಲಿಸಿಲ್ಲ: ಚೆಲುವರಾಯಸ್ವಾಮಿ

ನಾನು ಸುಮಲತಾರ ಬೆಂಬಲಿಸಿಲ್ಲ: ಚೆಲುವರಾಯಸ್ವಾಮಿ

ನಾನು ಸುಮಲತಾ ಅವರ ಬೆಂಬಲಕ್ಕಿ ನಿಂತಿಲ್ಲ, ನನ್ನ ಬೆಂಬಲಿಗರು, ಕಾರ್ಯಕರ್ತರು ಸುಮಲತಾ ಅವರ ಪರ ಪ್ರಚಾರ ನಡೆಸುತ್ತಿರುವುದು ಅವರ ವೈಯಕ್ತಿಕ ವಿಷಯ, ಅವರ ಪ್ರಚಾರಕ್ಕೂ ನನಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.

ಹಾಸನ, ಮಂಡ್ಯ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಟ್ರೀಟ್‌ಮೆಂಟ್?ಹಾಸನ, ಮಂಡ್ಯ ಕಾಂಗ್ರೆಸ್‌ ನಾಯಕರಿಗೆ ಸಿದ್ದರಾಮಯ್ಯ ಟ್ರೀಟ್‌ಮೆಂಟ್?

'ಶಿವರಾಮೇಗೌಡ ಪರ ಕೆಲಸ ಮಾಡಿದ್ದೆವು'

'ಶಿವರಾಮೇಗೌಡ ಪರ ಕೆಲಸ ಮಾಡಿದ್ದೆವು'

ಕಳೆದ ಉಪಚುನಾವಣೆಯಲ್ಲಿ ನಾವು ಶೀವರಾಮೇಗೌಡ ಅವರ ಪರ ಪ್ರಚಾರ ಮಾಡಿದ್ದೆವು, ಆದರೆ ಅವರು ಗೆದ್ದ ನಂತರ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ, ನಮ್ಮನ್ನು ಯಾರೂ ಮಾತನಾಡಿಸಲೂ ಇಲ್ಲ ಎಂದು ಅವರು ಹೇಳಿದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

'ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಘರ್ಷಣೆ'

'ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಘರ್ಷಣೆ'

ನಿಖಿಲ್ ಅನ್ನು ಅಭ್ಯರ್ಥಿ ಮಾಡಬೇಕಾದರೆ ನಮ್ಮನ್ನು ಒಂದು ಮಾತು ಕೇಳಲಿಲ್ಲ, ಕ್ಷೇತ್ರದಲ್ಲಿ ಕಳೆದ ಕೆಲ ತಿಂಗಳಿನಿಂದಲೂ ಘರ್ಷಣೆ ನಡೆಯುತ್ತಿದೆ, ಜೆಡಿಎಸ್ ನ ಶಾಸಕರು ನಮಗೆ ಅವಮಾನ ಮಾಡುತ್ತಿದ್ದಾರೆ ಆದರೂ ನಾವು ಸಹಿಸಿಕೊಂಡು ಸುಮ್ಮನೆ ಇದ್ದೇವೆ, ನಾವು ಸುಮಲತಾ ಪರ ಕೆಲಸ ಮಾಡುತ್ತಿಲ್ಲ, ಆದರೆ ಕುಮಾರಸ್ವಾಮಿ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

English summary
Mandya congress leader Cheluvarayaswamy lambasted on CM Kumaraswamy. He said i am not supporting Sumalatha, if my followers supporting her then it is them choice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X