ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಕೈ ಸೇರಿದ ಮಂಡ್ಯ ಫಲಿತಾಂಶದ ಗುಪ್ತಚರ ವರದಿಯಲ್ಲೇನಿದೆ?

|
Google Oneindia Kannada News

Recommended Video

ಎಚ್‍ಡಿಕೆ ಕೈ ಸೇರಿತು ಮಂಡ್ಯ ಚುನಾವಣೆಯ 3ನೇ ಗುಪ್ತಚರ ಇಲಖೆ ವರದಿ | Oneindia Kannada

ಮಂಡ್ಯ, ಮೇ 12: ಕರ್ನಾಟಕದ ಒಟ್ಟು ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತವಿದೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ ಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಕೆಲವು ವರದಿಗಳ ಮೇಲಿನ ಚರ್ಚೆ ನಡೆಯುತ್ತಿದೆ. ಈ ಸಾಲಿಗೆ ಇದೀಗ ಗುಪ್ತಚರ ಇಲಾಖಾ ವರದಿಯೂ ಕೂಡ ಸೇರಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನೂರೆಂಟು ಪ್ರಶ್ನೆ ಹುಟ್ಟುಹಾಕುತ್ತಿರುವ ಸಿಎಂ ರೆಸಾರ್ಟ್ ವಾಸ್ತವ್ಯ..! ನೂರೆಂಟು ಪ್ರಶ್ನೆ ಹುಟ್ಟುಹಾಕುತ್ತಿರುವ ಸಿಎಂ ರೆಸಾರ್ಟ್ ವಾಸ್ತವ್ಯ..!

ಗುಪ್ತಚರ ಇಲಾಖೆ ನೀಡಿರುವ ಅಂತಿಮ ವರದಿಯಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೊಂಚ ಹಿನ್ನಡೆಯಾಗಿದೆ ಎನ್ನಲಾಗಿದ್ದು, ಸುಮಲತಾಗೆ ಹೋಲಿಸಿದರೆ ನಿಖಿಲ್​ಗೆ ಲೀಡ್ ಕಮ್ಮಿ ಇದೆ ಎಂಬುದು ವರದಿಯಲ್ಲಿ ಇರುವುದಾಗಿ ತಿಳಿದುಬಂದಿದೆ.

Chief minister got another intelligence report on mandya constituency

ಮೊದಲನೇ ಹಂತದಲ್ಲಿ ಏಪ್ರಿಲ್ 18ರಂದು ಮಂಡ್ಯ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು-ಕೊಡಗು, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಚಿತ್ರದರ್ಗ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಮಂಡ್ಯ ಫಲಿತಾಂಶ, ಮತ್ತೊಂದು ಸಮೀಕ್ಷೆಗೆ ಸೂಚನೆ ಕೊಟ್ಟರೇ ಕುಮಾರಸ್ವಾಮಿ?ಮಂಡ್ಯ ಫಲಿತಾಂಶ, ಮತ್ತೊಂದು ಸಮೀಕ್ಷೆಗೆ ಸೂಚನೆ ಕೊಟ್ಟರೇ ಕುಮಾರಸ್ವಾಮಿ?

ಮಂಡ್ಯ ಲೋಕಸಭಾ ಸಮರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಹಾಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಲೆಕ್ಕಾಚಾರಗಳು ನಡೆಯುತ್ತಿದ್ದು, ರಹಸ್ಯ ಕ್ಷೇತ್ರವಾರು ಸಮೀಕ್ಷಾ ವರದಿಯನ್ನು ಗುಪ್ತಚರ ಇಲಾಖೆ ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದೆ ಎಂದು ಹೇಳಲಾಗಿದೆ.

ಮಹಿಳಾ ಮತ್ತು ಯುವ ಮತದಾರರ ಬಗ್ಗೆ ಗುಪ್ತಚರ ಇಲಾಖೆ ನಿಖರ ವರದಿ ನೀಡುವಲ್ಲಿ ವಿಫಲವಾಗಿದೆ ಎಂಬ ಮಾಹಿತಿ ಇದ್ದು, ಮಂಡ್ಯದ ಬಿಜೆಪಿ, ರೈತ ಸಂಘ ಮತ್ತು ಜೆಡಿಎಸ್ ನ ಕೆಲ ಅತೃಪ್ತರು ಸುಮಲತಾಗೆ ಬೆಂಬಲ ನೀಡಿರುವುದು ಸಿಎಂಗೆ ನುಂಗಲಾರದ ತುಪ್ಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Lok Sabha elections 2019: Chief minister Kumaraswamy got another intelligence report on Mandya constituency. This report tells that JDS may loose the seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X