ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ನಲ್ಲಿ ಸೋತ ಅಭ್ಯರ್ಥಿಗಳಿಗೆ ಬಿಜೆಪಿ ಗಾಳ, ಏನಿದು ಹೊಸ ತಂತ್ರ

|
Google Oneindia Kannada News

Recommended Video

ಸಿ ಪಿ ಯೋಗೇಶ್ವರ್ ಹೆಗಲಿಗೆ ಬಿಜೆಪಿಯ ಆಪರೇಷನ್ ಕಮಲದ ಜವಾಬ್ದಾರಿ | Oneindia Kannada

ಬೆಂಗಳೂರು, ಅಕ್ಟೋಬರ್ 09: ಸರ್ಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆಯಲು ಯತ್ನಿಸಿ ಆ ನಂತರ ಸುಮ್ಮನಾಗಿದ್ದ ಬಿಜೆಪಿ ಈಗ ಹೊಸ ತಂತ್ರಕ್ಕೆ ಮೊರೆ ಹೋಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಗಳನ್ನು ಆರಂಭಿಸಿದೆ.

'ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ''ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ'

ಕಳೆದ ಚುನಾವಣೆಯಲ್ಲಿ ಮಂಡ್ಯದ ನಾಗಮಂಗಲದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ ಹಾಗೂ ಮತ್ತೊಬ್ಬ ಸೋತ ಅಭ್ಯರ್ಥಿ ಬಾಲಕೃಷ್ಣ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದೆ.

ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆರ್.ಅಶೋಕ್‌ ಅವರು ನಿರಾಕರಿಸಿದ ಬೆನ್ನಲ್ಲೇ ಈ ಯತ್ನಗಳು ಆರಂಭವಾಗಿರುವುದು ಕುತೂಹಲ ಕೆರಳಿಸಿದೆ. ಅಲ್ಲದೆ ಸೋತ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೆಳೆಯುವ ಯತ್ನ ಮಾಡುತ್ತಿರುವುದೇಕೆ ಅದರಿಂದ ಬಿಜೆಪಿಗಾಗುವ ಲಾಭವೇನು ಎಂಬ ಅನುಮಾನ ಸಹ ಮೂಡಿದೆ.

ಚೆಲುವರಾಯಸ್ವಾಮಿಗೆ ಟಿಕೆಟ್ ಭರವಸೆ

ಚೆಲುವರಾಯಸ್ವಾಮಿಗೆ ಟಿಕೆಟ್ ಭರವಸೆ

ಲೋಕಸಭೆ ಉಪಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ಸಹ ನೀಡುವುದಾಗಿ ಚೆಲುವರಾಯಸ್ವಾಮಿ ಅವರಿಗೆ ಬಿಜೆಪಿ ಹೇಳಿದ್ದು. ಈ ಬಗ್ಗೆ ಯೋಚಿಸಿ ನಿರ್ಧರಿಸುವುದಾಗಿ ಚೆಲುವರಾಯಸ್ವಾಮಿ ಅವರು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಚೆಲುವರಾಯಸ್ವಾಮಿ ಅವರ ವಿಳಂಬ ನೀತಿ ಬಿಜೆಪಿಗೆ ಸರಿ ಬಂದಿಲ್ಲ.

ಯೋಗೇಶ್ವರ್‌ಗೆ ಜವಾಬ್ದಾರಿ

ಯೋಗೇಶ್ವರ್‌ಗೆ ಜವಾಬ್ದಾರಿ

ಬಾಲಕೃಷ್ಣ ಅವರಿಗೂ ಬಿಜೆಪಿ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿದ್ದು. ಈ ಇಬ್ಬರೂ ಮಾಜಿ ಶಾಸಕರನ್ನು ಬಿಜೆಪಿಗೆ ಕರೆತರುವ ಜವಾಬ್ದಾರಿಯನ್ನು ಬಿಜೆಪಿಯ ಯೋಗೀಶ್ವರ್‌ಗೆ ವಹಿಸಲಾಗಿದ್ದು. ಈ ಇಬ್ಬರು ಶಾಸಕರನ್ನಷ್ಟೆ ಅಲ್ಲದೆ ಇನ್ನೂ ಕೆಲವು ಪ್ರಮುಖ ಮುಖಂಡರನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಯುತ್ತಿದೆ.

ಉಪಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಆರ್.ಅಶೋಕ್ ಸ್ಪಷ್ಟ ನಕಾರ, ಕಾರಣ ಏನು?ಉಪಚುನಾವಣೆ: ಮಂಡ್ಯದಿಂದ ಸ್ಪರ್ಧಿಸಲು ಆರ್.ಅಶೋಕ್ ಸ್ಪಷ್ಟ ನಕಾರ, ಕಾರಣ ಏನು?

ಮಾಜಿಗಳನ್ನು ಸೆಳೆಯುವ ಯತ್ನವೇಕೆ

ಮಾಜಿಗಳನ್ನು ಸೆಳೆಯುವ ಯತ್ನವೇಕೆ

ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿಗೆ ಪ್ರಭಾವಿ ಒಕ್ಕಲಿಗ ನಾಯಕರ ಅವಶ್ಯಕತೆ ಇದೆ. ಯೋಗೀಶ್ವರ್ ಅವರು ರಾಮನಗರ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಬಿಜೆಪಿಯ ಒಕ್ಕಲಿಗ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಹಾಗಾಗಿಯೇ ಬಿಜೆಪಿಯು ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಯತ್ನಿಸುತ್ತಿದೆ.

ಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿಲೋಕಸಭೆ ಉಪಚುನಾವಣೆ ರದ್ದು ಗೊಳಿಸಲು ಹೈಕೋರ್ಟ್‌ಗೆ ಅರ್ಜಿ

ಹೀನಾಯವಾಗಿ ಸೋತಿರುವ ಅಭ್ಯರ್ಥಿಗಳು

ಹೀನಾಯವಾಗಿ ಸೋತಿರುವ ಅಭ್ಯರ್ಥಿಗಳು

ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದ ಎನ್.ಚೆಲುವರಾಯಸ್ವಾಮಿ ಹಾಗೂ ಎಚ್‌ಸಿ ಬಾಲಕೃಷ್ಣ ಇಬ್ಬರೂ ಸಹ ಹೀನಾಯವಾಗಿ ಸೋತಿದ್ದಾರೆ. ಸಮ್ಮಿಶ್ರ ಸರ್ಕಾರ ಸಹ ಅಸ್ಥಿತ್ವಕ್ಕೆ ಬಂದ ಕಾರಣ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಇದು ಸೂಕ್ತ ಸಮಯವೆಂದು ಬಿಜೆಪಿ ಈಗ ದಾಳ ಉರುಳಿಸುತ್ತಿದೆ. ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಸೋತಿದ್ದರೆ, ಮಾಗಡಿಯಲ್ಲಿ ಬಾಲಕೃಷ್ಣ ಸೋತಿದ್ದಾರೆ.

ಪಕ್ಷಾಂತರ ತಡೆಯಲಿದ್ದಾರೆ ಜಮೀರ್‌

ಪಕ್ಷಾಂತರ ತಡೆಯಲಿದ್ದಾರೆ ಜಮೀರ್‌

ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರನ್ನು ಕಾಂಗ್ರೆಸ್‌ಗೆ ಕರೆತಂದ ಜಮೀರ್ ಅಹ್ಮದ್‌ ಅವರು ಇಬ್ಬರು ಮಾಜಿ ಶಾಸಕರು ಬಿಜೆಪಿ ಸೇರದಂತೆ ತಡೆಯುತ್ತೇನೆ ಎಂದು ಈಗಾಗಲೇ ಹೇಳಿದ್ದು, ಇಂದು ಅಥವಾ ನಾಳೆ ಇಬ್ಬರನ್ನೂ ಜಮೀರ್‌ ಅವರು ಭೇಟಿ ಆಗಲಿದ್ದಾರೆ.

ರಾಮನಗರ ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಘೋಷಣೆರಾಮನಗರ ಉಪ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಘೋಷಣೆ

English summary
BJP trying to attract former MLAs Cheluvarayaswamy and HC Balakrishna to their party. BJP searching for Okkaliga leader in Mandya and Bengaluru rural districts so they were trying attract Okkaliga leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X