ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಎಲೆಕ್ಷನ್: ಎಲ್ಲರಿಗೂ ಶಾಕ್ ಕೊಟ್ಟ ಸುಮಲತಾ

|
Google Oneindia Kannada News

Recommended Video

ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್,ಬಿಜೆಪಿಗೆ ಭಾರೀ ನಿರಾಸೆ | Oneindia Kannada

ಮಂಡ್ಯ, ನವೆಂಬರ್ 27: ಉಪ ಚುನಾವಣೆಯಲ್ಲಿ ಇವರು ನಮಗೆ ಬೆಂಬಲ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶಾಕ್ ಕೊಟ್ಟಿದ್ದಾರೆ.

ಉಪ ಚುನಾವಣೆಯಲ್ಲಿ ನಾನು ತಟಸ್ಥ

ಉಪ ಚುನಾವಣೆಯಲ್ಲಿ ನಾನು ತಟಸ್ಥ

ಸುಮಲತಾ ನಮ್ಮ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದ ಎರಡೂ ಪಕ್ಷಗಳ ಆಸೆಗೆ ತಣ್ಣೀರೆರಚಿದ್ದಾರೆ. ನನಗೆ ಬಿಜೆಪಿಯವರೂ ಬೇಕು, ಕಾಂಗ್ರೆಸ್ ನವರೂ ಬೇಕು ಹೀಗಾಗಿ ಉಪ ಚುನಾವಣೆಯಲ್ಲಿ ನಾನು ಯಾರ ಪರವೂ ಪ್ರಚಾರಕ್ಕೆ ಬರಲ್ಲ ಎಂದು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಪರವೂ ಪ್ರಚಾರಕ್ಕೆ ಹೋಗದೇ ಈ ಬಾರಿ ತಟಸ್ಥವಾಗಿರಲು ನಿರ್ಧರಿಸಿದ್ದಾರೆ. ಈ ಮೂಲಕ ಸುಮಲತಾ ಅಂಬರೀಶ್ ಬೆಂಬಲದ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯನ್ನುಂಟು ಮಾಡಿದೆ.

ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?

ನಿಮ್ಮ ಬೆಂಬಲ ನಮಗೇ ಕೊಡಿ

ನಿಮ್ಮ ಬೆಂಬಲ ನಮಗೇ ಕೊಡಿ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಬರಬೇಕೆಂದು ಕೇಳಿಕೊಂಡಿದ್ದರು, ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು. ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದವರೂ ಬೆಂಬಲ ನೀಡಿದ್ದರು. ಹೀಗಾಗಿ ಈ ಉಪ ಚುನಾವಣೆಯಲ್ಲಿ ಬೆಂಬಲ ನೀಡಲು ಒತ್ತಡ ಹೇರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರು "ನಾನು ನಿಮ್ಮನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದೆ, ಈಗ ನೀವು ನನ್ನನ್ನು ಬೆಂಬಲಿಸಿ ಎಂದು ಒತ್ತಡ ಹಾಕಿದ್ದಾರೆ. ಅಲ್ಲದೇ ಬಿಜೆಪಿಯವರೂ ಸಹ ನಾವು ನಿಮಗೆ ಬಾಹ್ಯ ಬೆಂಬಲ ನೀಡಿದ್ದೇವು, ಉಪ ಚುನಾವಣೆಯಲ್ಲಿ ನೀವು ನಮಗೇ ಬೆಂಬಲಿಸಿ ಎಂದು ಕೇಳಿಕೊಂಡಿದ್ದರು.

ಎರಡೂ ಪಕ್ಷಗಳಿಗೆ ನಿರಾಸೆ

ಎರಡೂ ಪಕ್ಷಗಳಿಗೆ ನಿರಾಸೆ

ಎರಡೂ ಪಕ್ಷಗಳ ಮಧ್ಯೆ ಧರ್ಮ ಸಂಕಟಕ್ಕೆ ಸಿಲುಕಿರುವ ಸಂಸದೆ ಸುಮಲತಾ ಈ ಉಪ ಚುನಾವಣೆಯಲ್ಲಿ ಯಾರೊಬ್ಬರಿಗೂ ಬೆಂಬಲಿಸಿದರೆ ಮತ್ತೊಬ್ಬರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಸೈಲೆಂಟಾಗಿರಲು ನಿರ್ಧರಿಸಿದ್ದಾರೆ.

ಯಾರ ಪರವೂ ಪ್ರಚಾರದಲ್ಲಿ ಭಾಗವಹಿಸಲ್ಲ ಎಂದು ಎರಡೂ ಪಕ್ಷಗಳಿಗೂ ಸ್ಪಷ್ಟವಾಗಿ ಸುಮಲತಾ ತಿಳಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ನಿರಾಸೆಯಾಗಿದೆ. ಇವರಿಂದ ಪ್ರಚಾರ ಮಾಡಿಸಿ ಮತ ಕ್ರೋಢೀಕರಿಣ ಮಾಡಬೇಕೆಂದುಕೊಂಡಿದ್ದವರಿಗೆ ಬಾಯಿ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಪ್ರತಿಷ್ಠೆಯ ಕಣವಾಗಿ ಮಾರ್ಪಡುತ್ತಿದೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಪ್ರತಿಷ್ಠೆಯ ಕಣವಾಗಿ ಮಾರ್ಪಡುತ್ತಿದೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ

ನನಗೆ ವಿರೋಧವೂ ಇಷ್ಟವಿಲ್ಲ

ನನಗೆ ವಿರೋಧವೂ ಇಷ್ಟವಿಲ್ಲ

ನನಗೆ ಎರಡೂ ಪಕ್ಷದ ಕಾರ್ಯಕರ್ತರು ಅವಶ್ಯ. ಯಾರಿಗೂ ಬೆಂಬಲ ನೀಡದೇ, ಯಾರೊಬ್ಬರ ವಿರೋಧ ಕಟ್ಟಿಕೊಳ್ಳಬಾರದೆಂದು ನಿರ್ಧರಿಸಿದ್ದೇನೆ ಓಟ್ ಹಾಕುವ ನಿರ್ಧಾರ ಮತದಾರರಿಗೆ ಬಿಟ್ಟಿದ್ದೇನೆಂದು ಹೇಳಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಆರ್.ನಾರಾಯಣ ಗೌಡ, ಕಾಂಗ್ರೆಸ್ ನಿಂದ ಕೆ.ಬಿ,ಚಂದ್ರಶೇಖರ್, ಜೆಡಿಎಸ್ ನಿಂದ ದೇವರಾಜ್ ಬಿ.ಎಲ್ ಚುನಾವಣಾ ಆಖಾಡದಲ್ಲಿದ್ದಾರೆ. ಈ ಉಪ ಚುನಾವಣೆಯು ಡಿಸೆಂಬರ್ 05 ರಂದು ನಡೆಯಲಿದ್ದು, ಡಿಸೆಂಬರ್ 09 ರಂದು ಪ್ರಕಟಗೊಳ್ಲಲಿದೆ.

English summary
Mandya MP Sumalatha Ambarish Shocked To The BJP And Congress Parties, Who Were Expected To Support Us In The By Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X