ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಆದರೆ ನೆಪಕ್ಕಷ್ಟೆ

|
Google Oneindia Kannada News

Recommended Video

Lok Sabha Elections 2019 : ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸುಮ್ಮನೆ ನೆಪಕ್ಕಷ್ಟೇ

ಮಂಡ್ಯ, ಮಾರ್ಚ್ 22: ಭಾರಿ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.

ಆದರೆ ಈ ಮಧ್ಯೆ ಬಿಜೆಪಿಯ ಅಭ್ಯರ್ಥಿಯೊಬ್ಬರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇದು ಕೇವಲ ನೆಪಕ್ಕಷ್ಟೆ ಎಂದು ಹೇಳಲಾಗಿದೆ.

BJP candidate files nomination in Mandya, but for safety sake

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ವಿಧಾನಪರಿಷತ್‌ ಮಾಜಿ ಸದಸ್ಯ ಬಿಜೆಪಿಯ ಅಶ್ವಥ್‌ನಾರಾಯಣ್ ಅವರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಹಿರಿಯ ನಾಯಕರ ಆದೇಶದ ಮೇರೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇವರೇ ಅಂತಿಮ ಅಭ್ಯರ್ಥಿ ಎನ್ನುವಂತಿಲ್ಲ.

ಮಂಡ್ಯದಲ್ಲಿ ಹೆಣ್ಣು ಸಿಕ್ಕರೆ ಮದುವೆಯಾಗಲು ರೆಡಿ ಎಂದ ನಿಖಿಲ್ಮಂಡ್ಯದಲ್ಲಿ ಹೆಣ್ಣು ಸಿಕ್ಕರೆ ಮದುವೆಯಾಗಲು ರೆಡಿ ಎಂದ ನಿಖಿಲ್

ಮಂಡ್ಯದಲ್ಲಿ ಬಿಜೆಪಿಯು ಸುಮಲತಾ ಅವರಿಗೆ ಬೆಂಬಲ ನೀಡುವುದು ಬಹುತೇಕ ಖಾಯಂ ಎನ್ನಲಾಗುತ್ತಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿಯಷ್ಟೆ ಅಶ್ವಥ್‌ನಾರಾಯಣ್ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ.

ಉಪಚುನಾವಣೆಯ ಕಹಿ ನೆನಪು ಅಳಿಸಿಲ್ಲ

ಉಪಚುನಾವಣೆಯ ಕಹಿ ನೆನಪು ಅಳಿಸಿಲ್ಲ

ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಮತದಾನ ಹತ್ತಿರ ಬಂದಾಗ ರಾಮನಗರ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಚಂದ್ರಶೇಖರ್ ಚುನಾವಣಾ ಕಣ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆ ಆಗಿಬಿಟ್ಟಿದ್ದರು. ಮತ್ತೆ ಹಾಗಾಗದಂತೆ ಬಿಜೆಪಿಯು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಪಕ್ಷದವರಿಂದ ನಾಮಪತ್ರವೊಂದನ್ನು ಹಾಕಿಸಿದ್ದಾರೆ.

ಅಂತಿಮ ಕ್ಷಣದಲ್ಲಿ ಏನಾದರೂ ಆಗಬಹುದು

ಅಂತಿಮ ಕ್ಷಣದಲ್ಲಿ ಏನಾದರೂ ಆಗಬಹುದು

ಅಂತಿಮ ಕ್ಷಣದಲ್ಲಿ ಒತ್ತಡಕ್ಕೆ ಒಳಗಾಗಿ ಸುಮಲತಾ ಅಂಬರೀಶ್ ಅವರೇನಾದರೂ ಚುನಾವಣಾ ಕಣದಿಂದ ಹಿಂದೆ ಸರಿದರೆ ಬಿಜೆಪಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಅಶ್ವಥ್‌ನಾರಾಯಣ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯ ಗೆಲ್ಲಿಸಿಯೇ ಸಿದ್ಧ: ಡಿಕೆ.ಶಿವಕುಮಾರ್ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯ ಗೆಲ್ಲಿಸಿಯೇ ಸಿದ್ಧ: ಡಿಕೆ.ಶಿವಕುಮಾರ್

ಕೊನೆ ದಿನ ನಾಮಪತ್ರ ವಾಪಸ್

ಕೊನೆ ದಿನ ನಾಮಪತ್ರ ವಾಪಸ್

ಅಶ್ವಥ್‌ ನಾರಾಯಣ್ ಅವರು ನಾಮಪತ್ರ ವಾಪಸ್ ಪಡೆಯುವ ದಿನದಂದು ಕೊನೆಯ ಗಳಿಗೆಯಲ್ಲಿ ತಮ್ಮ ನಾಮಪತ್ರ ವಾಪಸ್ ಪಡೆದು ಕೊಳ್ಳುತ್ತಾರೆ ಎನ್ನಲಾಗಿದೆ. ಇಂದು ಅಥವಾ ನಾಳೆ ಬಿಜೆಪಿಯು ಸುಮಲತಾ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಲಿದೆ.

ಬಿಜೆಪಿ ಬೆಂಬಲಿಸಿದರೆ ಎಚ್‌ಡಿಕೆಗೆ ಆತಂಕ

ಬಿಜೆಪಿ ಬೆಂಬಲಿಸಿದರೆ ಎಚ್‌ಡಿಕೆಗೆ ಆತಂಕ

ಮಂಡ್ಯದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಮಧ್ಯೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯು ಸುಮಲತಾ ಅವರಿಗೆ ಬೆಂಬಲ ಘೋಷಿಸಿದಲ್ಲಿ ಕುಮಾರಸ್ವಾಮಿ ಅವರ ಆತಂಕ ಹೆಚ್ಚಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಸಿತ್ತು. ಹಾಗಾಗಿ ಮಂಡ್ಯದಲ್ಲಿ ಬಿಜೆಪಿ ಮತಗಳು ಬಹಳ ಮುಖ್ಯ ಎನಿಸಿಕೊಳ್ಳಲಿವೆ.

'ದರ್ಶನ್ ಸಾಡೇ ರಸ್ತೆಯಲ್ಲಿ ದನದ ಬಾಡು ತಿನ್ನುತ್ತಿದ್ದ ದಿನಗಳನ್ನು ಮರೆತಂತಿದೆ''ದರ್ಶನ್ ಸಾಡೇ ರಸ್ತೆಯಲ್ಲಿ ದನದ ಬಾಡು ತಿನ್ನುತ್ತಿದ್ದ ದಿನಗಳನ್ನು ಮರೆತಂತಿದೆ'

English summary
BJP leader Ashwathnarayan files nomination in Mandya for Lok Sabha elections, but just safety sake. BJP may support Sumalatha in Mandya. Ashwathnarayan may take back his nomination on final day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X