• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಸಿಎಂ ಆಗಿ ಮುಂದುವರಿಕೆಗೆ ಅಭಿಮಾನಿಗಳಿಂದ ಪೂಜೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂನ್‌ 17: ಬಿ.ಎಸ್ ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ರೀತಿಯ ಕಂಟಕಗಳು ಎದುರಾಗದೆ ಸುಲಲಿತವಾಗಿ ಅವಧಿ ಪೂರ್ಣಗೊಳಿಸಲಿ ಎಂದು ಮಂಡ್ಯದ ಬಿಎಸ್‌ವೈ ಅಭಿಮಾನಿಗಳು ಎಂಟು ದಿಕ್ಕುಗಳಿಗೂ ಈಡುಗಾಯಿ ಒಡೆದಿದ್ದಾರೆ.

ಮಂಡ್ಯದ ಕಾಳಮ್ಮ ದೇವಸ್ಥಾನದ ಮುಂಭಾಗ ಗುರುವಾರ ಪೂಜೆ ಸಲ್ಲಿಸಿದ ಬಿಎಸ್‌ವೈ ಅಭಿಮಾನಿಗಳು ಎಂಟು ದಿಕ್ಕುಗಳಿಗೂ ಈಡುಗಾಯಿ ಒಡೆದು ಮುಂದಿನ ಎರಡು ವರ್ಷಗಳ ಕಾಲವೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥನೆ ಮಾಡಿದರು

ಸೊಸೆ ಮೊಳೆ ಹೊಡೆದು ಬಂದ ಹಾಗೆ ಬಂದಿದ್ದೇವೆ; ಸಚಿವ ಬಿ.ಸಿ. ಪಾಟೀಲ್ಸೊಸೆ ಮೊಳೆ ಹೊಡೆದು ಬಂದ ಹಾಗೆ ಬಂದಿದ್ದೇವೆ; ಸಚಿವ ಬಿ.ಸಿ. ಪಾಟೀಲ್

"ಸಿಎಂ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಇಳಿ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಎರಡು ವರ್ಷಗಳು ಅವರೇ ಮುಖ್ಯಮಂತ್ರಿಗಳಾಗಿದ್ದರೆ, ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ,'' ಎಂದು ಅಭಿಮಾನಿಗಳು ಹೇಳಿದ್ದಾರೆ.

   Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada

   ರಾಜ್ಯಕ್ಕೆ ಬಂದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ಭಿನ್ನರ ಬೇಡಿಕೆಗೆ ಗಮನ ಕೊಡದೆ ಬಿ.ಎಸ್ ಯಡಿಯೂರಪ್ಪರ ಬೆಂಬಲಕ್ಕೆ ನಿಂತು, ಸಚಿವರು ಮತ್ತು ಶಾಸಕರುಗಳಿಗೆ ಬಿಎಸ್‌ವೈಗೆ ಸಹಕಾರ ನೀಡುವಂತೆ ಸೂಚನೆ ನೀಡಬೇಕು. ಯಡಿಯೂರಪ್ಪ ಮೇಲೆ ಸದಾ ದೈವಾನುಗ್ರಹ ಇರಲಿ ಎಂದು ಅವರು ಪ್ರಾರ್ಥನೆ ಮಾಡಿಕೊಂಡರು.

   English summary
   Mandya: CM Yediyurappa Fans Offered Special Pooja to Continue Him As CM. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X