ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಚಾರ ಸಭೆಯಲ್ಲಿ ಸಿಟ್ಟಿಗೆದ್ದು ಮೈಕ್ ಬಿಸಾಡಿದ ಚೆಲುವರಾಯಸ್ವಾಮಿ

|
Google Oneindia Kannada News

Recommended Video

Mandya By-elections 2018 : ಕಾಂಗ್ರೆಸ್ ನಾಯಕ ಎನ್ ಚೆಲುವರಾಯಸ್ವಾಮಿ ಸಿಟ್ಟಿಗೆದ್ದು ಮಾಡಿದ್ದೇನು?

ಮಂಡ್ಯ, ಅಕ್ಟೋಬರ್ 29: ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಿಇಲ್ಲ ಎಂಬುದಕ್ಕೆ ಇಂದು ಮತ್ತೊಂದು ಉದಾಹರಣೆ ಸಿಕ್ಕಿದೆ. ಜೆಡಿಎಸ್‌ ಅಭ್ಯರ್ಥಿಗೆ ನಾವು ಮತ ಹಾಕುವುದಿಲ್ಲವೆಂದು ಕೈ ಕಾರ್ಯಕರ್ತರು ಹೇಳಿದ್ದಾರೆ.

ಮಂಡ್ಯ ಲೋಕಸಭೆ ಉಪಚುನಾವಣೆಗೆ ಮೈತ್ರಿ ಸರ್ಕಾರದ ಅಭ್ಯರ್ಥಿ ಜೆಡಿಎಸ್‌ನ ಶಿವರಾಮೇಗೌಡ ಅವರು ಕಾಂಗ್ರೆಸ್‌ ಕಾರ್ಯಕರ್ತರ ಮತ ಕೇಳಲು ಕಾರ್ಯರ್ತರ ಸಭೆಗೆ ಆಗಮಿಸಿದ್ದಾಗ. ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಮೇಲೆಯೇ ಹರಿಹಾಯ್ದಿದ್ದಾರೆ.

ಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡ ಮಂಡ್ಯ ಉಪ ಚುನಾವಣೆ : ಅಂಬರೀಶ್ ಭೇಟಿಯಾದ ಎಲ್.ಆರ್.ಶಿವರಾಮೇಗೌಡ

ಶಿವರಾಮೇಗೌಡ ಅವರು ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಆಗಮಿಸಿದ್ದಾಗ. ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ಪರಾಜಿತ ಎಂಎಲ್‌ಎ ಅಭ್ಯರ್ಥಿ, ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ಮೈಕ್‌ ಬಿಸಾಡಿ ತಮ್ಮ ಸಿಟ್ಟು ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಮತ ಹಾಕಬೇಕಾ?

ಕಾಂಗ್ರೆಸ್‌ಗೆ ಮತ ಹಾಕಬೇಕಾ?

ಚೆಲುವರಾಯಸ್ವಾಮಿ ಸಿಟ್ಟಾಗಿ ಹೇಳಿದರೂ ಸಹ ಕಾರ್ಯಕರ್ತರ ಕೋಪ ತಣ್ಣಗಾಗಲಿಲ್ಲ. ಜೆಡಿಎಸ್‌ ಬೇಕೆಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಕೇಸುಗಳನ್ನು ದಾಖಲಿಸಿದೆ ಅಂತಹವರ ಪರ ಮತ ಹಾಕಬೇಕಾ ಎಂದು ಕೂಗಾಡಿದರು.

ಮಂಡ್ಯ ಉಪ ಚುನಾವಣೆ : ಜೆಡಿಎಸ್-ಕಾಂಗ್ರೆಸ್‌ ಮುನಿಸು ಬಿಜೆಪಿಗೆ ಸೊಗಸು? ಮಂಡ್ಯ ಉಪ ಚುನಾವಣೆ : ಜೆಡಿಎಸ್-ಕಾಂಗ್ರೆಸ್‌ ಮುನಿಸು ಬಿಜೆಪಿಗೆ ಸೊಗಸು?

ಜೆಡಿಎಸ್‌ ವಿರುದ್ಧ ಆರೋಪ ಶುರುವಿಟ್ಟ ಚೆಲುವರಾಯಸ್ವಾಮಿ

ಜೆಡಿಎಸ್‌ ವಿರುದ್ಧ ಆರೋಪ ಶುರುವಿಟ್ಟ ಚೆಲುವರಾಯಸ್ವಾಮಿ

ಆರಂಭದಲ್ಲಿ ಮೈತ್ರಿ ಧರ್ಮ ಪಾಲಿಸಬೇಕು ಎಂದು ಸಮಾಧಾನದ ಆತುಗಳನ್ನಾಡುತ್ತಿದ್ದ ಚೆಲುವರಾಯಸ್ವಾಮಿ ಅವರು ಆ ನಂತರ ತಾವೂ ಸಹ ದೇವೇಗೌಡ ಅವರ ವಿರುದ್ಧ ಮಾತನಾಡಲು ಶುರುವಿಟ್ಟರು.

ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು? ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?

ದೇವೇಗೌಡರು ತುಳಿಯಲು ಯತ್ನಿಸಿದ್ದರು

ದೇವೇಗೌಡರು ತುಳಿಯಲು ಯತ್ನಿಸಿದ್ದರು

ರಾಜಕೀಯದ ಆರಂಭದ ದಿನಗಳಲ್ಲಿ ದೇವೇಗೌಡರು ನನ್ನ ರಾಜಕೀಯ ಬೆಳವಣಿಗೆಗೆ ಅಡ್ಡಗಾಲು ಹಾಕಿದ್ದರು. ಆದರೂ ಸಹ ನಾನು ರಾಜಕೀಯದಲ್ಲಿ ಬೆಳೆದೆ. ಜೆಡಿಎಸ್‌ ಮೈತ್ರಿ ಧರ್ಮವನ್ನು ಪಾಲಿಸುತ್ತಿಲ್ಲ, ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಿಗಬೇಕಾದ ಗೌರವ ಧಕ್ಕುತ್ತಿಲ್ಲ ಎಂದು ಜೆಡಿಎಸ್‌ ಅಭ್ಯರ್ಥಿ ಶಿವರಾಮೇಗೌಡ ಎದುರಲ್ಲೇ ಜೆಡಿಎಸ್‌ ಮೇಲೆ ದೂರುಗಳನ್ನು ಹೇಳಿದರು.

ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ! ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ!

ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಗುತ್ತಿರುವ ಅನ್ಯಾಯ ಕುರಿತಂತೆ ಉಪಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಅವರು ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಅಲ್ಲಿಯವರೆಗೂ ಸಮಾಧಾನದಿಂದ ಇರಬೇಕು ಎಂದು ಅವರು ಕೊನೆಗೆ ಮಾಡಿದರು.

'ಮೈತ್ರಿ ಧರ್ಮ ಪಾಲಿಸುತ್ತೇನೆ'

'ಮೈತ್ರಿ ಧರ್ಮ ಪಾಲಿಸುತ್ತೇನೆ'

ಕೊನೆಗೆ ಮಾತನಾಡಿದ ಶಿವರಾಮೇಗೌಡ ಅವರು, ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮ, ಚುನಾವಣೆ ಮುಗಿದನಂತರ ಮೈತ್ರಿ ಧರ್ಮದಂತೆ ನಡೆದುಕೊಳ್ಳಲು ನಾವು ಬದ್ಧ ಎಂದು ಶಿವರಾಮೇಗೌಡ ವಚನ ನೀಡಿದರು.

ಪ್ರಚಾರಕ್ಕೆ ಬಾರದ ಅಂಬರೀಶ್‌

ಪ್ರಚಾರಕ್ಕೆ ಬಾರದ ಅಂಬರೀಶ್‌

ತಮ್ಮ ಪರ ಪ್ರಚಾರಕ್ಕೆ ಬಾರದ ಅಂಬರೀಶ್ ಅವರನ್ನು ಶಿವರಾಮೇಗೌಡ ಅವರು ಈ ಸಂದರ್ಭದಲ್ಲಿ ಕುಟುಕಿದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷದ ಮುಖಂಡರು ಮನವಿ ಮಾಡಿದರೂ ಸಹ ಅಂಬರೀಶ್ ಅವರು ಜೆಡಿಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿಲ್ಲವೆಂದು ಹೇಳಲಾಗಿದೆ.

English summary
Congress meader Cheluvaraswamy gets angry in Mandya election campaign meeting and through mike. Congress party workers opposing to vote JDS in campaign meeting so Cheluvaraswamy gets angry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X