ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಜೆಡಿಎಸ್‌ ವಿರುದ್ಧ ತೊಡೆತಟ್ಟಿರುವ ಬಿಜೆಪಿ ಅಭ್ಯರ್ಥಿಯ ಆಸ್ತಿ ವಿವರ

|
Google Oneindia Kannada News

ಮಂಡ್ಯ, ಅಕ್ಟೋಬರ್ 17: ಮಂಡ್ಯ ಲೋಕಸಭೆ ಉಪಚುನಾವಣೆ ನೇರವಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಯುದ್ಧವಾಗಿದೆ.

ಬಿಜೆಪಿಯು ಈ ಮೊದಲು ಮಂಡ್ಯದಿಂದ ಆರ್.ಅಶೋಕ್‌ ಅವರನ್ನು ಕಣಕ್ಕಿಳಿಸಲು ನಿರ್ಧಿಸಿತ್ತಾದರೂ ಆ ನಂತರ ಬಹು ಹುಡುಕಾಟದ ನಂತರ ಡಾ.ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದೆ.

ಡಾ.ಸಿದ್ದರಾಮಯ್ಯ ಬಿಜೆಪಿಯ ಮಾಜಿ ಶಾಸಕ ದೊಡ್ಡಬೋರೇಗೌಡ ಅವರ ಪುತ್ರ. ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡಿ ಜುಲೈನಲ್ಲಿ ನಿವೃತ್ತಿ ಹೊಂದಿದ್ದರು. ಕೆಇಆರ್‌ಸಿ ಕಾರ್ಯದರ್ಶಿಯಾಗಿಯೂ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ನಿವೃತ್ತಿ ಬಳಿಕ ರಾಜಕೀಯಕ್ಕೆ ಧುಮುಕಿದ್ದಾರೆ.

ಆರ್.ಅಶೋಕ್‌ ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆಸ್ತಿ ಮಾಹಿತಿಯನ್ನೂ ಸಲ್ಲಿಸಿದ್ದು, ತಮ್ಮ ಎದುರಾಳಿ ಜೆಡಿಎಸ್‌ನ ಶಿವರಾಮೇಗೌಡ ಅವರಿಗಿಂತಲೂ ಭಿನ್ನವಾದ ಆಸ್ತಿ ಮಾಹಿತಿ ಸಿದ್ದರಾಮಯ್ಯ ಅವರದ್ದು.

ಶಿವಮೊಗ್ಗ : ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಆಸ್ತಿ ವಿವರ ಶಿವಮೊಗ್ಗ : ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ಆಸ್ತಿ ವಿವರ

ಶಿವರಾಮೇಗೌಡ ಅವರು ಸಲ್ಲಿಸಿರುವ ಆಸ್ತಿ ಮಾಹಿತಿಯಲ್ಲಿ ಅವರಿಗಿಂತ ಅವರ ಪತ್ನಿ ಹೆಚ್ಚು ಶ್ರೀಮಂತರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ತದ್ವಿರುದ್ಧ ಇಲ್ಲಿ ಡಾ.ಸಿದ್ದರಾಮಯ್ಯ ಅವರೇ ಶ್ರೀಮಂತರು ಅವರ ಪತ್ನಿ ತೀರಾ ಬಡವರು.

ಡಾ.ಸಿದ್ದರಾಮಯ್ಯ ವಾರ್ಷಿಕ ಆದಾಯ ಎಷ್ಟು?

ಡಾ.ಸಿದ್ದರಾಮಯ್ಯ ವಾರ್ಷಿಕ ಆದಾಯ ಎಷ್ಟು?

* ಡಾ.ಸಿದ್ದರಾಮಯ್ಯ ಅವರು ಲೆಕ್ಕಪತ್ರ ಸಲ್ಲಿಸಿರುವ ಪ್ರಕಾರ 2018-19ರಲ್ಲಿ ಅವರ ಒಟ್ಟು ಆದಾಯ 14,41,904 ರೂಪಾಯಿಗಳು. ಅವರ ಪತ್ನಿ ಮಾಲತಿ, ಮಕ್ಕಳಾದ ನಿತ್ಯ ಹಾಗೂ ಅನನ್ಯಗೆ ಯಾವುದೇ ಆದಾಯ ಇಲ್ಲ.

* ಸಿದ್ದರಾಮಯ್ಯ ಅವರ ಬಳಿ ಪ್ರಸ್ತುತ 5 ಲಕ್ಷ ನಗದಿದೆ. ಅವರ ಪತ್ನಿ ಮಾಲತಿ ಅವರ ಬಳಿ 2 ಲಕ್ಷ ನಗದಿದೆ. ಮಕ್ಕಳಿಬ್ಬರ ಬಳಿ ಯಾವುದೇ ನಗದು ಹಣವಿಲ್ಲ.

ಹೆಂಡತಿ, ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ ಕೈ ಅಭ್ಯರ್ಥಿ ಉಗ್ರಪ್ಪ!ಹೆಂಡತಿ, ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ ಕೈ ಅಭ್ಯರ್ಥಿ ಉಗ್ರಪ್ಪ!

ಸಿದ್ದರಾಮಯ್ಯ ಖಾತೆಯಲ್ಲಿರುವ ಹಣದ ಮಾಹಿತಿ

ಸಿದ್ದರಾಮಯ್ಯ ಖಾತೆಯಲ್ಲಿರುವ ಹಣದ ಮಾಹಿತಿ

* ಡಾ.ಸಿದ್ದರಾಮಯ್ಯ ಅವರ ಹೆಸರಿನಲ್ಲಿನ ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 4.51 ಲಕ್ಷ ಹಣ ಇದೆ. ಅವರ ಮಡದಿಯ ಖಾತೆಯಲ್ಲಿ 68,680 ಹಣವಿದೆ. ಮಗಳು ನಿತ್ಯ ಖಾತೆಯಲ್ಲಿ 20,000 ಹಣ ಇದ್ದರೆ ಅನನ್ಯ ಖಾತೆಯಲ್ಲಿ 2 ಲಕ್ಷ ಹಣವಿದೆ.

* ಡಾ.ಸಿದ್ದರಾಮಯ್ಯ ಅವರ ಎರಡು ವಿಮೆ ಇವುಗಳ ಒಟ್ಟು ಮೌಲ್ಯ 3 ಲಕ್ಷ. ವಿಶೇಷವೆಂದರೆ ಇವರನ್ನು ಹೊರತುಪಡಿಸಿ ಇನ್ನಾರ ಹೆಸರಿನಲ್ಲೂ ವಿಮೆ ಇಲ್ಲ.

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ

ಸಿದ್ದರಾಮಯ್ಯ ಬಳಿ ಇರುವ ಕಾರುಗಳೆಷ್ಟು?

ಸಿದ್ದರಾಮಯ್ಯ ಬಳಿ ಇರುವ ಕಾರುಗಳೆಷ್ಟು?

* ಸಿದ್ದರಾಮಯ್ಯ ಅವರ ಬಳಿ 2017ರ ಮಾಡೆಲ್‌ನ ಹ್ಯುಂಡಾಯ್ ಐ 10 ಕಾರೊಂದಿದೆ. ಅದು ಬಿಟ್ಟು ಕುಟುಂಬಕ್ಕೆ ಇನ್ನಾವುದೇ ವಾಹನವಿಲ್ಲ.

* ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಒಟ್ಟು 1 ಕೆಜಿ ಚಿನ್ನ ಇದೆ ಇದರ ಮೌಲ್ಯ 27 ಲಕ್ಷ. 3 ಲಕ್ಷ ಮೌಲ್ಯದ 6 ಕೆ.ಜಿ ಬೆಳ್ಳಿ ಇದೆ. ವಿಶೇಷವೆಂದರೆ ಅವರ ಮಡದಿ ಬಳಿಯಾಗಲಿ ಅವರ ಹೆಣ್ಣು ಮಕ್ಕಳ ಹೆಸರಲ್ಲಾಗಲಿ ಚಿನ್ನ ಇಲ್ಲವೇ ಇಲ್ಲ.

* ಡಾ.ಸಿದ್ದರಾಮಯ್ಯ ಅವರ ಒಟ್ಟು ಚರಾಸ್ತಿ ಮೌಲ್ಯ 51.66 ಲಕ್ಷ ರೂಪಾಯಿಗಳು. ಅವರ ಪತ್ನಿ ಮತ್ತು ಮಕ್ಕಳ ಹೆಸಲ್ಲಿ ಯಾವುದೇ ಚರಾಸ್ತಿ ಇಲ್ಲ.

ಆರು ಕೋಟಿ ಮೌಲ್ಯದ ಪಿತ್ರಾರ್ಜಿತ ಆಸ್ತಿ

ಆರು ಕೋಟಿ ಮೌಲ್ಯದ ಪಿತ್ರಾರ್ಜಿತ ಆಸ್ತಿ

* ಡಾ.ಸಿದ್ದರಾಮಯ್ಯ ಅವರಿಗೆ 16.04 ಎಕರೆ ಪಿತ್ರಾರ್ಜಿತವಾದ ಕೃಷಿ ಜಮೀನಿದೆ. ಅದರ ಈಗಿನ ಮಾರುಕಟ್ಟೆ ಮೌಲ್ಯ 6 ಕೋಟಿ ಆಗುತ್ತದೆ. ಮಕ್ಕಳು ಹಾಗೂ ಹೆಂಡತಿ ಹೆಸರಲ್ಲಿ ಯಾವುದೇ ಜಮೀನಿಲ್ಲ.

* ಸಿದ್ದರಾಮಯ್ಯ ಅವರ ಬಳಿ ಪಿತ್ರಾರ್ಜಿತವಾದ ಮನೆಯೊಂದಿದೆ. ಅದನ್ನು ಹೊರತುಪಡಿಸಿ ಮೂರು ಸೈಟನ್ನು ಅವರೇ ಖರೀದಿಸಿದ್ದಾರೆ. ಅವುಗಳ ಈಗಿನ ಮಾರುಕಟ್ಟೆ ಮೌಲ್ಯ 6.48 ಕೋಟಿ ಇದೆ.

* ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಎರಡರ ಈಗಿನ ಮಾರುಕಟ್ಟೆ ಮೌಲ್ಯ 60 ಲಕ್ಷ ರೂಪಾಯಿ.

ವಸತಿ ಹಾಗೂ ವಾಣಿಜ್ಯ ಕಟ್ಟಗಳು ಹಲವು

ವಸತಿ ಹಾಗೂ ವಾಣಿಜ್ಯ ಕಟ್ಟಗಳು ಹಲವು

* ಡಾ.ಸಿದ್ದರಾಮಯ್ಯ ಅವರಿಗೆ ಮಂಡ್ಯದ ಯತ್ತಗದಹಳ್ಳಿಯಲ್ಲಿ ಒಂದು ಆರ್‌ಸಿಸಿ ಮನೆ ಹಾಗೂ ದನದ ಕೊಟ್ಟಿದೆ ಇದೆ. ಇದರ ಮೌಲ್ಯ 88 ಲಕ್ಷ ರೂಪಾಯಿ. ಬೆಂಗಳೂರಿನ ಅಂಜನಾಪುರದಲ್ಲಿ ಒಂದು ಮನೆ ಖರೀದಿಸಿದ್ದಾರೆ ಅವರ ಈಗಿನ ಮೌಲ್ಯ 50 ಲಕ್ಷ ರೂಪಾಯಿ. ಜೆಪಿ ನಗರದಲ್ಲಿ 4 ಕೋಟಿ ಮೌಲ್ಯದ ಒಂದು ವಾಸದ ಮನೆ ಇದೆ.

* ಡಾ.ಸಿದ್ದರಾಮಯ್ಯ ಅವರ ಸ್ಥಿರಾಸ್ತಿ ಮೌಲ್ಯ 12.48 ಕೋಟಿ ಇದೆ. ಅವರ ಒಟ್ಟು ಆಸ್ತಿ 13.04 ಕೋಟಿಯದ್ದಾಗಿದೆ.

ಸಾಲದ ಹೊರೆಯೂ ಸಾಕಷ್ಟಿದೆ

ಸಾಲದ ಹೊರೆಯೂ ಸಾಕಷ್ಟಿದೆ

* ಡಾ.ಸಿದ್ದರಾಮಯ್ಯ ಅವರ ಮೇಲೆ ಸಾಲದ ಹೊರೆಯೂ ಸಾಕಷ್ಟಿದೆ ಮಂಡ್ಯದ ಬ್ಯಾಂಕೊಂದಕ್ಕೆ 80 ಲಕ್ಷ ಸಾಲ ಮರುಪಾವತಿ ಮಾಡಬೇಕು. ಯಲಹಂಕದ ಬ್ಯಾಂಕೊಂದಕ್ಕೆ 1.74 ಕೋಟಿ ಸಾಲ ನೀಡಬೇಕು.

* ಸಿದ್ದರಾಮಯ್ಯ ಅವರು ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದಿದ್ದಾರೆ. ಒಟ್ಟು 11 ವ್ಯಕ್ತಿಗಳಿಂದ 80 ಲಕ್ಷ ಸಾಲ ಪಡೆದಿದ್ದಾರೆ. ಇವರ ಕುಟುಂಬದ ಇನ್ಯಾವ ಸದಸ್ಯರಿಗೂ ಸಾಲದ ಹೊರೆ ಇಲ್ಲ.

* ಡಾ.ಸಿದ್ದರಾಮಯ್ಯ ಅವರು ಎಂಎಸ್‌ಸಿ, ಪಿಎಚ್‌ಡಿ ಮತ್ತು ಕೆಎಎಸ್‌ ಮಾಡಿದ್ದಾರೆ. ಇವರ ಮೇಲೆ ಯಾವುದೇ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣಗಳಿಲ್ಲ.

English summary
Dr Siddaramaiah is the BJP candidate in Mandy for Lok Sabha by election. He is a former KAS officer and recently joined BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X