ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್-ಬಿಜೆಪಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಎಚ್‌.ಡಿ.ರೇವಣ್ಣ

|
Google Oneindia Kannada News

ಮಂಡ್ಯ, ನವೆಂಬರ್ 22: ಕಾಂಗ್ರೆಸ್-ಬಿಜೆಪಿ ಒಂದಾಗಿಬಿಟ್ಟಿದೆ, ಕಾಂಗ್ರೆಸ್‌ ನವರು ಹೇಳಿದ ಕಡತಗಳಿಗೇ ಬಿಜೆಪಿ ಸರ್ಕಾರ ಸಹಿ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪ ಮಾಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಕಾಂಗ್ರೆಸ್-ಬಿಜೆಪಿ ಸೇರಿಕೊಂಡು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಯನ್ನು ಸೋಲಿಸಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು ಎಂದು ಆರೋಪಿಸಿದರು.

ವಿಜಯನಗರದಲ್ಲಿ ಬಿಜೆಪಿಗೆ ತಲೆನೋವಾದ ರೆಬೆಲ್ ಕವಿರಾಜ ವಿಜಯನಗರದಲ್ಲಿ ಬಿಜೆಪಿಗೆ ತಲೆನೋವಾದ ರೆಬೆಲ್ ಕವಿರಾಜ

ಕಾಂಗ್ರೆಸ್ ಹಾಗೂ ಬಿಜೆಪಿಯವರು ಒಳ ಒಪ್ಪಂದ ಮಾಡಿಕೊಂಡು ಒಂದಾಗಿಬಿಟ್ಟಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ತುಮಕೂರು. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ನವರು ಹೇಳಿದಂತೆ ಬಿಜೆಪಿಯವರು ಕೇಳುತ್ತಾರೆ ಎಂದು ರೇವಣ್ಣ ಹೇಳಿದರು.

BJP-Congress Are One: HD Revanna

'ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು (ಜೆಡಿಎಸ್) ಅನ್ನು ಬಿಜೆಪಿಯ ಬಿ ಟೀಮ್ ಎಂದು ರಾಹುಲ್ ಗಾಂಧಿ ಹೇಳಿದರು. ಆದರೆ ಕೊನೆಗೆ ಬಿ ಟೀಮ್ ಅನ್ನೇ ಬಂದು ತಬ್ಬಿಕೊಂಡು ಮೈತ್ರಿ ಮಾಡಿಕೊಂಡರು' ಎಂದು ರೇವಣ್ಣ ಹೇಳಿದರು.

ಉಪ ಚುನಾವಣೆ; ಅಪ್ಪ ಜೆಡಿಎಸ್‌ ಅಭ್ಯರ್ಥಿ, ಮಗ ಪಕ್ಷೇತರ! ಉಪ ಚುನಾವಣೆ; ಅಪ್ಪ ಜೆಡಿಎಸ್‌ ಅಭ್ಯರ್ಥಿ, ಮಗ ಪಕ್ಷೇತರ!

ಎ ಟೀಂ ಬಿಜೆಪಿ ಸಹ ನಮ್ಮ ಜೊತೆ ಮೈತ್ರಿಗೆ ಮುಂದೆ ಬಂದಿತ್ತು. ಐದು ವರ್ಷ ಅಧಿಕಾರ ಬಿಟ್ಟುಕೊಡಲು ಸಿದ್ಧವಿತ್ತು ಎಂದು ರೇವಣ್ಣ ಹೇಳಿದರು. ಈಗ ಮತ್ತೆ ಮೈತ್ರಿಯ ಬಗ್ಗೆ ಮಾತನಾಡಿದ ರೇವಣ್ಣ, 'ಕಾಂಗ್ರೆಸ್‌ ನವರೇ ಬೇಡ ಎಂದ ಮೇಲೆ ನಾವು ಏಕೆ ಅವರ ಬಳಿ ಹೋಗೋಣ?' ಎಂದು ಪ್ರಶ್ನೆ ಮಾಡಿದರು.

ಜೆಡಿಎಸ್‌ ಗೆ ಎರಡೂ ರಾಷ್ಟ್ರೀಯ ಪಕ್ಷಗಳ ಸಹವಾಸವೇ ಬೇಡ ಎಂದ ರೇವಣ್ಣ, ಬಿಜೆಪಿ ಮತ್ತು ಕಾಂಗ್ರೆಸ್ ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದಾರೊ ಗೊತ್ತಿಲ್ಲ ಎಂದು ಹೇಳಿದರು.

English summary
JDS former minister HD Revanna said congress and BJP are different parties but one in ideology. Nikhil Kumaraswamy and Deve Gowda loose election because of BJP-Congress back stage coalition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X