ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾರನ್ನು ಬಿಜೆಪಿಗೆ ಸೆಳೆಯಲು ಅಮಿತ್ ಶಾ ಮಾಸ್ಟರ್ ಪ್ಲಾನ್

|
Google Oneindia Kannada News

Recommended Video

Lok Sabha Elections 2019 : ಸುಮಲತಾರನ್ನು ಬಿಜೆಪಿಗೆ ಸೆಳೆಯಲು ಅಮಿತ್ ಶಾ ಮಾಸ್ಟರ್ ಪ್ಲಾನ್

ಮಂಡ್ಯ, ಮಾರ್ಚ್‌ 02: ಮಂಡ್ಯ ರಾಜಕೀಯ ಸದಾ ಕಳೆಕಟ್ಟಿಯೇ ಇರುತ್ತದೆ. ಲೋಕಸಭೆ ಚುನಾವಣೆ ಆಗಲಿ, ವಿಧಾನಸಭೆ ಚುನಾವಣೆ ಆಗಲಿ ಮಂಡ್ಯ ರಾಜಕೀಯ ಸದಾ ಚುರುಕು. ಈ ಬಾರಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿರುವುದರಿಂದ ಸ್ವಲ್ಪ ಹೆಚ್ಚಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಗಮನ ಸೆಳೆಯುತ್ತಿದೆ.

ಸುಮಲತಾ ಅಂಬರೀಶ್ ಅವರು ಈಗಾಗಲೇ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರು ಅದಕ್ಕೆ ಪೂರಕವಾದ ಭರವಸೆಗಳನ್ನೇನೂ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಬದಲಿಗೆ ಸುಮಲತಾ ಅವರನ್ನು ಮನವೊಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ನಾನು ಚುನಾವಣೆ ಎದುರಿಸುವುದು ಮಂಡ್ಯದಿಂದ ಮಾತ್ರ: ಸುಮಲತಾ ನಾನು ಚುನಾವಣೆ ಎದುರಿಸುವುದು ಮಂಡ್ಯದಿಂದ ಮಾತ್ರ: ಸುಮಲತಾ

ಆದರೆ ಸುಮಲತಾ ಅವರು ಮಂಡ್ಯದಿಂದ ಪಕ್ಷೇತರವಾಗಿಯಾದರೂ ಕಣಕ್ಕಿಳಿಯಲು ತಯಾರಾಗಿರುವುದಾಗಿ ಹೇಳಿದ್ದಾರೆ. ಈ ಸಂದಿಗ್ಧ ಸ್ಥಿತಿಯನ್ನು ಬಿಜೆಪಿಯು ತನ್ನ ಲಾಭಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಿದೆ.

ಇತ್ತೀಚೆಗಷ್ಟೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರು ಮಂಡ್ಯ ರಾಜಕೀಯದ ಬಗ್ಗೆಯೂ ವರದಿ ಪಡೆದುಕೊಂಡಿದ್ದರು, ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಾಥಮಿಕ ಮಾತುಕತೆ ಸಹ ನಡೆದಿದೆ. ಆದರೆ ಸುಮಲತಾ ಅವರು ಧನಾತ್ಮಕ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಮೂಲಗಳುಹೇಳಿವೆ.

ಎಸ್‌.ಎಂ.ಕೃಷ್ಣ ಹೆಗಲಿಗೆ ಜವಾಬ್ದಾರಿ

ಎಸ್‌.ಎಂ.ಕೃಷ್ಣ ಹೆಗಲಿಗೆ ಜವಾಬ್ದಾರಿ

ಆದರೆ ಸುಮಲತಾ ಅವರನ್ನು ಬಿಜೆಪಿಗೆ ಕರೆತರುವ ಜವಾಬ್ದಾರಿಯನ್ನು ಮಂಡ್ಯದ ಹಿರಿಯ ರಾಜಕಾರಣಿ, ಪ್ರಸ್ತುತ ಬಿಜೆಪಿಯಲ್ಲಿರುವ ಎಸ್‌.ಎಂ.ಕೃಷ್ಣ ಅವರಿಗೆ ವಹಿಸಲಾಗಿದೆ. ಕೃಷ್ಣಾ ಅವರು ಸುಮಲತಾ ಅವರೊಟ್ಟಿಗೆ ಮಾತನಾಡಿ ಅವರನ್ನು ಬಿಜೆಪಿ ಕರೆತರುವ ಯತ್ನವನ್ನು ಮುಂದುವರೆಸಲಿದ್ದಾರೆ.

ಅಂಬರೀಶ್‌ ಅವರಿಗೆ ಆಪ್ತರಾಗಿದ್ದ ಎಂ.ಎಂ.ಕೃಷ್ಣ

ಅಂಬರೀಶ್‌ ಅವರಿಗೆ ಆಪ್ತರಾಗಿದ್ದ ಎಂ.ಎಂ.ಕೃಷ್ಣ

ಕೃಷ್ಣ ಅವರು ಅಂಬರೀಶ್‌ ಅವರ ರಾಜಕೀಯ ಗುರುವೂ ಆಗಿದ್ದವರು, ಅಂಬರೀಶ್ ಅವರ ಕುಟುಂಬಕ್ಕೆ ಆಪ್ತರು ಸಹ ಜೊತೆಗೆ ಸುಮಲತಾ ಅವರಿಗೂ ಸಹ ಚಿರಪರಿಚಿತರು ಮತ್ತು ಮೂಲವಾಗಿ ಮಂಡ್ಯದ ಹಿರಿಯ ರಾಜಕಾರಣಿ. ಇದೇ ಕಾರಣಕ್ಕೆ ಅಮಿತ್ ಶಾ ಅವರು ಕೃಷ್ಣ ಅವರನ್ನು ಈ ಕೆಲಸಕ್ಕೆ ಆಯ್ಕೆ ಮಾಡಿದ್ದಾರೆ.

ಮಂಡ್ಯ: ಕಾಂಗ್ರೆಸ್ ನಿರ್ಧಾರದಿಂದ ಸುಮಲತಾ ಅಂಬರೀಶ್ ಗೆ ಭ್ರಮನಿರಸನ?ಮಂಡ್ಯ: ಕಾಂಗ್ರೆಸ್ ನಿರ್ಧಾರದಿಂದ ಸುಮಲತಾ ಅಂಬರೀಶ್ ಗೆ ಭ್ರಮನಿರಸನ?

ಪಕ್ಷೇತರವಾಗಿ ಸ್ಪರ್ಧಿಸಿದರೆ ಗೆಲುವು ಸುಲಭವಿಲ್ಲ

ಪಕ್ಷೇತರವಾಗಿ ಸ್ಪರ್ಧಿಸಿದರೆ ಗೆಲುವು ಸುಲಭವಿಲ್ಲ

ಮೈತ್ರಿ ಸೂತ್ರದ ಪ್ರಕಾರ ಮಂಡ್ಯಕ್ಕೆ ಕಾಂಗ್ರೆಸ್‌ ಟಿಕೆಟ್ ಸಿಗುವುದು ಕಷ್ಟವಾಗಿದೆ. ಕಾಂಗ್ರೆಸ್‌ ಪಕ್ಷದ ಹೊರತಾಗಿ ಪಕ್ಷೇತರವಾಗಿ ಸ್ಪರ್ಧಿಸಿದರೆ ಸುಮಲತಾ ಅವರಿಗೆ ಬೆಂಬಲದ ಕಡಿಮೆ ಆಗುವ ಸಾಧ್ಯತೆ ಇದೆ. ಅದರಲ್ಲಿಯೂ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿದರೆ ಸುಮಲತಾ ಅವರಿಗೆ ಹೆಚ್ಚು ಕಷ್ಟವಾಗಬಹುದು.

ಮಂಡ್ಯದಲ್ಲಿ ತಲೆ ಎತ್ತಲು ಬಿಜೆಪಿ ತಂತ್ರ

ಮಂಡ್ಯದಲ್ಲಿ ತಲೆ ಎತ್ತಲು ಬಿಜೆಪಿ ತಂತ್ರ

ಮಂಡ್ಯದಲ್ಲಿ ಬಿಜೆಪಿಗೆ ಅಸ್ಥಿತ್ವವೇ ಇಲ್ಲದಂತಾಗಿದೆ. ಸುಮಲತಾ ಅಂಬರೀಶ್‌ ಪರವಾಗಿ ಎದ್ದಿರುವ ಅಲೆಯನ್ನೇ ಬಂಡವಾಳ ಮಾಡಿಕೊಂಡು ಜಿಲ್ಲೆಯಲ್ಲಿ ಅಸ್ಥಿತ್ವಕಂಡುಕೊಳ್ಳುವ ಆಸೆಯಿಂದಾಗಿ ಬಿಜೆಪಿಯು ಸುಮಲತಾ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ.

ಸುಮಲತಾ ಅಂಬರೀಶ್‌ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಬೆಂಬಲ? ಸುಮಲತಾ ಅಂಬರೀಶ್‌ ಪಕ್ಷೇತರವಾಗಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಬೆಂಬಲ?

ಪಕ್ಷೇತರವಾಗಿ ಸ್ಪರ್ಧಿಸಿದರೂ ಬಿಜೆಪಿ ಬೆಂಬಲ

ಪಕ್ಷೇತರವಾಗಿ ಸ್ಪರ್ಧಿಸಿದರೂ ಬಿಜೆಪಿ ಬೆಂಬಲ

ಜೆಡಿಎಸ್‌ಗೆ ಮುಖಭಂಗ ಮಾಡಲು ನಿರ್ಧರಿಸಿರುವ ಬಿಜೆಪಿಯು ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೂ ಸಹ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಕೆಲ ನಾಯಕರು ಸುಮಲತಾ ಅವರ ಪರ ಇದ್ದು ಅವರೂ ತೆರೆಯ ಹಿಂದೆ ಸುಮಲತಾ ಅವರಿಗೆ ಬೆಂಬಲ ನೀಡುವವರಿದ್ದಾರೆ.

ಸುಮಲತಾರನ್ನು ಕೆಣಕಲು ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕರೆತಂದ ಜೆಡಿಎಸ್! ಸುಮಲತಾರನ್ನು ಕೆಣಕಲು ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕರೆತಂದ ಜೆಡಿಎಸ್!

English summary
Karnataka BJP trying to pull Sumalatha Ambareesh to BJP. Mandya lok sabha constituency is going out of congress hand, Sumalatha asking ticket from congress but it not going to possible so BJP trying to pull her in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X