ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು: ವಿಜಯೇಂದ್ರ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜೂನ್ 7 : ಜೆಡಿಎಸ್‌ನ ಭದ್ರಕೋಟೆಯಲ್ಲೇ ಕಮಲ ಅರಳಿಸಿ ದಾಖಲೆ ಮಾಡಿದಂತೆ ಮುಂದಿನ ಚುನಾವಣೆಯಲ್ಲಿ ಕೂಡ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ಹೊಟೇಲ್ ಅಮರಾವತಿ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಒಂದು ಕಾಲದಲ್ಲಿ ಮಂಡ್ಯದಲ್ಲಿ ಬಿಜೆಪಿ ಬರುವುದು ಸಾಧ್ಯವೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ನಮ್ಮೆಲ್ಲಾ ಕಾರ್ಯಕರ್ತರ ಶ್ರಮದಿಂದಾಗಿ ಮೊದಲ ಬಾರಿಗೆ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ನಾರಾಯಣಗೌಡರು ಗೆದ್ದು ಶಾಸಕರಾಗಿ, ಈಗ ಮಂತ್ರಿಯಾಗಿದ್ದಾರೆ ಎಂದರು.

ನಾನು ಎಲ್ಲಿ ನಿಲ್ಲಬೇಕು ಎಂದು ಪಕ್ಷ ತೀರ್ಮಾನಿಸಲಿದೆ: ಬಿ.ವೈ. ವಿಜಯೇಂದ್ರನಾನು ಎಲ್ಲಿ ನಿಲ್ಲಬೇಕು ಎಂದು ಪಕ್ಷ ತೀರ್ಮಾನಿಸಲಿದೆ: ಬಿ.ವೈ. ವಿಜಯೇಂದ್ರ

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಹೇಗೆಲ್ಲಾ ಆಡಳಿತ ನಡೆಸಿದ್ದರು. ಆದರೆ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಂಧರ್ಭದಲ್ಲಿ ನಾರಾಯಣಗೌಡರು ತೋರಿದ ಸಾಧನೆ ಮಹತ್ತರವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಡಿಯೂರಪ್ಪನವರ ಕೊರಗು ನೀಗಿದೆ

ಯಡಿಯೂರಪ್ಪನವರ ಕೊರಗು ನೀಗಿದೆ

ಈ ಜಿಲ್ಲೆಯ ಮಣ್ಣಿನ ಮಗ ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಪ್ರತೀ ಬಾರಿ ಮುಖ್ಯಮಂತ್ರಿಯಾದಾಗಲೂ ತವರಿನಲ್ಲಿ ಕಮಲ ಅರಳಲಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಕಳೆದ ಉಪ ಚುನಾವಣೆಯಲ್ಲಿ ಅದನ್ನು ನಿವಾರಿಸಿದ ಜನತೆ ಬಿಜೆಪಿ ಪರವಾಗಿದ್ದೇವೆ ಎಂಬುದನ್ನು ಸಾಭೀತುಪಡಿಸಿ ಯಡಿಯೂರಪ್ಪನವರ ಕೈ ಹಿಡಿದಿದ್ದರು. ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಸ್ವತಃ ನಾರಾಯಣಗೌಡರಿಗೆ ಗೆಲುವಿನ ವಿಶ್ವಾಸ ಇತ್ತಾದರೂ, ನಿರೀಕ್ಷೆ ಇರಲಿಲ್ಲ. ಅಲ್ಲಿ ಗೆಲ್ಲುವುದು ಸುಲಭವಾಗಿರಲಿಲ್ಲ . ಆದರೂ ಸಹ ಕಾರ್ಯಕರ್ತರ ಪರಿಶ್ರಮದಿಂದಾಗಿ ನಾವು ಗೆಲುವು ಸಾಸಿದೆವು. ವಿಪಕ್ಷಗಳು ಬಿಜೆಪಿ ಆಮೆ ಇದ್ದಂತೆ ಅದು ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಮಲಗಿದ್ದವು. ಆದರೆ ನಾವು ಅವರನ್ನು ಮಲಗಿಸಿ ಗುರಿ ಮುಟ್ಟಿದ್ದೆವು ಎಂದು

ಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪ

ನನಗೆ ಸ್ಥಾನಮಾನ ಸಿಕ್ಕಿಲ್ಲ ಎಂಬುದು ತಪ್ಪು ಕಲ್ಪನೆ

ನನಗೆ ಸ್ಥಾನಮಾನ ಸಿಕ್ಕಿಲ್ಲ ಎಂಬುದು ತಪ್ಪು ಕಲ್ಪನೆ

ಬಿಜೆಪಿಯಲ್ಲಿ ನನಗೆ ಯಾವುದೇ ಸ್ಥಾನಮಾನಗಳನ್ನೂ ನೀಡದೆ ಕಡೆಗಣಿಸಲಾಗಿದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ನಾನು ಈಗಾಗಲೇ ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವಿಧಾನ ಸಭಾ ಚುನಾವಣೆ ವೇಳೆ ನನ್ನ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಪಕ್ಷ ಸಂಘಟನೆ ಜೊತೆಗೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಿಸಲು ಹೋರಾಟ ನಡೆಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಬಿಜೆಪಿ ಅಧಿಪತ್ಯ

ಮಂಡ್ಯದಲ್ಲಿ ಬಿಜೆಪಿ ಅಧಿಪತ್ಯ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸಿ. ನಾರಾಯಣಗೌಡರ ಗೆಲುವು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗಲಿದೆ. ಜೊತೆಗೆ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಧಿಪತ್ಯ ಸ್ಥಾಪಿಸುವ ಗುರಿಯೊಂದಿಗೆ ಪಕ್ಷ ಸಂಘಟನೆ ಉದ್ದೇಶ ಹೊಂದಿದ್ದೇನೆ. ಇದಕ್ಕೆಲ್ಲಾ ಕಾರ್ಯಕರ್ತರ ಪರಿಶ್ರಮವೂ ಪ್ರಮುಖವಾಗಲಿದೆ ಎಂದು ತಿಳಿಸಿದರು.

ಮೂರು ಅಭ್ಯರ್ಥಿಗಳಿಗೆ ಗೆಲುವು

ಮೂರು ಅಭ್ಯರ್ಥಿಗಳಿಗೆ ಗೆಲುವು

ರಾಜ್ಯ ಸಭಾ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿ ಲೆಹರ್‌ಸಿಂಗ್ ಖಂಡಿತ ಗೆಲುವು ಸಾಧಿಸಲಿದ್ದಾರೆ. ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್‌ಗೆ ಗೆಲುವು ಸುಲಭವಾಗಿದೆ. ಉಳಿದಂತೆ ಮತಗಳ ಲೆಕ್ಕಾಚಾರದ ಪ್ರಕಾರ ಮೂರನೇ ಅಭ್ಯರ್ಥಿ ಬಿಜೆಪಿಯ ಲೆಹರ್‌ಸಿಂಗ್ ಗೆಲ್ಲುವ ಸಾಧ್ಯತೆ ಬಹಳವಾಗಿದೆ ಎಂದರು.

(ಒನ್ಇಂಡಿಯಾ ಸುದ್ದಿ)

English summary
last year BJP has won first time win K R Pete, next time we will win more seats in Mandya District, says BJP state vice president B Y Vijayendra in election campaign at Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X