ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಅನಿಷ್ಟ ಪದ್ಧತಿಗಳಿಗೆ ಬ್ರಿಟಿಷರು ಕಾರಣ; ಎಚ್. ಎಸ್. ಮುದ್ದೇಗೌಡ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ,ಜೂ 26: "ಈ ನಾಡಿನ ಎಲ್ಲ ಅನಿಷ್ಟ ಪದ್ಧತಿಗಳಿಗೂ ಅನ್ಯ ಧರ್ಮಿಯರೇ ಕಾರಣ. ಬಾಲ್ಯವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿ ಸಮಾಜದಲ್ಲಿ ತಲೆದೋರಲು ಯಾರು ಕಾರಣರು? ಎಂಬುದನ್ನು ಮೊದಲು ತಿಳಿಯುವ ಅಗತ್ಯತೆ ಇದೆ" ಎಂದು ಸಾಹಿತಿ ಡಾ. ಎಚ್. ಎಸ್. ಮುದ್ದೇಗೌಡ ಹೇಳಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ನಗರದ ಗಾಂಧಿ ಭವನದಲ್ಲಿ ನಡೆದ 395ನೇ ವರ್ಷದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಗನನ್ನು ಪಿಎಸ್‌ಐ ಮಾಡುವ ಆಸೆ: 38 ಲಕ್ಷ ಕಳೆದುಕೊಂಡ ಮಂಡ್ಯದ ರೈತಮಗನನ್ನು ಪಿಎಸ್‌ಐ ಮಾಡುವ ಆಸೆ: 38 ಲಕ್ಷ ಕಳೆದುಕೊಂಡ ಮಂಡ್ಯದ ರೈತ

"ಬ್ರಿಟಿಷರು ನಮ್ಮ ಎಲ್ಲ ಅನಿಷ್ಟ ಪದ್ಧತಿಗಳಿಗೆ ಕಾರಣ ಎಂಬ ಮನೋಭಾವನೆ ನಮ್ಮಲ್ಲಿದೆ. ಆದರೆ ಬ್ರಿಟಿಷರಿಗೂ ಮುನ್ನ ಈ ನಾಡಿನಲ್ಲಿ ಆಳ್ವಿಕೆ ನಡೆಸಿದವರು ಮೊಹಮದೀಯರು. ಅವರಿಂದಲೇ ಎಲ್ಲ ಅನಿಷ್ಟ ಪದ್ಧತಿಗಳು ಹುಟ್ಟಿಕೊಂಡವು" ಎಂದು ಸಾಹಿತಿ ಎಂದು ಡಾ. ಎಚ್. ಎಸ್. ಮುದ್ದೇಗೌಡ ತಿಳಿಸಿದರು.

ಪ್ಯಾಟೇ ಹುಡ್ಗಿ ಹಳ್ಳಿ ಲೈಫ್ ಶೋನ ಪೂರ್ಣಿಮಾಗೆ ಹಳ್ಳಿ ಆಸ್ಪತ್ರೆಯಲ್ಲಿಯೇ ಹೆರಿಗೆಪ್ಯಾಟೇ ಹುಡ್ಗಿ ಹಳ್ಳಿ ಲೈಫ್ ಶೋನ ಪೂರ್ಣಿಮಾಗೆ ಹಳ್ಳಿ ಆಸ್ಪತ್ರೆಯಲ್ಲಿಯೇ ಹೆರಿಗೆ

ಗಂಡ ಸತ್ತ ನಂತರ ಆತನ ಚಿತೆಗೆ ಪ್ರವೇಶ ಮಾಡಿ ಸತಿಸಹಗಮನ

ಗಂಡ ಸತ್ತ ನಂತರ ಆತನ ಚಿತೆಗೆ ಪ್ರವೇಶ ಮಾಡಿ ಸತಿಸಹಗಮನ

"ಮುಸಲ್ಮಾನರ ಆಳ್ವಿಕೆ ಕಾಲಘಟ್ಟದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಎಳೆದುಕೊಂಡು ಹೋಗಿ ಇಲ್ಲದ ಕಿರುಕುಳ ನೀಡುತ್ತಿದ್ದರು. ಇನ್ನು ಗಂಡ ಸತ್ತು ವಿಧವೆಯಾರದ ಚಂದದ ಹೆಣ್ಣು ಮಕ್ಕಳು ಸಿಕ್ಕರಂತೂ ಅವರ ಪಾಡು ಹೇಳತೀರದಾಗಿತ್ತು. ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಹಿಂದೂಗಳು ತಮ್ಮ ಹೆಣ್ಣು ಮಕ್ಕಳನ್ನು ಜೋಪಾನ ಮಾಡಲು ಬಾಲ್ಯವಿವಾಹದಂತಹ ಪದ್ಧತಿಯನ್ನು ರೂಢಿಸಿಕೊಂಡರು. ಮುಸಲ್ಮಾನ ದಂಗೆಕೋರರು ವಿವಾಹಿತ ಹೆಣ್ಣು ಮಕ್ಕಳನ್ನು ಮುಟ್ಟುತ್ತಿರಲಿಲ್ಲ. ಆದ್ದರಿಂದ ಬಾಲ್ಯ ವಿವಾಹವನ್ನು ಜಾರಿಗೊಳಿಸಲಾಯಿತು" ಎಂದು ಡಾ. ಎಚ್. ಎಸ್. ಮುದ್ದೇಗೌಡ ಹೇಳಿದರು.

"ಮುಸಲ್ಮಾನರ ಈ ಉಪಟಳ ಇಲ್ಲಿಗೇ ನಿಲ್ಲದೆ ಗಂಡ ಸತ್ತ ಚಂದದ ವಿಧವೆಯರತ್ತಲೂ ದೃಷ್ಠಿ ನೆಟ್ಟಿತ್ತು. ಅಂತಹ ವಿಧವಾ ಮಹಿಳೆಯರಿಗೂ ಮುಸಲ್ಮಾನ ಆಡಳಿತಗಾರರು ಕಿರುಕುಳ ನೀಡುತ್ತಿದ್ದರು. ಇದನ್ನು ಕಣ್ಣಾರೆ ಕಂಡ ಅಂದಿನ ಹಿಂದೂ ಹೆಣ್ಣು ಮಕ್ಕಳು ತನ್ನ ಗಂಡ ಸತ್ತ ನಂತರ ಆತನ ಚಿತೆಗೆ ಪ್ರವೇಶ ಮಾಡಿ ಸತಿಸಹಗಮನವಾಗುತ್ತಿದ್ದರು" ಎಂದು ವಿವರಿಸಿದರು.

ಒಂದಾಗಿ ಬದುಕು ಕಟ್ಟಿಕೊಂಡ ಹಿಂದೂಗಳು

ಒಂದಾಗಿ ಬದುಕು ಕಟ್ಟಿಕೊಂಡ ಹಿಂದೂಗಳು

"ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯನ್ನು ಬ್ರಿಟಿಷರು ನಿಷೇಧಿಸಿದರೆ, ಸತಿ ಸಹಗಮನ ಪದ್ಧತಿಯ ವಿರುದ್ಧ ರಾಜಾರಾಮ್ ಮೋಹನ್‌ರಾಯ್ ಹೋರಾಟ ನಡೆಸಿದರು. ಇವರ ಹೋರಾಟದ ಫಲವಾಗಿ ಸತಿಸಹಗಮನ ಪದ್ಧತಿ ನಿಲ್ಲುವಂತಾಯಿತು. ಆದರೆ ನಾವು ಇಂದು ಬ್ರಿಟಿಷರ ವಿರುದ್ಧ ಮಾತನಾಡುತ್ತೇವೆ, ಹಿಂದೂ ಹೆಣ್ಣು ಮಕ್ಕಳ ಶೋಷಣೆಗೆ ಕಾರಣರಾದ ಮೊಹಮದೀಯರ ಬಗ್ಗೆ ಚಕಾರ ಎತ್ತುವುದಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.

"ವಿಶ್ವದಲ್ಲೇ ಹಿಂದೂ ರಾಷ್ಟ್ರ ಎಂದಾದರೆ ಅದು ಭಾರತ ಮಾತ್ರ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅಖಂಡ ಭಾರತವನ್ನು ಇಬ್ಬಾಗ ಮಾಡಲಾಯಿತು. ಒಂದು ಮುಸ್ಲಿಂಮರ ರಾಷ್ಟ್ರ ಮತ್ತೊಂದು ಹಿಂದೂ ರಾಷ್ಟ್ರ ಮುಸ್ಲಿಂಮರ ರಾಷ್ಟ್ರದಲ್ಲಿ ಮುಸ್ಲಿಂಮರು ಮಾತ್ರ ಉಳಿದರು. ಆದರೆ ಹಿಂದೂ ರಾಷ್ಟ್ರದಲ್ಲಿ ಜಾತ್ಯಾತೀತ ತತ್ವದಡಿ ಹಿಂದೂಗಳು ಎಲ್ಲರನ್ನೂ ಸಹಿಷ್ಣತೆ ದೃಷ್ಠಿಯಿಂದ ಒಂದಾಗಿ ಬದುಕು ಕಟ್ಟಿಕೊಂಡರು. ಆದರೆ ಹಿಂದೂ ರಾಷ್ಟ್ರದಲ್ಲಿ ಇನ್ನೂ ಭಯೋತ್ಪಾದನೆ, ಉಗ್ರಗಾಮಿ ಚಟುವಟಿಕೆಗಳು ನಿಂತಿಲ್ಲ. ಇದಕ್ಕೆಲ್ಲಾ ಹಿಂದೂಗಳು ಕಾರಣರಲ್ಲ. ಬೇರೆ ಧರ್ಮಿಯರೇ ಕಾರಣ ಎಂಬ ಸತ್ಯ ತಿಳಿದಿದ್ದರೂ ನಮ್ಮನ್ನಾಳುವ ಸರ್ಕಾರಗಳು ಏನೂ ಮಾಡುತ್ತಿಲ್ಲ" ಎಂದು ಡಾ. ಎಚ್. ಎಸ್. ಮುದ್ದೇಗೌಡ ಬೇಸರ ವ್ಯಕ್ತಪಡಿಸಿದರು.

ಹಿಂದೂ ಧರ್ಮವನ್ನು ಹೆಚ್ಚು ಪ್ರವರ್ಧಮಾನಕ್ಕೆ ತಂದ ಶಿವಾಜಿ

ಹಿಂದೂ ಧರ್ಮವನ್ನು ಹೆಚ್ಚು ಪ್ರವರ್ಧಮಾನಕ್ಕೆ ತಂದ ಶಿವಾಜಿ

"ಭಾರತದ ಒಳಗೆ ಏನೆಲ್ಲಾ ಜಾತಿ, ಧರ್ಮಗಳಿದ್ದರೂ ಹಿಂದೂ ಧರ್ಮ ತೊಂದರೆ ಪಟ್ಟಂತೆ ಬೇರೆ ಯಾವುದೇ ಧರ್ಮ ತೊಂದರೆ ಪಟ್ಟಿಲ್ಲ. ಏಕೆಂದರೆ ನಾವು ಮಾನಸಿಕವಾಗಿ ಒಂದಾಗಿಲ್ಲ. ದಲಿತರನ್ನು ನಾವು ನಮ್ಮವರು ಎಂದು ಒಪ್ಪಿಕೊಳ್ಳುತ್ತಿಲ್ಲ. ಇದರಿಂದಾಗಿ ದೇಶದ ಸಾಂಘಿಕತೆ ಹೇಗೆ ಸಾಧ್ಯ. ಅವರಲ್ಲಿ ದಾರ್ಶಕನಿಕ ಇದ್ದರೆಂದರೆ ಗೌರವಿಸುವುದು ಅಗತ್ಯ. ನಮ್ಮ ಮಕ್ಕಳ ಮುಂದೆ ಇದನ್ನು ಭಿತ್ತಬೇಕು. ಅಂಬೇಡ್ಕರ್‌ ಅವರನ್ನು ವ್ಯವಸ್ಥಿತವಾಗಿ ಮುಗಿಸುವ ಪಿತೂರಿ ಈ ನಾಡಿನಲ್ಲಿ ನಡೆಯುತ್ತು ಎಂದರೆ ನಾಚಿಕೆಗೇಡಿನ ಸಂಗತಿ. ಮಕ್ಕಳಿಗೆ ಶಿವಾಜಿಯನ್ನು ಓದಿಸಬೇಕು. ಹಿಂದೂ ಧರ್ಮ ಸಂಕಷ್ಟದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಶಿವಾಜಿ ಹುಟ್ಟುತ್ತಾನೆ. ನಂತರದ ದಿನಗಳಲ್ಲಿ ಹಿಂದೂ ಧರ್ಮವನ್ನು ಹೆಚ್ಚು ಪ್ರವರ್ಧಮಾನಕ್ಕೆ ತರುತ್ತಾನೆ" ಎಂದು ಡಾ. ಎಚ್. ಎಸ್. ಮುದ್ದೇಗೌಡ ವಿವರಿಸಿದರು.

ಸಾಹಿತಿ ಡಾ. ಎಚ್. ಎಸ್. ಮುದ್ದೇಗೌಡ ಸಲಹೆ

ಸಾಹಿತಿ ಡಾ. ಎಚ್. ಎಸ್. ಮುದ್ದೇಗೌಡ ಸಲಹೆ

"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ತಿಲಕರು ಗಣಪತಿ ಉತ್ಸವವನ್ನು ಆರಂಭಿಸಿದರು ಮುಂಬೈನಲ್ಲಿ ಈಗಲೂ ಇದು ನಡೆಯುತ್ತಿದೆ. ಮರಾಠ ಸಮುದಾಯದ ಜನತೆ ಹಿಂದೂ ಸಮುದಾಯದ ಅವಿಭಾಜ್ಯ ಅಂಗ. ರಾಷ್ಟ್ರ ನಾಯಕರ, ಸಮಾಜ ಸುಧಾಕರಕ, ಸಂತರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಿಳಿದು ಗೌರವ ಸಮರ್ಪಿಸುವುದು ಅಗತ್ಯ. ಮಕ್ಕಳಲ್ಲಿ ದೇಶ ಪ್ರೇಮ ಭಿತ್ತಬೇಕು" ಎಂದು ಡಾ. ಎಚ್. ಎಸ್. ಮುದ್ದೇಗೌಡ ಸಲಹೆ ನೀಡಿದರು.

ಗೋಸಾಯಿ ಮಹಾಸಂಸ್ಥಾನದ ಶ್ರೀ ಮಂಜುನಾಥ್ ಭಾರತಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕೆಕೆಎಂಪಿ ರಾಜ್ಯಾಧ್ಯಕ್ಷ ಎಸ್. ಸುರೇಶ್‌ರಾವ್ ಸಾಠೆ, ಮಾಜಿ ಎಂ.ಜಿ. ಮೂಳೆ, ಕೆಕೆಎಂಪಿ ಖಜಾಂಚಿ ಟಿ.ಆರ್. ವೆಂಕಟರಾವ್ ಚವ್ಹಾಣ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

English summary
Kannada literature Dr. H. S. Muddegowda said that britishers responsible for all our evil practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X