ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಅಡ್ಡ ನಿಲ್ಲಿಸಿದ ಸಿಎಂ!

By Manjunatha
|
Google Oneindia Kannada News

ಮಂಡ್ಯ, ಆಗಸ್ಟ್ 10: ಮಾಧ್ಯಮಗಳ ಮೇಲೆ ಸಿಎಂ ಕುಮಾರಸ್ವಾಮಿ ಮುನಿಸು ಮುಂದುವರಿದಿದ್ದು, ಮಾಧ್ಯಮಗಳ ಕ್ಯಾಮೆರಾಗಳಿಗೆ ಅಡ್ಡ ನಿಲ್ಲುವಂತೆ ಸಿಎಂ ಕುಮಾರಸ್ವಾಮಿ ಪೊಲೀಸರಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಬೆಳಿಗ್ಗೆ ಮಾಧ್ಯಮಗಳು ಸಿಎಂ ಅವರ ಪ್ರಕ್ರಿಯೆ ಬಯಸಿ ಅವರ ಬಳಿ ಹೋದಾಗ ಸಿಎಂ ಅವರ ಸೂಚನೆ ಮೇರೆಗೆ ಈ ವೇಳೆ ಪೊಲೀಸರು ಮಾಧ್ಯಮಗಳ ಕ್ಯಾಮೆರಾಕ್ಕೆ ಅಡ್ಡ ನಿಂತಿದ್ದಾರೆ.

ಪ್ರತ್ಯೇಕ ರಾಜ್ಯದ ಕೂಗು, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ!ಪ್ರತ್ಯೇಕ ರಾಜ್ಯದ ಕೂಗು, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ!

ನಿನ್ನೆಯಷ್ಟೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ನಾನು ಮಾಧ್ಯಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ' ಎಂದಿದ್ದರು. ಇಂದು ಅದನ್ನು ಪೊಲೀಸರ ಮೂಲಕ ಜಾರಿ ಮಾಡಿದ್ದಾರೆ.

CM Kumaraswamy made police to stand in front of media cameras

ಕೆಲವು ದಿನಗಳ ಹಿಂದೆಯಷ್ಟೆ, ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ಕೆಲವು ಸಮಯದಲ್ಲಿ ನಿರ್ಬಂಧ ಹೇರುವ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದರು. ಮಾಧ್ಯಮಗಳ ವಾಹನಗಳು ವಿಧಾನಸೌಧದ ಆವರಣ ಪ್ರವೇಶದಂತೆ ತಡೆಯನ್ನೂ ಒಡ್ಡಲಾಗಿತ್ತು.

ಮಾಧ್ಯಮ ನಿಯಂತ್ರದ ಮೊದಲ ಹೆಜ್ಜೆ, ವಿಧಾನಸೌಧಕ್ಕೆ ವಾಹನ ಎಂಟ್ರಿ ಬಂದ್ಮಾಧ್ಯಮ ನಿಯಂತ್ರದ ಮೊದಲ ಹೆಜ್ಜೆ, ವಿಧಾನಸೌಧಕ್ಕೆ ವಾಹನ ಎಂಟ್ರಿ ಬಂದ್

ಮುಖ್ಯಮಂತ್ರಿ ಆದಮೇಲೆ ಪದೇ ಪದೇ ಮಾಧ್ಯಮಗಳ ಮೇಲೆ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಸಿಎಂ, ಇಂದು ಒಂದು ಹಂತ ಮುಂದೆ ಹೋಗಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಪೊಲೀಸರನ್ನು ಗುರಾಣಿಯಂತೆ ಬಳಸಿದ್ದಾರೆ.

English summary
CM Kumaraswamy is upset by media from some days. Today he made to police to stand in front of media cameras to avoid covering his rice planting program. media also upset with CM's action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X