• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಮಹಿಳಾ ಸಂಘಟನೆಗೆ ಒತ್ತುಕೊಟ್ಟ ಕೈ-ಕಮಲ

|

ಮಂಡ್ಯ, ಜುಲೈ 13: ಮಹಿಳೆಯರನ್ನು ಹೆಚ್ಚು ಹೆಚ್ಚಾಗಿ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ತಳಮಟ್ಟದಿಂದಲೇ ಭದ್ರ ಮಾಡಿಕೊಳ್ಳಬಹುದು ಎಂಬ ಸತ್ಯವನ್ನರಿತ ಕಾಂಗ್ರೆಸ್ ಮತ್ತು ಬಿಜೆಪಿ ಮಂಡ್ಯದಲ್ಲಿ ಅಖಾಡಕ್ಕಿಳಿದಿರುವುದು ಎದ್ದು ಕಾಣುತ್ತಿದೆ.

   Rameshwaram - A Spiritual Journey To The Divine Site Of Tamil Nadu | Oneindia Kannada

   ರಾಜ್ಯದಲ್ಲಿ ಇತರೆ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಸಂಘಟನೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಅದು ಈಗಾಗಲೇ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ತಳಮಟ್ಟದಿಂದ ಸಂಘಟನೆಯನ್ನು ಹೇಗೆ ಮಾಡಬೇಕು, ಪಕ್ಷದ ಇತರೆ ಸಮಿತಿಗಳನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಕೂಡ ಪಕ್ಷದ ನಾಯಕರಿಗೆ ಚೆನ್ನಾಗಿಯೇ ಗೊತ್ತಿದೆ. ಈಗಾಗಲೇ ಬಿಜೆಪಿಯ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾಗಳು ಸೇರಿದಂತೆ ಹಲವು ಅಂಗಸಂಸ್ಥೆಗಳು ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

   ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ

    ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ

   ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ

   ಮಂಡ್ಯದಲ್ಲಿ ಇದುವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪ್ರಾಬಲ್ಯ ಸಾಧಿಸಿವೆ. ಅಲ್ಲಿ ರೈತ ಸಂಘ ನೆಲೆಯೂರಲು ಪ್ರಯತ್ನಿಸಿತ್ತಾದರೂ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದ ಬಳಿಕ ಮಂಕಾಯಿತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದ ಜೆಡಿಎಸ್ ಗೆಲುವಿನ ನಗೆ ಬೀರಿತ್ತು. ಇದು ನಮ್ಮ ಭದ್ರಕೋಟೆ ಇಲ್ಲಿಗೆ ಇನ್ನು ಮುಂದೆ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ಲಗ್ಗೆ ಇಡಲ್ಲ ಎಂಬ ನಂಬಿಕೆ ಅವರಲ್ಲಿತ್ತು.

    ಮಹಿಳೆಯರನ್ನು ಸಂಘಟಿಸುವ ಪ್ರಯತ್ನ

   ಮಹಿಳೆಯರನ್ನು ಸಂಘಟಿಸುವ ಪ್ರಯತ್ನ

   ಈಗ ಮಂಡ್ಯ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗಳು ನಡೆದಿವೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಪಡೆಯುವ ಮೂಲಕ ಹಲವಾರು ಮಹಿಳೆಯರಲ್ಲಿ ರಾಜಕೀಯದ ಬಯಕೆಯನ್ನು ಚಿಗುರಿಸಿದ್ದಾರೆ. ಇದರಿಂದ ಅಡುಗೆ ಮನೆಗಷ್ಟೆ ಸೀಮಿತರಾಗಿದ್ದ ಮಹಿಳೆಯರು ಮನೆಯಿಂದ ಹೊರಬಂದು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮನಸ್ಸು ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಮಹಿಳೆಯರನ್ನು ಸಂಘಟನೆ ಮಾಡುವ ಮೂಲಕ ಪಕ್ಷ ಬೆಳೆಸುವ ಚಿಂತನೆಯಲ್ಲಿವೆ. ಈಗಾಗಲೇ ಸೋನಿಯಾ ಗಾಂಧಿ ಬ್ರಿಗೇಡ್ ರಾಜ್ಯಾಧ್ಯಕ್ಷರಾಧ ಗೀತಾ ಕದರಮಂಡಲಗಿ ಮಂಡ್ಯಕ್ಕೆ ಬಂದು ಜಿಲ್ಲಾ ಸಮಿತಿಗಳನ್ನು ರಚಿಸಿ ಒಂದಷ್ಟು ಸಲಹೆಗಳನ್ನು ನೀಡಿ ಹೋಗಿದ್ದಾರೆ.

    ಖಾತೆ ತೆರೆದ ಬಿಜೆಪಿಯಲ್ಲಿ ಹುಮ್ಮಸ್ಸು

   ಖಾತೆ ತೆರೆದ ಬಿಜೆಪಿಯಲ್ಲಿ ಹುಮ್ಮಸ್ಸು

   ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಆರ್.ಪೇಟೆಯಿಂದ ಸ್ಪರ್ಧಿಸಿದ್ದ ಕೆ.ಸಿ.ನಾರಾಯಣಗೌಡರು ಗೆಲುವು ಪಡೆಯುವುದರೊಂದಿಗೆ ಬಿಜೆಪಿಯ ಖಾತೆಯನ್ನು ಮೊದಲ ಬಾರಿಗೆ ಮಂಡ್ಯದಲ್ಲಿ ತೆರೆದಿದ್ದಾರೆ. ಇದೀಗ ಕೆ.ಆರ್.ಪೇಟೆಯಿಂದಲೇ ಪಕ್ಷದ ಸಂಘಟನೆ ಆರಂಭವಾಗಿದ್ದು, ಬಿಜೆಪಿ ಕೂಡ ಮಹಿಳೆಯರ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕಂಡು ಬರುತ್ತಿದೆ. ಕೆ.ಆರ್.ಪೇಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರಾಗಿದ್ದು, ಇಲ್ಲಿಂದಲೇ ಬಿಜೆಪಿಯನ್ನು ಗಟ್ಟಿಗೊಳಿಸಿಕೊಂಡು ಮುನ್ನಡೆಯಲು ಹಲವು ಮುಖಂಡರು ನಿರ್ಧರಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿರುವುದರಿಂದ ಮುಂದಿನ ಚುನಾವಣೆ ವೇಳೆ ಇತರೆ ಕ್ಷೇತ್ರಗಳತ್ತ ಸಂಘಟನೆಯನ್ನು ವಿಸ್ತರಿಸಬೇಕಾದರೆ ತಳಮಟ್ಟದಲ್ಲಿ ಮಹಿಳೆಯರ ವಿಶ್ವಾಸ ಗಳಿಸುವುದು ಅಗತ್ಯವಾಗಿದೆ.

    ಬೂತ್ ಮಟ್ಟದಿಂದಲೇ ಸಂಘಟನೆಗೆ ಸೂಚನೆ

   ಬೂತ್ ಮಟ್ಟದಿಂದಲೇ ಸಂಘಟನೆಗೆ ಸೂಚನೆ

   ಬಿಜೆಪಿಯ ಮಹಿಳಾ ಮೋರ್ಚಾವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿರುವ ಬಿಜೆಪಿ ನಾಯಕರು ಮಹಿಳೆಯರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ. ಜತೆಗೆ ಬೂತ್ ಮಟ್ಟದಿಂದಲೇ ಮಹಿಳಾ ಮೋರ್ಚಾವನ್ನು ಬಲಗೊಳಿಸುವಂತೆಯೂ ಸೂಚನೆ ನೀಡಿದ್ದಾರೆ.

   ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದ್ದೇ ಆದರೆ, ಪ್ರತಿಯೊಂದು ಪಕ್ಷದ ನಾಯಕರಿಗೂ ತಳಮಟ್ಟದಿಂದ ಮಹಿಳೆಯರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಹಿಳಾ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚುಗೊಳಿಸಿದರೆ ಮಾತ್ರ ಪಕ್ಷ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ಎಂಬ ಸತ್ಯ ಗೊತ್ತಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಮಂಡ್ಯದಲ್ಲಿ ಅಧಿಕಾರ ಮರುಸ್ಥಾಪನೆ ಅನಿವಾರ್ಯವಾಗಿದೆ. ಹಾಗೆಯೇ ಬಿಜೆಪಿಗೆ ಕ್ಷೇತ್ರಗಳ ವಿಸ್ತರಣೆಯೊಂದಿಗೆ ಭದ್ರವಾಗಿ ನೆಲೆಯೂರುವ ಹಟವೂ ಇದೆ. ಹಾಗಾಗಿ ಇದೆರಡು ಪಕ್ಷಗಳು ಏನೆಲ್ಲ ಕಸರತ್ತು ಮಾಡಬಹುದೋ ಅದೆಲ್ಲವನ್ನು ಮಾಡಲು ತಯಾರಿ ನಡೆಸುತ್ತಿವೆ.

    ರಾಜಕೀಯದತ್ತ ಮಹಿಳೆಯರಿಗೆ ಒಲವು

   ರಾಜಕೀಯದತ್ತ ಮಹಿಳೆಯರಿಗೆ ಒಲವು

   ಮೊದಲಿಗೆ ಹೋಲಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ಮಹಿಳೆಯರು ಕೂಡ ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ತಮ್ಮ ಪಕ್ಷಗಳತ್ತ ಮಹಿಳೆಯರನ್ನು ಎಳೆದು ತರುವುದು ನಾಯಕರಿಗೆ ಕಷ್ಟವಾಗುತ್ತಿಲ್ಲ. ಆದರೆ ಮಹಿಳೆಯರನ್ನು ಪಕ್ಷದತ್ತ ಒಲಿಸಿಕೊಳ್ಳುವುದು ಮಾತ್ರ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹೊಸ ತಂತ್ರಗಳನ್ನು ರೂಪಿಸಲು ಮುಂದಾಗಿದೆ.

   ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡುತ್ತಿರುವ ಜೆಡಿಎಸ್ ಮುಖಂಡರು ಆ ಎರಡು ಪಕ್ಷಗಳಿಗೆ ವಿರುದ್ಧವಾದ ಯಾವ ಪ್ರಯೋಗವನ್ನು ಮಾಡಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

   English summary
   BJP and congress parties emphasizing on women organization at mandya to secure the parties,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X