ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾರಿ ಮಧ್ಯೆ ಕಾರು ನಿಲ್ಲಿಸಿ ಮಹಿಳೆಯ ಕಷ್ಟ ಕೇಳಿದ ಕುಮಾರಸ್ವಾಮಿ

|
Google Oneindia Kannada News

Recommended Video

ಪ್ರಶಂಸೆಗೆ ಕಾರಣವಾಯ್ತು ಕುಮಾರಸ್ವಾಮಿ ನಡೆ..!

ಮಂಡ್ಯ, ಏಪ್ರಿಲ್ 09: ಸಿಎಂ ಕುಮಾರಸ್ವಾಮಿ ಅವರ ಮಾನವೀಯ ಗುಣ ಇಂದು ಮತ್ತೊಮ್ಮೆ ಜಗಜ್ಜಾಹೀರಾಯಿತು. ದಾರಿ ಮಧ್ಯೆ ಕಾರು ನಿಲ್ಲಿಸಿ ಮಹಿಳೆಯೊಬ್ಬರ ಕಷ್ಟ ಕೇಳಿ ಅವರಿಗೆ ನೆರವಿನ ಭರವಸೆಯನ್ನು ಸಿಎಂ ಇಂದು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಬೆಂಗಳೂರಿನ ಕಡೆಗೆ ಕುಮಾರಸ್ವಾಮಿ ಅವರು ಕಾರಿನಲ್ಲಿ ಬರುತ್ತಿದ್ದರು, ಹೊಸಹಳ್ಳಿ ಗೇಟ್ ಬಳಿ ಕೆಲವರು ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರಿಗಾಗಿ ಕಾಯುತ್ತಿದ್ದರು, ಅದರಲ್ಲಿ ಕುಮಾರ್ ಮತ್ತು ಲಕ್ಷ್ಮಿ ದಂಪತಿ ಸಹ ಇದ್ದರು.

CM Kumaraswamy helped a girl child suffering from disease

ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಕಂಡು ಕಾರು ನಿಲ್ಲಿಸುತ್ತಲೇ, ಲಕ್ಷ್ಮಿ ಅವರು ತಮ್ಮ ಮಗಳು ಪ್ರಿಯಾಂಜಲಿ ಬಳಲುತ್ತಿರುವ ಕಾಯಿಲೆಯ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡು ಹನಿಗಣ್ಣಾದರು, ಮಹಿಳೆಯ ಕಷ್ಟಕ್ಕೆ ಕೂಡಲೇ ಸ್ಪಂದಿಸಿದ ಕುಮಾರಸ್ವಾಮಿ, 'ಇಂದು ಸಂಜೆಯೇ ನನ್ನ ವಿಜಯನಗರದ ಮನೆಗೆ ಬನ್ನಿ ಅಗತ್ಯ ಚಿಕಿತ್ಸೆಯ ಖರ್ಚು ನಾನು ಭರಿಸುತ್ತೇನೆ, ತಜ್ಞ ವೈದ್ಯರ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ' ಎಂದು ಹೇಳಿದರು.

'ಮೋದಿ' ಮುಖ ನೋಡಿ ಎಂದು ಮತ ಕೇಳುತ್ತಿದ್ದಾರೆ, ಇಂತವರನ್ನು ನಂಬಬಹುದೇ?' 'ಮೋದಿ' ಮುಖ ನೋಡಿ ಎಂದು ಮತ ಕೇಳುತ್ತಿದ್ದಾರೆ, ಇಂತವರನ್ನು ನಂಬಬಹುದೇ?'

ಕೂಡಲೇ ಕುಮಾರ್ ಮತ್ತು ಲಕ್ಷ್ಮಿ ದಂಪತಿ ಮಗಳು ಪ್ರಿಯಾಂಜಲಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪ್ರಿಯಾಂಜಲಿ ಹುಟ್ಟುತ್ತಲೆ ನರದೌರ್ಬಲ್ಯದಿಂದ ಬಳಲುತ್ತಿದ್ದಾಳೆ. ಕುಮಾರ್ ಮತ್ತು ಲಕ್ಷ್ಮಿ ಅವರುಗಳು ಕೂಲಿ ಕೆಲಸ ಮಾಡುತ್ತಿದ್ದು, ಈ ವರೆಗೆ ಎರಡು ಲಕ್ಷ ರೂಪಾಯಿಯನ್ನು ಮಗಳ ಚಿಕಿತ್ಸೆಗೆ ವ್ಯಯಿಸಿದ್ದಾರೆ.

ಸಿದ್ದರಾಮಯ್ಯಗೂ ಜಗ್ಗುತ್ತಿಲ್ಲ: ಮಂಡ್ಯದಲ್ಲಿ ಮೈತ್ರಿಧರ್ಮ ಔಟ್ ಆಫ್ ಕಂಟ್ರೋಲ್ ಸಿದ್ದರಾಮಯ್ಯಗೂ ಜಗ್ಗುತ್ತಿಲ್ಲ: ಮಂಡ್ಯದಲ್ಲಿ ಮೈತ್ರಿಧರ್ಮ ಔಟ್ ಆಫ್ ಕಂಟ್ರೋಲ್

English summary
CM Kumaraswamy today helped a girl child who suffering from disease. He traveling in car while her parents stops the car and asked for help and Kumaraswamy promises to give help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X