ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಬಿ ತುಳುಕುತ್ತಿರುವ ಕಾವೇರಿಗೆ ಇಂದು ಸಿಎಂ ಬಾಗಿನ ಸಮರ್ಪಣೆ

|
Google Oneindia Kannada News

ಮಂಡ್ಯ, ಆಗಸ್ಟ್ 29: ಮಂಡ್ಯ ಜನರ ಜೀವನಾಡಿ ಕೆಆರ್ ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಿ ಕಾವೇರಿಗೆ ಪೂಜೆ ಸಲ್ಲಿಸಲಿದ್ದಾರೆ.

ತುಂಬಿದ ಕೆಆರ್ ಎಸ್‌; ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆತುಂಬಿದ ಕೆಆರ್ ಎಸ್‌; ಜಲಾಶಯದ ಸುತ್ತ ಕಲ್ಲು ಗಣಿಗಾರಿಕೆಗೆ ನಿಷೇಧಾಜ್ಞೆ

ಇದೇ ಮೊದಲ ಬಾರಿಗೆ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು, ಭರ್ತಿಯಾದ ಹದಿನೈದು ದಿನಗಳ ಬಳಿಕ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ. ಕೆಆರ್ ಎಸ್ ಅಣೆಕಟ್ಟು ಅತಿ ಕಡಿಮೆ ಅವಧಿಯಲ್ಲಿ, ಅಂದರೆ ಒಂದೇ ವಾರದಲ್ಲಿ ಭರ್ತಿಯಾಗಿರುವುದು ಈ ಬಾರಿಯ ವಿಶೇಷ. ಜಲಾಶಯಕ್ಕೆ ಬಾಗಿನ ಅರ್ಪಿಸಲು ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಸಿಎಂ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 200 ಕಾನ್ ಸ್ಟೆಬಲ್ ಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

CM Yediyurappa will submit Bagina to KRS Dam

ಜುಲೈ ತಿಂಗಳಿನ ಕೊನೆಯಲ್ಲಿ 75 ಅಡಿಗೆ ಕುಸಿದಿದ್ದ ಅಣೆಕಟ್ಟಿನ ನೀರಿನ ಮಟ್ಟ, ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸಂಪೂರ್ಣ ಭರ್ತಿಯಾಗಿತ್ತು. ಗರಿಷ್ಠ 124 ಅಡಿ ಸಾಮರ್ಥ್ಯ ಹೊಂದಿರುವ ಅಣೆಕಟ್ಟಿನಲ್ಲಿ ಕೇವಲ 83 ಅಡಿ ನೀರು ಸಂಗ್ರಹವಾಗಿತ್ತು. ಕಾವೇರಿ ಕಣಿವೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಣೆಕಟ್ಟೆಗೆ 2 ಲಕ್ಷ ಕ್ಯೂಸೆಕ್ ಅಧಿಕ ನೀರು ಹರಿದು ಬಂದು ಒಂದೇ ವಾರದಲ್ಲಿ ಭರ್ತಿಯಾಗಿದ್ದು ಈ ಬಾರಿಯ ವಿಶೇಷ ದಾಖಲೆ ಎನಿಸಿತ್ತು.

CM Yediyurappa will submit Bagina to KRS Dam

ಹೀಗಾಗಿ ತುಂಬಿ ತುಳುಕುತ್ತಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ಮಧ್ಯಾಹ್ನ 12.30 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎಸ್. ಅಶ್ವತ್ಥ ನಾರಾಯಣ, ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ವಸತಿ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾಗವಹಿಸುವರು.

ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಆರ್ ಎಸ್ ಜಲಾಶಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಭಾಗ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೊರೆತಿದೆ.

English summary
CM Yediyurappa will submit Bagina to KRS Dam. BS Yeddyurappa, the luckiest Chief Minister He is submitting 4 th time Bagina to KRS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X